ವಿಕಿಪೀಡಿಯ:ದಿಕ್ಸೂಚಿ

ಈ ಲೇಖನ ವಿಕಿಪೀಡಿಯ ದಿಕ್ಸೂಚಿಯ ಭಾಗ
ದಿಕ್ಸೂಚಿ ಪುಟಗಳು...

ಮುಖ ಪುಟ
ಸಂಪಾದನೆ
ಅಕ್ಷರ ಜೋಡಣೆ ಮತ್ತು ವಿನ್ಯಾಸ
ವಿಕಿಪೀಡಿಯ ಸಂಪರ್ಕ ಕೊಂಡಿಗಳು
ಸಂಬಂಧಪಟ್ಟ ತಾಣಗಳ ಕೊಂಡಿಗಳು
ಬಾಹ್ಯ ಸಂಪರ್ಕ ಕೊಂಡಿಗಳು
ಚರ್ಚಾ ಪುಟಗಳು
ಗಮನಿಸಬೇಕಾದ ಸಂಗತಿಗಳು
ನೊಂದಣೆ
ನಾಮ ವರ್ಗಗಳು
ಮುಕ್ತಾಯ

ಇವನ್ನೂ ನೋಡಿ...

ಸಹಾಯ ಪುಟಗಳು

ವಿಕಿಪೀಡಿಯ ದಿಕ್ಸೂಚಿಗೆ ಸ್ವಾಗತ. ವಿಕಿಪೀಡಿಯ ಕನ್ನಡ ವಿಶ್ವಕೋಶ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಒಟ್ಟುಗೂಡಿಸಲು ನಿರ್ಮಿಸಲಾಗಿರುವ, ಎಲ್ಲರೂ ಬಳಸಬಲ್ಲಂತ ಮತ್ತು ಎಲ್ಲರೂ ಬದಲಾವಣೆ ಮಾಡಬಹುದಾದಂತಹ ಒಂದು ಮುಕ್ತ ವಿಶ್ವಕೋಶ. ವಿಕಿಪೀಡಿಯ ವಿಶ್ವಕೋಶವನ್ನು ಸುಲಭವಾಗಿ ನೀವೂ ಸಹ ಬಳಸಿ ಬೆಳಸುವಂತೆ ಮಾಡುವುದೇ ಈ ದಿಕ್ಸೂಚಿಯ ಉದ್ದೇಶ.

ಈ ದಿಕ್ಸೂಚಿಯ ಪ್ರತಿಯೊಂದು ಪುಟವು ವಿಕಿ ತಂತ್ರಾಂಶದ ವಿಶೇಷ ಲಕ್ಷಣಗಳು ಅಥವಾ ವಿಕಿಪೀಡಿಯ ಕಾರ್ಯನೀತಿಗಳು ಅಥವಾ ಸಾಮಾನ್ಯವಾಗಿ ಅನುಸರಿಸುವ ಪದ್ದತಿಗಳು ಅಥವಾ ವಿನ್ಯಾಸ ಶೈಲಿಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತದೆ.

ಗಮನಿಸಬೇಕಾದ ಸಂಗತಿಯೆಂದರೆ, ಇದು ಸ್ಪಷ್ಟ ಕಾರ್ಯನೀತಿ ವಿವರಿಸುವ ಮಾಹಿತಿ ಪುಟವೂ ಅಲ್ಲ ಅಥವಾ ವಿಸ್ತೃತ ಕೈಪಿಡಿಯೂ ಅಲ್ಲ. ಇದು ಕೇವಲ ಸಂಕ್ಷಿಪ್ತ ದಿಕ್ಸೂಚಿ. ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ಸಹಾಯ ಪುಟಗಳನ್ನು ನೋಡಿ. ಈ ದಿಕ್ಸೂಚಿಯಲ್ಲಿ ಕೆಲ ಇತರ ವಿಕಿಪೀಡಿಯ ಪುಟಗಳಿಗೆ ಸಂಪರ್ಕವಿರುತ್ತದೆ. ಆ ಪುಟಗಳನ್ನೂ ಒದಿಕೊಂಡಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದಂತಾಗುತ್ತದೆ. ಬೇಕಿದ್ದಲ್ಲಿ ಪ್ರತ್ಯೇಕ ಕಿಟಕಿಯಲ್ಲಿ ಆ ಪುಟಗಳನ್ನು ತೆಗದು ವೀಕ್ಷಿಸಬಹುದು.

ಕಲಿತದ್ದನ್ನು ಅಭ್ಯಾಸಿಸಲು ಪ್ರಯೋಗ ಶಾಲೆಗೆ ಸಂಪರ್ಕ ಕಲ್ಪಿಸಲಾಗಿರುವುದು. ಪ್ರಯೋಗ ಶಾಲೆಯಲ್ಲಿ ನಿಶ್ಚಿಂತರಾಗಿ ಯಾರಿಗೂ ತೊಂದರೆಯಾಗದಂತೆ ನೀವು ನಿಮ್ಮ ಪ್ರಯೋಗಗಳನ್ನು/ಅಭ್ಯಾಸಗಳನ್ನು ನಡೆಸಬಹುದು.

ಸೂಚನೆ: ಈ ದಿಕ್ಸೂಚಿ ವಿವರ ನೀಡುವಾಗ ಸಾಮಾನ್ಯ ಬಳಕೆಯ ಹಾಗು ಅಂತರ್ಜಾತವಾಗಿ ಬರುವ ಪುಟ ವಿನ್ಯಾಸವನ್ನು ದೃಷ್ಟಿಕೋಣದಲ್ಲಿ ಇರಿಸಿರುತ್ತದೆ. ನೀವು ಲಾಗಿನ್ ಆಗಿದ್ದು ಮತ್ತು ನಿಮ್ಮ ವಿನ್ಯಾಸ ಸಂಬಂಧಿತ ಆಯ್ಕೆಗಳನ್ನು ಬದಲಿಸಿದ ಪಕ್ಷದಲ್ಲಿ ಕೆಲವು ಉಲ್ಲೇಖಿತ ಸಂಪರ್ಕ ಕೊಂಡಿಗಳು ವಿವರಿಸಿದ ಸ್ಥಳದಲ್ಲಿರದೆ ಬೇರೆ ಸ್ಥಾನದಲ್ಲಿ ಕಾಣಿಸಕೊಳ್ಳಬಹುದು.


ಈ ಪೀಠಿಕೆಯೊಂದಿಗೆ ಮೊದಲನೆ ಅಧ್ಯಾಯ ಶುರು ಮಾಡೋಣವೆ?