ವಿಷಯಕ್ಕೆ ಹೋಗು

ಗೂಗಲ್ ಆಡ್ಸೆನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೭:೪೮, ೧೩ ಜುಲೈ ೨೦೨೪ ರಂತೆ InternetArchiveBot (ಚರ್ಚೆ | ಕಾಣಿಕೆಗಳು) ಇವರಿಂದ (Rescuing 1 sources and tagging 0 as dead.) #IABot (v2.0.9.5)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

Qಆಡ್ಸೆನ್ಸ್ ಎಂಬುದು ಗೂಗಲ್ Inc.ನ ಮೇಲ್ವಿಚಾರಣೆಯಲ್ಲಿರುವ ಜಾಹಿರಾತು ಸೇವಾ ಅಳವಡಿಕೆಯಾಗಿದೆ. ವೆಬ್ಸೈಟ್ ಮಾಲೀಕರು, ತಮ್ಮ ವೆಬ್ಸೈಟ್ ಗಳಲ್ಲಿ ವಸ್ತು-ವಿಷಯ, ಚಿತ್ರ, ಹಾಗು ವಿಡಿಯೋ ಜಾಹಿರಾತುಗಳು ಪ್ರಕಟಗೊಳ್ಳಲು ಈ ಪ್ರೊಗ್ರಾಮ್ ನಲ್ಲಿ ದಾಖಲು ಮಾಡಬಹುದು. ಈ ಜಾಹಿರಾತುಗಳನ್ನು ಗೂಗಲ್ ಮೇಲ್ವಿಚಾರಣೆ ಮಾಡುವುದರ ಜೊತೆಗೆ ಪರ್-ಕ್ಲಿಕ್(ಒಂದು ಬಾರಿ ಗುಂಡಿಯನ್ನು ಕ್ಲಿಕ್ಕಿಸಿದರೆ) ಅಥವಾ ಪರ್-ಇಂಪ್ರೆಷನ್(ಪ್ರತಿ ಅಂಕಣ)ಆಧಾರದ ಮೇಲೆ ವಿಧಿಸಿದ ಶುಲ್ಕದ ಮೂಲಕ ಆದಾಯ ಗಳಿಸುತ್ತದೆ. ಗೂಗಲ್, ಪ್ರತಿ ಕಾರ್ಯಕ್ಕೆ ದರ ದ ಆಧಾರಿತ ಸೇವೆ ಒದಗಿಸುವ ಬಗ್ಗೆ ಎರಡನೇ ಬಾರಿಗೆ ಪರೀಕ್ಷೆಗೆ ಒಳಪಟ್ಟಿತು, ಆದರೆ, ಡಬಲ್ ಕ್ಲಿಕ್(ಎರಡು ಬಾರಿ ಕ್ಲಿಕ್ಕಿಸುವುದು)ನ ಸೌಲಭ್ಯವನ್ನು ಒದಗಿಸುವ ಸಲುವಾಗಿ ಇದರ ಬಳಕೆಯನ್ನು ಅಕ್ಟೋಬರ್ ೨೦೦೮ರಲ್ಲಿ ನಿಲ್ಲಿಸಲಾಯಿತು.(ಡಬಲ್ ಕ್ಲಿಕ್ ಸಹ ಗೂಗಲ್ ನ ಒಡೆತನದಲ್ಲಿದೆ).[] ಗೂಗಲ್, Q೧ ೨೦೧೦ರಲ್ಲಿ US$೨.೦೪ ಶತಕೋಟಿ ಆದಾಯ ಗಳಿಸಿತು.(ವಾರ್ಷಿಕ $೮.೧೬ ಶತಕೋಟಿ), ಅಥವಾ ಆಡ್ಸೆನ್ಸ್ ಮೂಲಕ ೩೦%ನಷ್ಟು ಒಟ್ಟಾರೆ ವರಮಾನ ದಾಖಲಾಗಿತ್ತು.[]

ಸ್ಥೂಲ ಅವಲೋಕನ

[ಬದಲಾಯಿಸಿ]

ವೆಬ್ಸೈಟ್ ವಿಷಯ, ಬಳಕೆದಾರನ ಭೌಗೋಳಿಕ ನೆಲೆ, ಹಾಗು ಇತರ ಅಂಶಗಳನ್ನು ಆಧರಿಸಿದ ಜಾಹಿರಾತು ಸೇವೆ ಒದಗಿಸಲು ಗೂಗಲ್ ತನ್ನ ಅಂತರಜಾಲ ಶೋಧನಾ ತಂತ್ರಜ್ಞಾನ ಬಳಸುತ್ತದೆ. ಗೂಗಲ್ ನ ಉದ್ದೇಶಿತ ಜಾಹಿರಾತು ಸೇವೆಯಲ್ಲಿ ತಮ್ಮ ಜಾಹಿರಾತನ್ನು ಪ್ರಕಟಿಸಲು ಬಯಸುವವರು ಆಡ್ವರ್ಡ್ಸ್ ಮೂಲಕ ದಾಖಲು ಮಾಡಿಕೊಳ್ಳಬಹುದು. ಆಡ್ಸೆನ್ಸ್, ವೆಬ್ಸೈಟ್ ನಲ್ಲಿ ಜಾಹಿರಾತುಗಳನ್ನು ಪ್ರಕಟಿಸುವ ಒಂದು ಜನಪ್ರಿಯ ವಿಧಾನವಾಗಿದೆ, ಏಕೆಂದರೆ ಹೆಚ್ಚಿನ ಬ್ಯಾನರ್ ಗಳಿಗಿಂತ ಜಾಹಿರಾತುಗಳು ಕಡಿಮೆ ಪ್ರಮಾಣದಲ್ಲಿ ಅತಿಕ್ರಮಣಕಾರಿಯಾಗಿರುತ್ತವೆ, ಜೊತೆಗೆ ಜಾಹಿರಾತಿನ ವಿಷಯವು ಸಾಮಾನ್ಯವಾಗಿ ವೆಬ್ಸೈಟ್ ಗೆ ಸುಸಂಬದ್ಧವಾಗಿರುತ್ತದೆ.

ಹಲವು ವೆಬ್ಸೈಟ್ ಗಳು ತಮ್ಮ ವಿಷಯವನ್ನು ತಿಳಿಯಪಡಿಸಲು ಆಡ್ಸೆನ್ಸ್ ನ್ನು ಬಳಸುತ್ತವೆ; ಇದು ಅತ್ಯಂತ ಜನಪ್ರಿಯ ಜಾಹಿರಾತು ನೆಟ್ವರ್ಕ್ (ಜಾಲ)ಆಗಿದೆ. ಆಡ್ಸೆನ್ಸ್ ವಿಶೇಷವಾಗಿ, ಜಾಹಿರಾತು ಪ್ರಚಾರ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿರದ ಹಾಗು ಮಾರಾಟ ಪ್ರತಿನಿಧಿಗಳಿಲ್ಲದ ಸಣ್ಣ ವೆಬ್ಸೈಟ್ ಗಳಿಗೆ ಜಾಹೀರಾತು ವರಮಾನದ ಅವಕಾಶವನ್ನು ಪ್ರಕಟಿಸುವಲ್ಲಿ ಪ್ರಮುಖವಾಗಿದೆ. ಚರ್ಚಿಸಲಾದ ವಿಷಯಗಳಿಗೆ ಸಂಬದ್ಧವಾದ ಜಾಹಿರಾತುಗಳಿಂದ ವೆಬ್ಸೈಟ್ ನ್ನು ಭರ್ತಿ ಮಾಡಬೇಕಾದರೆ, ವೆಬ್ ಪರಿಣಿತರು, ವೆಬ್ಸೈಟ್ ಗಳ ಪುಟಗಳಲ್ಲಿ ಸಂಕ್ಷಿಪ್ತ ಬರಹಗಳಿಂದ ಸಜ್ಜುಗೊಳಿಸಿರುತ್ತಾರೆ. ಬಹಳಷ್ಟು ವಿಷಯಗಳಿಂದ ಕೂಡಿದ ವೆಬ್ಸೈಟ್ ಗಳು ಈ ಜಾಹೀರಾತು ಕಾರ್ಯಕ್ರಮದಿಂದ ಬಹಳ ಯಶಸ್ವಿಯಾಗಿವೆ. ಇದರ ಬಗ್ಗೆ ಉಲ್ಲೇಖವನ್ನು ಆಡ್ಸೆನ್ಸ್ ವೆಬ್ಸೈಟ್ ನಲ್ಲಿರುವ ಹಲವಾರು ಮುದ್ರಕರ ವಿಶ್ಲೇಷಣೆಯಲ್ಲಿ ಕಾಣಬಹುದು.

ಕೆಲವು ವೆಬ್ ಪರಿಣಿತರು, ತಮ್ಮ ಸ್ವಂತ ಆಡ್ಸೆನ್ಸ್ ಆದಾಯವನ್ನು ಹೆಚ್ಚಿಸಿಕೊಳ್ಳಲು ಮಹತ್ವದ ಪ್ರಯತ್ನದಲ್ಲಿ ತೊಡಗುತ್ತಾರೆ. ಅವರು ಆದಾಯ ಹೆಚ್ಚಿಸಿಕೊಳ್ಳಲು ಮೂರು ಮಾರ್ಗಗಳನ್ನು ಅನುಸರಿಸುತ್ತಾರೆ:[ಸೂಕ್ತ ಉಲ್ಲೇಖನ ಬೇಕು]

  1. ಅವರು ವ್ಯಾಪಕ ಶ್ರೇಣಿಯಲ್ಲಿ ಸಂಪರ್ಕವನ್ನು ಹುಟ್ಟುಹಾಕುವ ತಂತ್ರಗಳನ್ನು ಬಳಸುತ್ತಾರೆ. ಇದರಲ್ಲಿ ಆನ್ಲೈನ್ ಜಾಹಿರಾತು ಪ್ರಕಟಣೆಯು ಒಳಗೊಂಡಿದ್ದರೂ ಅಷ್ಟಕ್ಕೇ ಸೀಮಿತವಾಗಿಲ್ಲ.
  2. ಅವರು ತಮ್ಮ ವೆಬ್ಸೈಟ್ ಗಳಲ್ಲಿ ಮಹತ್ವದ ವಿಷಯವನ್ನು ಸೇರಿಸುತ್ತಾರೆ, ಇದು ಆಡ್ಸೆನ್ಸ್ ಜಾಹಿರಾತುಗಳನ್ನು ಆಕರ್ಷಿಸುತ್ತದೆ, ಇವುಗಳನ್ನು ಒಂದೊಮ್ಮೆ ಕ್ಲಿಕ್ಕಿಸಿದರೆ ಇಂತಿಷ್ಟು ಹಣವು ಕಡಿತವಾಗುತ್ತದೆ.
  3. ಅವರು ತಮ್ಮ ವೆಬ್ಸೈಟ್ ಗಳಿಗೆ ಭೇಟಿ ನೀಡುವವರು ಜಾಹಿರಾತುಗಳ ಮೇಲೆ ಕ್ಲಿಕ್ ಮಾಡಲು ಉತ್ತೇಜನ ನೀಡುವಂತಹ ವಿಷಯವಸ್ತುವನ್ನು ಬಳಸುತ್ತಾರೆ. ಕ್ಲಿಕ್ಕಿಸುವ ಪ್ರಮಾಣವನ್ನು ಹೆಚ್ಚಿಸಲು "ನನ್ನ ಆಡ್ಸೆನ್ಸ್ ಜಾಹಿರಾತಿನ ಮೇಲೆ ಕ್ಲಿಕ್ ಮಾಡಿ" ಎಂಬಂತಹ ಪದಗುಚ್ಚಗಳನ್ನು ವೆಬ್ ಪರಿಣಿತರು ಬಳಸದಂತೆ ಗೂಗಲ್ ನಿರೋಧಿಸುತ್ತದೆ ಎಂಬುದನ್ನು ಗಮನಿಸಬೇಕು. ಸ್ವೀಕೃತಗೊಂಡ ಪದಗುಚ್ಛಗಳೆಂದರೆ "ಪ್ರಾಯೋಜಿತ ಕೊಂಡಿಗಳು" ಹಾಗು "ಜಾಹಿರಾತುಗಳು".

ಎಲ್ಲಾ ಆಡ್ಸೆನ್ಸ್ ಆದಾಯದ ಮೂಲವೆಂದರೆ ಆಡ್ವರ್ಡ್ಸ್ ಪ್ರೋಗ್ರಾಮ್, ಬದಲಿಯಾಗಿ ಇದು ವಿಕ್ರೆಯ್(ಹರಾಜಿನ ಮೌಲ್ಯ) ಎರಡನೇ ದರ ಪ್ರಮಾಣದ ಹರಾಜನ್ನು ಒಳಗೊಂಡ ಸಂಕೀರ್ಣ ಬೆಲೆ ಮಾದರಿಯನ್ನು ಆಧರಿಸಿದೆ. ಆಡ್ಸೆನ್ಸ್ ಜಾಹಿರಾತುದಾರನಿಗೆ ಮೊಹರಾದ ಕೋರಿಕೆಯನ್ನು ಸಲ್ಲಿಸುವಂತೆ ಆದೇಶಿಸುತ್ತದೆ.(ಅದೆಂದರೆ., ಸ್ಪರ್ಧಿಗಳು ವೀಕ್ಷಿಸಲಾಗದಂತಹ ಕೋರಿಕೆ). ಇದರ ಜೊತೆಯಲ್ಲಿ, ನೀಡಲಾದ ಯಾವುದೇ ಒಂದು ಆಯ್ಕೆಯ ಮೇಲೆ ಕ್ಲಿಕ್ ಮಾಡಿದ್ದೇ ಆದರೆ, ಜಾಹಿರಾತುದಾರರು ಎರಡನೇ ಅತ್ಯಧಿಕ ಕೋರಿಕೆಗೆ ಮೇಲ್ಪಟ್ಟ ಒಂದೇ ಒಂದು ಹೆಚ್ಚುವರಿ ಕೋರಿಕೆಗೆ ಮಾತ್ರ ಹಣವನ್ನು ಪಾವತಿಸಬೇಕಾಗುತ್ತದೆ. ಗೂಗಲ್ ಪ್ರಸಕ್ತದಲ್ಲಿ ಕಂಟೆಂಟ್ ನೆಟ್ವರ್ಕ್ ಪಾಲುದಾರರೊಂದಿಗೆ ಆಡ್ಸೆನ್ಸ್ ಹುಟ್ಟುಹಾಕಿದ ೬೮%ನಷ್ಟು ಆದಾಯವನ್ನು ಹಂಚಿಕೊಳ್ಳುತ್ತದೆ.[]

ಇತಿಹಾಸ

[ಬದಲಾಯಿಸಿ]

ಒಯಿಂಗೋ, Inc., ಲಾಸ್ ಏಂಜಲಿಸ್ ನ ಖಾಸಗಿ ಒಡೆತನದ ಸಂಸ್ಥೆಯನ್ನು ೧೯೯೮ರಲ್ಲಿ ಗಿಲಾಡ್ ಎಲ್ಬಾಜ್ ಹಾಗು ಆಡಂ ವೆಯಿಸ್ಸ್ಮನ್ ಸ್ಥಾಪಿಸಿದರು. ಒಯಿಂಗೋ ಪದಗಳ ಅರ್ಥಗಳನ್ನು ಆಧರಿಸಿದ ಖಾಸಗಿ ಸ್ವಾಮ್ಯದ ಶೋಧನಾ ಆಲ್ಗರಿದ್ಮ್(ಅರಬ್ಬೀ ಅಂಕಗಣಿತ ಪದ್ಧತಿ) ನ್ನು ಅಭಿವೃದ್ಧಿಪಡಿಸಿತು. ಜೊತೆಗೆ ವರ್ಡ್ ನೆಟ್ ಎಂಬ ಮೂಲ ನಿಘಂಟಿನ ಮೇಲೆ ಇದನ್ನು ರಚನೆ ಮಾಡಿತು, ಇದನ್ನು ಜಾರ್ಜ್ ಮಿಲ್ಲರ್ ನೇತೃತ್ವದ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಅಲ್ಲಿ ಕಳೆದ ೧೫ ವರ್ಷಗಳಿಂದಲೂ ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಿದ್ದರು.[]

ಒಯಿಂಗೋ ೨೦೦೧ರಲ್ಲಿ ಅಪ್ಲೈಡ್ ಸಿಮ್ಯಾನ್ಟಿಕ್ಸ್(ಸಂಸ್ಥೆ) ಎಂದು ಹೆಸರನ್ನು ಬದಲಾವಣೆ ಮಾಡಿಕೊಂಡಿತು,[] ಇದನ್ನು ನಂತರ ಏಪ್ರಿಲ್ ೨೦೦೩ರಲ್ಲಿ ಗೂಗಲ್ ಸಂಸ್ಥೆಯು US$೧೦೨ ದಶಲಕ್ಷಕ್ಕೆ ಸ್ವಾಧೀನಪಡಿಸಿಕೊಂಡಿತು.[]

ಗೂಗಲ್ ಆಡ್ಸೆನ್ಸ್, ೨೦೦೯ರಲ್ಲಿ ಹೊಸ ವೈಶಿಷ್ಟ್ಯತೆಗಳನ್ನು ಒದಗಿಸುವುದಾಗಿ ಪ್ರಕಟಿಸಿತು, ಇದರಲ್ಲಿ "ಪ್ರಕಟಣಾ ಜಾಹಿರಾತುಗಳಿಗೆ ವಿವಿಧ ನೆಟ್ವರ್ಕ್ ಗಳ ಸೌಲಭ್ಯವನ್ನು" ಕಲ್ಪಿಸುವ ಸಾಮರ್ಥ್ಯವೂ ಸೇರಿತ್ತು.

ವಿಧಗಳು

[ಬದಲಾಯಿಸಿ]

ಆಡ್ಸೆನ್ಸ್ ಫಾರ್ ಫೀಡ್ಸ್ (ಪೋಷಕಗಳಿಗಾಗಿ ಆಡ್ಸೆನ್ಸ್)

[ಬದಲಾಯಿಸಿ]

ಮೇ ೨೦೦೫ರಲ್ಲಿ, ಗೂಗಲ್, ಸೀಮಿತ-ಸಹಯೋಗದ ಆಡ್ಸೆನ್ಸ್ ಫಾರ್ ಫೀಡ್ಸ್ ನ ಎರಡನೇ ರೂಪಾಂತರವನ್ನು ಪ್ರಕಟಿಸಿತು. ಇದು RSS ಹಾಗು ಆಟಂ ಅನ್ನು ಆಧರಿಸಿ ನಿರ್ವಹಿಸಲ್ಪಡುವ ಆಡ್ಸೆನ್ಸ್ ನ ರೂಪಾಂತರವಾಗಿದೆ, ಇದರಲ್ಲಿ ೧೦೦ಕ್ಕೂ ಅಧಿಕ ಸಕ್ರಿಯ ಚಂದಾದಾರರಿದ್ದಾರೆ. ಅಧಿಕೃತ ಗೂಗಲ್ ಬ್ಲಾಗ್ ನ ಪ್ರಕಾರ, "ಜಾಹಿರಾತುದಾರರು ತಮ್ಮ ಜಾಹಿರಾತುಗಳನ್ನು ಅತ್ಯಂತ ಸೂಕ್ತವಾದ ಸೂಚಕ ಲೇಖನಗಳಲ್ಲಿ ಗುರುತಿಸಬಹುದು; ಪ್ರಕಟಣೆದಾರರಿಗೆ ತಮ್ಮ ಮೂಲ ವಿಷಯಕ್ಕೆ ಹಣ ಸಂದಾಯ ಮಾಡಲಾಗುತ್ತದೆ; ವೀಕ್ಷಕರು ಸುಸಂಬದ್ಧವಾದ ಜಾಹಿರಾತನ್ನು ನೋಡುತ್ತಾರೆ-ಜೊತೆಗೆ ದೀರ್ಘಾವಧಿಯಲ್ಲಿ, ಹೆಚ್ಚಿನ ಗುಣಮಟ್ಟದ ಸೂಚಕಗಳು ಆಯ್ಕೆಗೆ ದೊರಕುತ್ತವೆ."[]

ಆಡ್ಸೆನ್ಸ್ ಫಾರ್ ಫೀಡ್ಸ್, ಸೂಚಕಕ್ಕೆ ಚಿತ್ರಗಳನ್ನು ಅಳವಡಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. RSS ವೀಕ್ಷಕ ಅಥವಾ ವೆಬ್ ಬ್ರೌಸರ್ ಚಿತ್ರವನ್ನು ಪ್ರಕಟಿಸಿದಾಗ, ಇದಕ್ಕೆ ಬದಲಿಯಾಗಿ ಪಡೆದ ಚಿತ್ರಕ್ಕೆ ಗೂಗಲ್ ಜಾಹಿರಾತು ವಿಷಯಗಳನ್ನು ಬರೆಯುತ್ತದೆ. ಜಾಹಿರಾತು ವಿಷಯವನ್ನು, ಚಿತ್ರದ ಸುತ್ತ ಸೂಚಕದ ವಿಷಯವನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಚಿತ್ರದ ಮೇಲೆ ಬಳಕೆದಾರನು ಕ್ಲಿಕ್ಕಿಸಿದಾಗ, ಆತ ಅಥವಾ ಆಕೆ, ಸಾಮಾನ್ಯವಾದ ಆಡ್ಸೆನ್ಸ್ ಜಾಹಿರಾತುಗಳ ಮಾದರಿ, ಜಾಹಿರಾತುದಾರನ ವೆಬ್ಸೈಟ್ ಗೆ ಪುನರ್ನಿರ್ದೇಶನವನ್ನು ಪಡೆಯುತ್ತಾರೆ.

ಆಡ್ಸೆನ್ಸ್ ಫಾರ್ ಫೀಡ್ಸ್, ಆಗಸ್ಟ್ ೧೫, ೨೦೦೮ರವರೆಗೆ ಎಲ್ಲ ಆಡ್ಸೆನ್ಸ್ ಬಳಕೆದಾರರಿಗೆ ಲಭ್ಯವಾಗತೊಡಗಿದಾಗ ಎರಡನೇ ಹಂತದಲ್ಲಿ ಹಾಗೆ ಉಳಿದಿತ್ತು.

ಆಡ್ಸೆನ್ಸ್ ಫಾರ್ ಸರ್ಚ್(ಶೋಧನೆಗಾಗಿ ಆಡ್ಸೆನ್ಸ್)

[ಬದಲಾಯಿಸಿ]

ಸಾಧಾರಣ ಆಡ್ಸೆನ್ಸ್ ಪ್ರೋಗ್ರಾಮ್ ನ್ನು ಹೋಲುವ ಆಡ್ಸೆನ್ಸ್ ಫಾರ್ ಸರ್ಚ್ , ವೆಬ್ಸೈಟ್ ಮಾಲಿಕರಿಗೆ ತಮ್ಮ ವೆಬ್ಸೈಟ್ ಗಳ ಮೇಲೆ ಗೂಗಲ್ ಶೋಧನಾ ಆವರಣವನ್ನು ಇರಿಸಲು ಅವಕಾಶ ಮಾಡಿಕೊಡುತ್ತದೆ. ಬಳಕೆದಾರನು ಅಂತರಜಾಲವನ್ನು ಅಥವಾ ವೆಬ್ಸೈಟ್ ನಲ್ಲಿ ಶೋಧನಾ ಆವರಣವನ್ನು ಶೋಧಿಸಿದಾಗ, ಗೂಗಲ್, ವೆಬ್ಸೈಟ್ ನ ಮಾಲಿಕರೊಂದಿಗೆ ಆ ಜಾಹಿರಾತು ಶೋಧನೆಗಳಿಂದ ೫೧%ನಷ್ಟು ಆದಾಯವನ್ನು ಹಂಚಿಕೊಳ್ಳುತ್ತದೆ.[] ಆದಾಗ್ಯೂ, ಪುಟದಲ್ಲಿರುವ ಜಾಹಿರಾತನ್ನು ಕ್ಲಿಕ್ಕಿಸಿದಾಗ ಮಾತ್ರ ಪ್ರಕಟನಕಾರನು ಹಣವನ್ನು ಪಡೆಯುತ್ತಾನೆ; ಆಡ್ಸೆನ್ಸ್ ಕೇವಲ ಶೋಧನೆಗಳಿಗೆ ಮಾತ್ರ ಪ್ರಕಟನಕಾರನಿಗೆ ಹಣವನ್ನು ನೀಡುವುದಿಲ್ಲ.

ಆಡ್ಸೆನ್ಸ್ ಫಾರ್ ಮೊಬೈಲ್ ಕಂಟೆಂಟ್(ಮೊಬೈಲ್ ಅಂಶದ ವಿಷಯಗಳಿಗೆ ಆಡ್ಸೆನ್ಸ್)

[ಬದಲಾಯಿಸಿ]

ಮೊಬೈಲ್ ವಿಷಯಗಳಿಗೆ ಆಡ್ಸೆನ್ಸ್, ಪ್ರಕಟನಕಾರರಿಗೆ ಉದ್ದೇಶಿತ ಗೂಗಲ್ ಜಾಹಿರಾತುಗಳನ್ನು ಬಳಸಿಕೊಂಡು ಮೊಬೈಲ್ ವೆಬ್ಸೈಟ್ ಗಳಿಂದ ಆದಾಯ ಗಳಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಮಾಹಿತಿಗಾಗಿ ಆಡ್ಸೆನ್ಸ್ ನ ಮಾದರಿ, ಗೂಗಲ್, ವೆಬ್ಸೈಟ್ ನ ವಿಷಯಕ್ಕೆ ಜಾಹಿರಾತುಗಳನ್ನು ಹೊಂದಾಣಿಕೆ ಮಾಡುತ್ತದೆ - ಈ ಸಂದರ್ಭದಲ್ಲಿ, ಒಂದು ಮೊಬೈಲ್ ವೆಬ್ಸೈಟ್ ನೊಂದಿಗೆ ಹೊಂದಾಣಿಕೆಯಾಗುತ್ತದೆ.

ಆಡ್ಸೆನ್ಸ್ ಫಾರ್ ಡೊಮೈನ್ಸ್ (ಸ್ಥಾನಿಕ-ಪ್ರಾದೇಶಿಕ ಜಾಹೀರಾತುಗಳಿಗಾಗಿ)

[ಬದಲಾಯಿಸಿ]

ಆಡ್ಸೆನ್ಸ್ ಫಾರ್ ಡೊಮೈನ್ಸ್, ಇನ್ನು ಅಭಿವೃದ್ಧಿಯಾಗದ ಡೊಮೈನ್ ಹೆಸರುಗಳಲ್ಲೇ ಜಾಹಿರಾತುಗಳನ್ನು ಪ್ರಕಟಿಸಲು ಅವಕಾಶ ಮಾಡಿಕೊಡುತ್ತದೆ. ಇದು ಡೊಮೈನ್ ಹೆಸರುಳ್ಳ ಮಾಲೀಕರಿಗೆ ಒಂದು ರೀತಿಯಲ್ಲಿ ಡೊಮೈನ್ ಹೆಸರುಗಳನ್ನು ಗೊತ್ತುಪಡಿಸುವ ಆಯ್ಕೆಯನ್ನು ನೀಡುತ್ತದೆ. ಉಳಿದಂತೆ ಇವುಗಳು ಪ್ರಕಟಗೊಳ್ಳುವುದಿಲ್ಲ. ಆಡ್ಸೆನ್ಸ್ ಫಾರ್ ಡೊಮೈನ್ಸ್ ಗಳನ್ನು ಪ್ರಸಕ್ತದಲ್ಲಿ ಕೆಲವು ಬಳಕೆದಾರರಿಗೆ ನೀಡಲಾಗುತ್ತಿದೆ; ಜೊತೆಗೆ ಹಂತಹಂತವಾಗಿ ಎಲ್ಲರಿಗೂ ಇದು ಲಭ್ಯವಾಗುವಂತೆ ಮಾಡುವ ಉದ್ದೇಶ ಹೊಂದಿದೆ.

ಡಿಸೆಂಬರ್ ೧೨, ೨೦೦೮ರಲ್ಲಿ, ಟೆಕ್ ಕ್ರಂ ಚ್, ಆಡ್ಸೆನ್ಸ್ ಫಾರ್ ಡೊಮೈನ್ಸ್ ಎಲ್ಲ US ಪ್ರಕಟನಕಾರರಿಗೆ ಲಭ್ಯವಿದೆಯೆಂದು ವರದಿ ಮಾಡಿತು.[]

ಆಡ್ಸೆನ್ಸ್ ಫಾರ್ ವಿಡಿಯೋ

[ಬದಲಾಯಿಸಿ]

ಆಡ್ಸೆನ್ಸ್ ಫಾರ್ ವಿಡಿಯೋ, ದೃಶ್ಯಸಹಿತ (ದೃಶ್ಯಮಾಧ್ಯಮ)ಜಾಹಿರಾತನ್ನು ಪ್ರಕಟಿಸುವವರಿಗೆ, ಜನಪ್ರಿಯ ಯೂಟ್ಯೂಬ್ ದೃಶ್ಯಾವಳಿಗಳನ್ನು ಒಳಗೊಂಡಂತೆ ಗೂಗಲ್ ನ ವ್ಯಾಪಕ ಜಾಹಿರಾತು ನೆಟ್ವರ್ಕ್(ಜಾಲದಲ್ಲಿ) ನಲ್ಲಿ ಜಾಹಿರಾತನ್ನು ಪ್ರಕಟಿಸಿ ಆದಾಯ ಗಳಿಸಲು ಅವಕಾಶ ನೀಡುತ್ತದೆ.[]

XHTML ಹೊಂದಾಣಿಕೆ

[ಬದಲಾಯಿಸಿ]

ಸೆಪ್ಟೆಂಬರ್ ೨೦೦೭ರವರೆಗೂ, ಆಡ್ಸೆನ್ಸ್ ಶೋಧನಾ ಆವರಣಕ್ಕೆ HTML ಸಂಕೇತವು, XHTML ಎಂದು ಕ್ರಮಬದ್ಧಗೊಂಡಿರಲಿಲ್ಲ, ಜೊತೆಗೆ ಇದರ ಬಳಕೆಯಿಂದಾಗಿ ಇದು ಆಧುನಿಕ ವೆಬ್ಸೈಟ್ ವಿನ್ಯಾಸದ ಸಿದ್ಧಾಂತಗಳನ್ನು ಅನುಸರಿಸುವುದಿಲ್ಲ

  • ಸ್ಟ್ಯಾಂಡರ್ಡ್ ಅಲ್ಲದ ಕೊನೆಯ ಟ್ಯಾಗ್ ಗಳು(ಒಂದು ದತ್ತಾಂಶದ ಬಾಬನ್ನು ಮುಂದೆ ಮತ್ತೆ ಪಡೆಯಲು ಅದರ ಮಾದರಿಯಿಂದ ಗುರುತಿಸು), ಉದಾಹರಣೆಗೆ </img> ಹಾಗು </input>,
  • checked="checked" ಎನ್ನುವುದಕ್ಕಿಂತ ಹೆಚ್ಚಾಗಿ checked ನ ಗುರುತುಗಳ ಬಳಕೆ,
  • id, ಕ್ಲಾಸ್, ಅಥವಾ ಸ್ಟೈಲ್ ನ್ನು ಹೊರತುಪಡಿಸಿ ಪ್ರದರ್ಶನಾಶೈಲಿಯ ಗುರುತುಗಳು - ಉದಾಹರಣೆಗೆ, bgcolor ಹಾಗು ಅಲೈನ್
  • ಸಂಪೂರ್ಣವಾಗಿ ಪ್ರದರ್ಶನಾಶೈಲಿಯ ಉದ್ದೇಶಗಳಿಗಾಗಿ ಒಂದು ಕೋಷ್ಟಕ ಮಾದರಿ (ಅದೆಂದರೆ., ಕೊಷ್ಟಕವಲ್ಲದ ಮಾದರಿ), ಹಾಗು
  • the ಫಾಂಟ್ ಟ್ಯಾಗ್.

೧: ಅನುದ್ದೇಶಿತ ಕಾರ್ಯಗಳಿಗೆ ಕೋಷ್ಟಕ ವಿಧಾನ ಬಳಸುವುದನ್ನು W೩C ಬಲವಾಗಿ ವಿರೋಧಿಸುತ್ತದೆ,[೧೦] ಅದೇನೇ ಇದ್ದರೂ, ಒಂದು ದತ್ತಾಂಶವು ಕ್ರಮಬದ್ಧಗೊಳ್ಳುವುದರಲ್ಲಿ ವಿಫಲತೆ ಹೊಂದುವುದನ್ನು ತಡೆಯುತ್ತದೆ - ಒಂದು ಕೋಷ್ಟಕವು "ಸರಿಯಾಗಿ" ಬಳಕೆಯಾಗುತ್ತಿದೆಯೇ ಎಂಬುದನ್ನು ನಿರ್ಧರಿಸಲು ಪ್ರಸಕ್ತದಲ್ಲಿ ಯಾವುದೇ ಒಂದು ಆಲ್ಗರಿದ್ಮ್ ವಿಧಾನವಿಲ್ಲ(ಬ್ರೌಸರ್ ವಿಂಡೋ ಮರುಆಕಾರಗೊಂಡಾಗ ಪ್ರಮಾಣಾನುಗುಣವಾಗಿ ಅಗಲವಾಗಿ ಅಥವಾ ಉದ್ದವಾಗುವ ಕೋಷ್ಟಕದ ದತ್ತಾಂಶವನ್ನು ಪ್ರಕಟಿಸಲು ಅಥವಾ ಅಂಶಗಳನ್ನು ಪ್ರಕಟಿಸಲು ಸಕ್ರಿಯವಾದ ಕ್ಲೈಂಟ್ ಸೈಡ್ ಸ್ಕ್ರಿಪ್ಟಿಂಗ್ ಇಲ್ಲದೆ ಪ್ರಕಟಿಸಬಹುದು)
೨: ಫಾಂಟ್ ಟ್ಯಾಗ್ ಅಸಮ್ಮತವಾಗುತ್ತಾದರೂ, ಯಾವುದೇ XHTML ಪ್ರಮಾಣಕ ಕ್ರಮಬದ್ಧಗೊಳ್ಳುವುದರಲ್ಲಿ ವಿಫಲತೆ ಹೊಂದುವುದನ್ನು ತಡೆಯುತ್ತದೆ[ಸೂಕ್ತ ಉಲ್ಲೇಖನ ಬೇಕು].

ಇದರ ಜೊತೆಯಲ್ಲಿ, ಆಡ್ಸೆನ್ಸ್ ಜಾಹಿರಾತು ತಂಡವು ಜಾವಾಸ್ಕ್ರಿಪ್ಟ್ ವಿಧಾನ document.write()ನ್ನು ಬಳಕೆ ಮಾಡುತ್ತದೆ, ಇದು ಅಳವಡಿಕೆಯ ಸೂತ್ರ application/xhtml+xml MIME ಮಾದರಿಯಲ್ಲಿ ಬಳಸಿದಾಗ ಇದು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ತಂಡಗಳು iframe HTML ಟ್ಯಾಗ್ ನ್ನೂ ಸಹ ಬಳಸುತ್ತವೆ, ಇದು XHTML ೧.೦ ಸ್ಟ್ರಿಕ್ಟ್ ಅಥವಾ XHTML ೧.೦ ಟ್ರ್ಯಾನ್ಸಿಶನಲ್ DOCTYPEs ಗಳೊಂದಿಗೆ ಸರಿಯಾದ ರೀತಿಯಲ್ಲಿ ಕ್ರಮಬದ್ಧಗೊಳ್ಳುವುದಿಲ್ಲ.

ಆಡ್ಸೆನ್ಸ್ ಪ್ರೋಗ್ರಾಮ್ ನ ನಿಯಮಗಳು ಅದರ ಅಂಗಗಳು ಸಂಕೇತ ಮಾರ್ಪಡಿಸುವುದನ್ನು ನಿಷೇಧಿಸುತ್ತವೆ, ಈ ರೀತಿಯಾಗಿ ಇದರಲ್ಲಿ ಪಾಲ್ಗೊಳ್ಳುವವರು ಸರಿಯಾದ XHTML ವೆಬ್ಸೈಟ್ ಗಳನ್ನು ಹೊಂದುವುದನ್ನು ನಿರ್ಬಂಧಿಸಲಾಗಿದೆ.

ಆದಾಗ್ಯೂ, ಕೇವಲ ಆಡ್ಸೆನ್ಸ್ ಜಾಹಿರಾತು ತಂಡಗಳನ್ನು ಒಳಗೊಂಡ ಪ್ರತ್ಯೇಕ HTML ವೆಬ್ ಪುಟವನ್ನು ರಚಿಸುವ ಮೂಲಕ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಲಾಗಿದೆ, ಹಾಗು ನಂತರದಲ್ಲಿ ಒಂದು ಆಬ್ಜೆಕ್ಟ್(ನಿರ್ವಹಣೆಯ ವಿವರಣೆ) ಟ್ಯಾಗ್ ನಿಂದ XHTML ವೆಬ್ ಪುಟಕ್ಕೆ ಈ ಪುಟವನ್ನು ತರಿಸಿಕೊಳ್ಳಲಾಗುತ್ತದೆ.[೧೧] ಈ ತಾತ್ಕಾಲಿಕ ಪರಿಹಾರವನ್ನು ಗೂಗಲ್ ಅಂಗೀಕರಿಸಿರುವುದಾಗಿ ಕಂಡು ಬರುತ್ತದೆ.[೧೨]

ಆಡ್ಸೆನ್ಸ್ ಕಾರ್ಯನಿರ್ವಹಿಸುವ ವಿಧಾನ

[ಬದಲಾಯಿಸಿ]
  • ವೆಬ್ ಪರಿಣಿತರು ಆಡ್ಸೆನ್ಸ್ ಜಾವಾಸ್ಕ್ರಿಪ್ಟ್ ಸಂಕೇತವನ್ನು ವೆಬ್ ಪುಟಕ್ಕೆ ಅಳವಡಿಸುತ್ತಾರೆ.
  • ಪ್ರತಿ ಬಾರಿಯೂ ಈ ಪುಟವನ್ನು ವೀಕ್ಷಿಸಿದಾಗಿ, ಜಾವಾಸ್ಕ್ರಿಪ್ಟ್ ಸಂಕೇತವು ಇನ್ಲೈಂಡ್ JSON ಅನ್ನು ಬಳಸಿ ಗೂಗಲ್ ಸರ್ವರ್ ಗಳಿಂದ ಪಡೆದುಕೊಂಡ ವಿಷಯವನ್ನು ಪ್ರಕಟಿಸುತ್ತದೆ.
  • ಸಂದರ್ಭೋಚಿತ ಜಾಹಿರಾತುಗಳಿಗಾಗಿ, ಗೂಗಲ್ ಸರ್ವರ್ ಗಳು, ಉತ್ತಮ ಗುಣಮಟ್ಟದ ಅತಿ ಮುಖ್ಯ ಪದಗಳನ್ನು ನಿರೂಪಿಸಲು ಪುಟದ ಕ್ಯಾಷ್ ನ್ನು(ಗೋಪ್ಯಸ್ಥಾನ) ಬಳಸುತ್ತವೆ. ಮುಖ್ಯಪದಗಳು ಆ ಮೊದಲೇ ಕ್ಯಾಷ್ಡ್ ಆಗಿದ್ದರೆ, ಆಡ್ವರ್ಡ್ಸ್ ಬಿಡ್ಡಿಂಗ್ ವ್ಯವಸ್ಥೆಯನ್ನು ಆಧರಿಸಿ ಆ ಮುಖ್ಯಪದಗಳಿಂದ ಜಾಹಿರಾತುಗಳು ಪ್ರದರ್ಶನಗೊಳ್ಳುತ್ತವೆ. (ಹೆಚ್ಚಿನ ಮಾಹಿತಿಯನ್ನು ಆಡ್ಸೆನ್ಸ್ ಪೇಟೆಂಟ್ Archived 2019-02-19 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ವಿವರಿಸಲಾಗಿದೆ.)
  • ಜಾಲ-ನಿರ್ದೇಶಿತ ಜಾಹಿರಾತುಗಳಿಗಾಗಿ, ಜಾಹಿರಾತುದಾರನು, ಜಾಹಿರಾತುಗಳು ಪ್ರಕಟಗೊಳ್ಳಬೇಕಿರುವ ಪುಟ(ಗಳನ್ನು) ಆಯ್ಕೆ ಮಾಡುತ್ತಾನೆ, ಹಾಗು ಕಾಸ್ಟ್ ಪರ್ ಮಿಲ್ಲೆ(CPM)ಯನ್ನು ಆಧರಿಸಿ ಹಣ ಸಂದಾಯ ಮಾಡುತ್ತಾನೆ, ಅಥವಾ ಹಣವನ್ನು ಸಂದಾಯ ಮಾಡುವ ಜಾಹಿರಾತುದಾರರು ಪ್ರಕಟವಾದ ಪ್ರತಿ ಸಾವಿರ ಜಾಹಿರಾತಿಗೆ ಹಣವನ್ನು ಸಂದಾಯ ಮಾಡುತ್ತಾರೆ.[೧೩][೧೪]
  • ಶಿಫಾರಸು ಪಡೆದ ಜಾಹಿರಾತಿನಲ್ಲಿ, ಪುಟವನ್ನು ವೀಕ್ಷಿಸಿದವರು ಸೂಚಿಸಿದ ಸಾಫ್ಟ್ವೇರ್ ನ್ನು ಡೌನ್ ಲೋಡ್ ಮಾಡಿಕೊಂಡರೆ ಅಥವಾ ಸೂಚಿತ ಸೇವೆಗೆ ಚಂದಾದಾರರಾದರೆ, ಗೂಗಲ್ ಜಾಹಿರಾತುದಾರನ ಖಾತೆಗೆ ಹಣವನ್ನು ತುಂಬಿಸುತ್ತದೆ.[೧೫] ಶಿಫಾರಸು ಕಾರ್ಯಕ್ರಮವನ್ನು ಆಗಸ್ಟ್ ೨೦೦೮ರಲ್ಲಿ ಕೊನೆಗೊಳಿಸಲಾಯಿತು.[೧೬]
  • ವೀಕ್ಷಕನ ಶೋಧನಾ ಕಾರ್ಯ ಮುಗಿದ ನಂತರ ಫಲಿತಾಂಶಗಳ ಪಟ್ಟಿಯಲ್ಲಿ ಶೋಧನಾ ಜಾಹಿರಾತುಗಳನ್ನು ಸೇರಿಸಲಾಗುತ್ತದೆ.
  • ಏಕೆಂದರೆ ಪುಟವನ್ನು ತೆರೆಯಲು ಕೋರಿಕೆ ಬಂದಾಗ ಜಾವಾಸ್ಕ್ರಿಪ್ಟ್ ನ್ನು ವೆಬ್ ಬ್ರೌಸರ್ ಗೆ ಕಳುಹಿಸಲಾಗುತ್ತದೆ, ಇದರಿಂದಾಗಿ ಇತರ ವೆಬ್ಸೈಟ್ ಮಾಲೀಕರು ಜಾವಾಸ್ಕ್ರಿಪ್ಟ್ ಸಂಕೇತವನ್ನು ತಮ್ಮ ವೆಬ್ ಪುಟಗಳಿಗೆ ನಕಲು ಮಾಡಲು ಸಾಧ್ಯವಾಗುತ್ತದೆ. ಈ ರೀತಿಯ ವಂಚನೆಯನ್ನು ತಡೆಗಟ್ಟುವ ಸಲುವಾಗಿ, ಆಡ್ಸೆನ್ಸ್ ಗ್ರಾಹಕರು ಜಾಹಿರಾತುಗಳು ಪ್ರಕಟಗೊಳ್ಳಬೇಕಿರುವ ಪುಟಗಳನ್ನು ಸ್ಪಷ್ಟವಾಗಿ ನಮೂದಿಸಬಹುದು. ಆಡ್ಸೆನ್ಸ್, ಸ್ಪಷ್ಟವಾಗಿ ನಮೂದಿಸಲಾದ ಪುಟಗಳನ್ನು ಹೊರತುಪಡಿಸಿ ಇತರ ಪುಟಗಳ ಮೇಲೆ ಕ್ಲಿಕ್ಕಿಸಿದರೆ ಅಂತಹವುಗಳನ್ನು ಪರಿಗಣಿಸಲಾಗುವುದಿಲ್ಲ.

ದುರುಪಯೋಗ

[ಬದಲಾಯಿಸಿ]

ಕೆಲವು ವೆಬ್ ಪರಿಣಿತರು, ಗೂಗಲ್ ನಲ್ಲಿ ಶೋಧನೆ ಮಾಡುವವರನ್ನು ಆಕರ್ಷಿಸಲು ವೆಬ್ಸೈಟ್ ಗಳನ್ನು ಹಾಗು ಇತರ ಇಂಜಿನ್ ಗಳನ್ನು ತಮ್ಮ ಆಡ್ಸೆನ್ಸ್ ವೆಬ್ಸೈಟ್ ನಲ್ಲಿ ಸೃಷ್ಟಿಸಿರುತ್ತಾರೆ, ಕ್ಲಿಕ್ ನಿಂದ ಹಣವನ್ನು ಗಳಿಸುವುದು ಇವರ ಉದ್ದೇಶವಾಗಿರುತ್ತದೆ. ಈ "ಸೋಂಬಿ"(ಸ್ವಯಂಚಲಿ) ವೆಬ್ಸೈಟ್ ಗಳು ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿ ಪರಸ್ಪರ ಸಂಪರ್ಕ ಹೊಂದಿರುವ, ಸ್ವಯಂಚಾಲಿತ ವಿಷಯವಲ್ಲದೆ ಬೇರೇನನ್ನೂ ಒಳಗೊಂಡಿರುವುದಿಲ್ಲ.(ಉದಾಹರಣೆಗೆ, ಓಪನ್ ಡೈರೆಕ್ಟರಿ ಪ್ರಾಜೆಕ್ಟ್ ನಿಂದ ವಿಷಯವನ್ನು ಪಡೆದುಕೊಂಡಂತಹ ನಿರ್ದೇಶಿಕೆ, ಅಥವಾ RSS ಫೀಡ್ಸ್ ಫಾರ್ ಕಂಟೆಂಟ್ ನ್ನು ಅವಲಂಬಿಸಿರುವ ಸ್ಕ್ರೇಪರ್ ವೆಬ್ಸೈಟ್ ಗಳು). ಬಹುಶಃ ಇಂತಹ "ಆಡ್ಸೆನ್ಸ್ ಫಾರ್ಮ್ಸ್" ಗಳ ಅತ್ಯಂತ ಜನಪ್ರಿಯ ರೂಪವೆಂದರೆ ಸ್ಪ್ಲೊಗ್ಸ್ ಗಳು(ಸ್ಪ್ಯಾಮ್ ಬ್ಲಾಗ್ ಗಳು), ಇವುಗಳು ಅಧಿಕ-ಹಣಗಳಿಸುವ ಅತಿ ಮುಖ್ಯ ಪದಗಳೆಂದು ಕರೆಯಲ್ಪಡುವುದರ ಸುತ್ತ ಕೇಂದ್ರೀಕರಿಸಿವೆ. ಈ ವೆಬ್ಸೈಟ್ ಗಳಲ್ಲಿ ವೀಕ್ಷಕರನ್ನು ಆಕರ್ಷಿಸಲು ಹಲವು ಇತರ ವೆಬ್ಸೈಟ್ ಗಳಿಂದ ವಿಷಯವನ್ನು ಸಂಗ್ರಹಿಸುತ್ತವೆ, ಉದಾಹರಣೆಗೆ ವಿಕಿಪೀಡಿಯ. ಇವುಗಳು ಹಾಗು ಇವುಗಳಿಗೆ ಸಂಬಂಧಿಸಿದ ಸೂಚನೆಗಳನ್ನು ಶೋಧನಾ ಇಂಜಿನ್ ಸ್ಪ್ಯಾಮ್ ಎಂದು ಪರಿಗಣಿಸಲಾಗುತ್ತದೆ ಹಾಗು ಇದನ್ನು ಗೂಗಲ್ ಗೆ ವರದಿ ಮಾಡಬಹುದು. [ಸೂಕ್ತ ಉಲ್ಲೇಖನ ಬೇಕು]

ಮೇಡ್ ಫಾರ್ ಆಡ್ಸೆನ್ಸ್(ಆಡ್ಸೆನ್ಸ್ ಗಾಗೆ ತಯಾರಾದ)(MFA) ವೆಬ್ಸೈಟ್ ಅಥವಾ ವೆಬ್ ಪುಟ ಸ್ವಲ್ಪ ಅಥವಾ ಯಾವುದೇ ವಿಷಯನ್ನು ಒಳಗೊಂಡಿರುವುದಿಲ್ಲ, ಆದರೆ ಇವುಗಳು ಜಾಹಿರಾತುಗಳಿಂದ ಭರ್ತಿಯಾಗಿರುತ್ತವೆ, ಹೀಗಾಗಿ ಬಳಕೆದಾರರಿಗೆ ಈ ಜಾಹಿರಾತುಗಳನ್ನು ಕ್ಲಿಕ್ಕಿಸುವುದನ್ನು ಬಿಟ್ಟು ಬೇರೆ ಉಪಾಯವಿರುವುದಿಲ್ಲ. ಇಂತಹ ಪುಟಗಳನ್ನು ಹಿಂದೆ ಪರಿಗಣಿಸಲಾಗುತ್ತಿತ್ತು, ಆದರೆ ದೂರುಗಳು ಬಂದ ಕಾರಣ, ಗೂಗಲ್ ಇಂತಹ ಖಾತೆ ಗಳನ್ನು ಈಗ ಅನರ್ಹಗೊಳಿಸಿದೆ.

ಟ್ರೋಜನ್ ಹಾರ್ಸಸ್, ಗೂಗಲ್ ಜಾಹಿರಾತುಗಳನ್ನು ಅನುಕರಿಸುವ ಜಾಹಿರಾತುಗಳನ್ನು ತಯಾರಿಸಲು ನಿರ್ದೆಶಿತವಾಗಿದೆಯೆಂಬ ವರದಿಗಳೂ ಸಹ ಇವೆ, ಇವುಗಳು ಕ್ರಮಬದ್ಧವಾದ ಜಾಹಿರಾತುಗಳ ಮಾದರಿಯಲ್ಲಿಯೇ ಸಿದ್ಧಗೊಂಡಿರುತ್ತವೆ. ಟ್ರೋಜನ್ ವೆಬ್ ಪುಟದ ಮೂಲಕ ಅಪರಿಚಿತ ಬಳಕೆದಾರನ ಕಂಪ್ಯೂಟರ್ ನಲ್ಲಿ ಸ್ವತಃ ಅಪ್ ಲೋಡ್ ಆಗುತ್ತವೆ. ಅಲ್ಲದೇ ನಂತರದಲ್ಲಿ ತನ್ನದೇ ಆದ ದುರುದ್ದೇಶಿತ ಜಾಹಿರಾತಿನೊಂದಿಗೆ ಮೂಲ ಜಾಹಿರಾತಿನ ಸ್ಥಾನವನ್ನು ಆಕ್ರಮಿಸುತ್ತದೆ.[೧೭]

ಕ್ಲಿಕ್ ವಂಚನೆಯ ಬಗ್ಗೆ ಉಂಟಾದ ಆರೋಪದಿಂದ, ಗೂಗಲ್ ಆಡ್ಸೆನ್ಸ್, ಕೆಲ ಸರ್ಚ್ ಇಂಜಿನ್ ಆಪ್ಟಿಮೈಸೆಶನ್ ಸಂಸ್ಥೆಗಳಿಂದ ಟೀಕೆಗೆ ಒಳಗಾಗಿದೆ, ಗೂಗಲ್ "ಅನರ್ಹ ಕ್ಲಿಕ್ ಗಳು" ಎಂದು ಕರೆಯುವ ಚಟುವಟಿಕೆಯನ್ನು ಇವುಗಳು ಟೀಕಿಸಿವೆ. ಇದರಲ್ಲಿ ಒಂದು ಸಂಸ್ಥೆಯು ತಮ್ಮ ಸ್ಪರ್ಧಿಯ ಸರ್ಚ್ ಇಂಜಿನ್ ಜಾಹಿರಾತುಗಳ ಮೇಲೆ ಕ್ಲಿಕ್ಕಿಸಿದರೆ ಅದು ಇತರ ಸಂಸ್ಥೆಯ ವೆಚ್ಚಕ್ಕೆ ಕಾರಣವಾಗುತ್ತದೆ.[೧೮]

ಕ್ಲಿಕ್ ವಂಚನೆಯನ್ನು ತಡೆಗಟ್ಟುವ ಸಲುವಾಗಿ, ಆಡ್ಸೆನ್ಸ್ ಪ್ರಕಟನಕಾರರು ಹಲವಾರು ಕ್ಲಿಕ್ ಮಾಡುವುದನ್ನು-ಶೋಧಿಸುವ ಪ್ರೋಗ್ರಾಮ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.[ಸೂಕ್ತ ಉಲ್ಲೇಖನ ಬೇಕು] ಈ ಪ್ರೋಗ್ರಾಮ್ ಗಳು ಆಡ್ಸೆನ್ಸ್ ಜಾಹಿರಾತುಗಳ ಮೇಲೆ ಕ್ಲಿಕ್ ಮಾಡುವವರ ಬಗ್ಗೆ ವಿಸ್ತೃತ ಮಾಹಿತಿಯನ್ನು ಪ್ರಕಟಿಸುತ್ತವೆ. ಇದನ್ನು ಬಳಸಿಕೊಂಡು ಪ್ರಕಟನಕಾರರು, ತಾವು ಕ್ಲಿಕ್ ವಂಚನೆಗೆ ಒಳಪಟ್ಟಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬಹುದು. ಹಲವಾರು ವ್ಯಾಪಾರಿ ಶೋಧನಾ ಸ್ಕ್ರಿಪ್ಟ್ ಗಳು ಖರೀದಿಗೆ ಲಭ್ಯವಿವೆ.

ವೆಬ್ ಪರಿಣಿತರಿಗೆ ಹಣ ಸಂದಾಯ ಮಾಡುವ ನಿಯಮಗಳನ್ನೂ ಸಹ ಯುಕ್ತವಾಗಿ ವಿಮರ್ಶೆ ಮಾಡಲಾಗಿದೆ.[೧೯] ಗೂಗಲ್, ಒಂದು ಖಾತೆ US$೧೦೦ ತಲುಪುವವರೆಗೂ ಹಣವನ್ನು ತಡೆಹಿಡಿಯುತ್ತದೆ,[೨೦] ಆದರೆ ಸಣ್ಣ ವಿಷಯವನ್ನು ಒದಗಿಸುವ ಹಲವರಿಗೆ[ಸೂಕ್ತ ಉಲ್ಲೇಖನ ಬೇಕು]ದೀರ್ಘಾವಧಿಯ ಸಮಯದ ಅಗತ್ಯವಿರುತ್ತದೆ-ಈ ಮೊತ್ತದ ಆಡ್ಸೆನ್ಸ್ ವರಮಾನವನ್ನು ಗಳಿಸಲು ಕೆಲವೊಂದು ಸಂದರ್ಭಗಳಲ್ಲಿ ವರ್ಷಾನುಗಟ್ಟಲೆ ಸಮಯದ ಅವಶ್ಯಕತೆಯಿರುತ್ತದೆ. ಆದಾಗ್ಯೂ, ಆಡ್ಸೆನ್ಸ್ ಖಾತೆಯನ್ನು ಕೊನೆಗೊಳಿಸಿ, ಅನರ್ಹಗೊಳಿಸದಿದ್ದರೆ, ಗೂಗಲ್, US$೧೦ಕ್ಕಿಂತ ಅಧಿಕವಾಗಿ ಗಳಿಸಿದ ಎಲ್ಲ ಹಣವನ್ನು ಸಂದಾಯ ಮಾಡುತ್ತದೆ.

ಗೂಗಲ್ ನಿಂದ ತಮ್ಮ ಮೊದಲ ಹಣದ ಚೆಕ್ ಸಂದಾಯವಾಗಬೇಕಾದ ಸಮಯದಲ್ಲಿ ತಮ್ಮ ಆಡ್ಸೆನ್ಸ್ ಖಾತೆ ಗಳು ಅನರ್ಹಗೊಳ್ಳುತ್ತವೆಂದು ಹಲವು ವೆಬ್ಸೈಟ್ ಮಾಲೀಕರು ದೂರುತ್ತಾರೆ. ಗೂಗಲ್, ಕ್ಲಿಕ್ ವಂಚನೆ ಅಥವಾ ನಿಷೇಧಿಸಲಾದ ವಿಷಯದಿಂದ ಖಾತೆ ಗಳು ಅನರ್ಹಗೊಂಡಿರುತ್ತವೆಂದು ಸಮರ್ಥಿಸುತ್ತದೆ, ಆದರೆ ಇದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಒಂದು ಸ್ವಯಂಚಾಲಿತ ಇಮೇಲ್ ಪ್ರಕಟನಕಾರನ ಒಡೆಯನಿಗೆ ಕಳುಹಿಸಲಾಗುತ್ತದೆ, ಇದರಲ್ಲಿ ಯಾವುದೇ ಸಮರ್ಥನೆಗಳಾಗಲಿ, ಅಥವಾ ಆಯ್ಕೆಗಳಾಗಲಿ ಇರುವುದಿಲ್ಲ. ಆದರೆ ಮೇಲ್ಮನವಿ ಸಲ್ಲಿಸಲು ಸಂಪರ್ಕ ಕೊಂಡಿಯನ್ನು ನೀಡಲಾಗಿರುತ್ತದೆ. ಈ ಇಮೇಲ್ ನಲ್ಲಿ, ಗೂಗಲ್, "ನಮ್ಮ ಮೇಲೆ ಆಡ್ವರ್ಡ್ಸ್ ಜಾಹಿರಾತುದಾರರನ್ನು ಅಸಮರ್ಥ ಚಟುವಟಿಕೆಯಿಂದ ಉಂಟಾಗುವ ಹೆಚ್ಚುವರಿ ವೆಚ್ಚದಿಂದ ರಕ್ಷಿಸುವ ಜವಾಬ್ದಾರಿ ಇರುವುದರಿಂದ, ನಮಗೆ ನಿಮ್ಮ ಆಡ್ಸೆನ್ಸ್ ಖಾತೆಯನ್ನು ಅನರ್ಹಗೊಳಿಸುವ ಅಗತ್ಯವಿತ್ತು. ನಿಮಗೆ ನೀಡಬೇಕಾಗಿರುವ ಬಾಕಿ ಹಣ ಹಾಗು ಗೂಗಲ್ ನ ವರಮಾನದ ಪಾಲನ್ನು, ಸಂಬಂಧಿತ ಜಾಹಿರಾತುದಾರರಿಗೆ ಸಂಪೂರ್ಣವಾಗಿ ವಾಪಸು ನೀಡಲಾಗುತ್ತದೆ" ಎಂದು ಸ್ಪಷ್ಟಪಡಿಸುತ್ತದೆ. ನ್ಯಾಯ ಸಮ್ಮತವಾಗಿದೆಯೋ ಇಲ್ಲವೋ-ಬಂದ ವರಮಾನವನ್ನು ಪಡೆದುಕೊಳ್ಳಲಾಗುತ್ತದೆ, ಹಾಗು ಎಲ್ಲ ದೂರುಗಳನ್ನು ತಳ್ಳಿಹಾಕಲಾಗುತ್ತದೆ.[೨೧]

ಅಧಿಕೃತ ಗೂಗಲ್ ಆಡ್ಸೆನ್ಸ್ ಬ್ಲಾಗ್, ಫ್ರೆಂಚ್ ವಿಡಿಯೋ ವೆಬ್ಸೈಟ್ Imineo.comನ್ನು ಪ್ರದರ್ಶಿಸಿದಾಗ, ಗೂಗಲ್ ಟೀಕೆಗಳಿಗೆ ಗುರಿಯಾಯಿತು. ಈ ವೆಬ್ಸೈಟ್, ಆಡ್ಸೆನ್ಸ್ ನ ಜೊತೆಯಲ್ಲಿ ಲೈಂಗಿಕವಾಗಿ ಪ್ರಚೋದಕವೆನಿಸುವ ವಿಷಯಗಳನ್ನು ಪ್ರದರ್ಶಿಸಿ ಗೂಗಲ್ ನ ಆಡ್ಸೆನ್ಸ್ ಪ್ರೋಗ್ರಾಮ್ ಪಾಲಿಸಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿತು. ಮಾದರಿಯಾಗಿ, ಆಡ್ಸೆನ್ಸ್ ನ್ನು ಪ್ರದರ್ಶಿಸುವ ವೆಬ್ಸೈಟ್ ಗಳು ಇಂತಹ ವಿಷಯಗಳನ್ನು ಪ್ರದರ್ಶಿಸುವುದನ್ನು ನಿರ್ಬಂಧಿಸಲಾಯಿತು.[೨೨] ಕೆಲವು ಜಾಲಗಳು ಸ್ವತಃ ಕಾಪಿರೈಟ್ ನ್ನು ಹೊಂದಿದ್ದರೂ ಸಹ ಕಾಪಿರೈಟ್ ಆದಂತಹ ವಸ್ತು-ವಿಷಯಕಗಳನ್ನು ವಿತರಿಸಲು ನಿರ್ಬಂಧಿಸಲಾಗಿದೆ; ಅಥವಾ ವಿಷಯಕವನ್ನು ವಿತರಿಸಲು ಕಾಪಿರೈಟ್ (ಹಕ್ಕುಸ್ವಾಮ್ಯ)ಹೊಂದಿರುವವರಿಂದ ಪ್ರಮಾಣಿತವಾಗಿರಬೇಕು.[೨೩]

ಆಡ್ಸೆನ್ಸ್ ಹಾಗು ಆಡ್ವರ್ಡ್ಸ್ ಎರಡರ ಬಳಕೆಯಿಂದ ವೆಬ್ಸೈಟ್ ಸ್ವತಃ ಪ್ರಚಾರಗೊಳ್ಳುತ್ತದೆ, ಹೀಗಾಗಿ ವೆಬ್ಸೈಟ್ ಗೂಗಲ್ ಗೆ ಕಮಿಷನ್ ನೀಡಬೇಕಾಗುತ್ತದೆ ಎಂದು ವರದಿಯಾಗಿದೆ.[೨೪]

ಕೆಲವೊಂದು ಸಂದರ್ಭಗಳಲ್ಲಿ, ಆಡ್ಸೆನ್ಸ್ ಅನುಚಿತ ಅಥವಾ ಆಕ್ರಮಣಕಾರಿ ಜಾಹಿರಾತುಗಳನ್ನು ಪ್ರದರ್ಶಿಸುತ್ತದೆ. ಉದಾಹರಣೆಗೆ, ಭಾರತದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಗೆಗಿನ ಒಂದು ಸುದ್ದಿಯಲ್ಲಿ, ಭಯೋತ್ಪಾದನೆಗೆ ಬೇಕಾಗುವ ಶೈಕ್ಷಣಿಕತೆ ಬಗ್ಗೆ ಒಂದು ಜಾಹಿರಾತು ಹುಟ್ಟಿಕೊಂಡಿತು.(ಸಂಭಾವ್ಯವಾಗಿ ಇದು ಅಸ್ತಿತ್ವದಲ್ಲಿಲ್ಲ ಅಥವಾ ಇದನ್ನು ನಿಜವೆಂದು ಭಾವಿಸಬೇಕಾಗಿರಲಿಲ್ಲ.).[೨೫]

ಆಡ್ಸೆನ್ಸ್ ಟ್ರ್ಯಾಕಿಂಗ್ ಕುಕೀಗಳನ್ನು ರಚನೆ ಮಾಡುತ್ತವೆ. ಇದನ್ನು ಕೆಲವರು ಗೋಪ್ಯತೆಗೆ ಅಪಾಯವನ್ನು ಉಂಟುಮಾಡುತ್ತದೆಂದು ಕೆಲವರು[೨೬] ಪರಿಗಣಿಸುತ್ತಾರೆ. ಆಡ್ಸೆನ್ಸ್ ನ್ನು ಬಳಸುವ ವೆಬ್ ಪರಿಣಿತರು, ಗೋಪ್ಯತೆ ನಿಯಮದ ಪುಟದಲ್ಲಿ ಸೂಕ್ತ ಎಚ್ಚರಿಕೆಯನ್ನು ನೀಡಬೇಕು.[೨೭]

ಇವನ್ನೂ ನೋಡಿ

[ಬದಲಾಯಿಸಿ]
  • ದಿ ಆಡ್ಸೆನ್ಸ್ ಕೋಡ್ (ಪುಸ್ತಕ)
  • ಗೂಗಲ್ ಆಡ್ವರ್ಡ್ಸ್
  • ಗೂಗಲ್‌ ಉತ್ಪನ್ನಗಳ ಪಟ್ಟಿ
  • ಪೇ ಪರ್‌ ಪ್ಲೇ
  • ಸ್ಕ್ರೇಪರ್(ಅಳಿಸಿ ಹಾಕುವ ಸಾಧನ) ವೆಬ್ಸೈಟ್

ಉಲ್ಲೇಖಗಳು

[ಬದಲಾಯಿಸಿ]
  1. "ಪೇ-ಪರ್-ಆಕ್ಷನ್ ಎರಡನೇ ಪರೀಕ್ಷೆಯು ಏನಾಯಿತು?". Archived from the original on 2009-03-01. Retrieved 2011-01-25.
  2. "ಗೂಗಲ್ 2010ರ ಮೊದಲ ತ್ರೈಮಾಸಿಕ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದೆ" ಗೂಗಲ್ ೧೮ ಜೂನ್‌ ೨೦೧೦ರಂದು ಮರುಸಂಪಾದಿಸಲಾಗಿದೆ.
  3. ೩.೦ ೩.೧ "Google Form 10-Q, Q2 2010". 2010-07-15. Retrieved 2010-09-08.
  4. Paula J. Hane (1999-12-20). "Beyond Keyword Searching". Info Today.
  5. "Google Buys Applied Semantics". Incisive Interactive Marketing LLC. 2003-04-24. Archived from the original on 2012-03-19. Retrieved 2011-01-25.
  6. "Google Acquires Applied Semantics". Press release. 2003-04-23.
  7. Shuman Ghosemajumder (2005-05-17). "Official Google Blog: Feed me". Retrieved 2007-12-29.
  8. ಡೊಮೈನ್ ಗಳಿಗಾಗಿ ಆಡ್ಸೆನ್ಸ್ ಎಲ್ಲ US ಪ್ರಕಾಶಕರಿಗೆ ಇದೀಗ ಲಭ್ಯವಿದೆ, ರಾಬಿನ್ ವುಟರ್ಸ್, ಡಿಸೆಂಬರ್ ೧೨, ೨೦೦೮, ಟೆಕ್ ಕ್ರಂಚ್
  9. Brian Womack (2010-05-03). "Google's YouTube Boosts Display Advertisers 10-Fold (Update1)". Bloomberg Businessweek. Retrieved 2010-05-03.
  10. W3C. "Tables". Retrieved 2009-10-06.{{cite web}}: CS1 maint: numeric names: authors list (link)
  11. Stu Nicholls. "Adding AdSense to application/xhtml+xml pages". Archived from the original on 2010-12-26. Retrieved 2008-02-02.
  12. Roger Johansson (2004-09-01). "Content negotiation, AdSense, and comments". Retrieved 2008-02-02.
  13. "Google AdSense Help Center: What are CPM ads?". 2007-12-29. Archived from the original on 2009-01-22. Retrieved 2011-01-25.
  14. "Google AdWords: All About Site-Targeted Ads". 2007-12-29.
  15. "Google AdSense Help Center: What is the referrals feature?". 2007-12-29.
  16. "Google yanks AdSense referral program, offers shoddy surrogate". blog.anta.net. 2008-07-01. ISSN 1797-1993. Archived from the original on 2011-07-23. Retrieved 2008-07-01.
  17. Benaifer Jah (2005-12-27). "Trojan Horse program that targets Google AdSense ads". TechShout.
  18. Charles C. Mann (January 2006). "How click fraud could swallow the internet". Wired.
  19. Lem Bingley (2007-02-01). "Google keeps on coining it in". IT Week.[ಶಾಶ್ವತವಾಗಿ ಮಡಿದ ಕೊಂಡಿ]
  20. "When do I get paid?". Google AdSense Help Center.
  21. "Disabled Account FAQ - AdSense Help". 2010-11-08.
  22. "Adult content". Google AdSense Help Center.
  23. "Google AdSense Program Policies". 2007-12-29.
  24. "BE CAREFUL when using both AdSense + AdWords by Google". 2009-02-19.
  25. "Google's Worst Ads Ever (GOOG)". 2009-08-20.
  26. ಆಡ್ಸೆನ್ಸ್ ಪ್ರಿಯರ ಟೀಕೆಗಳು
  27. Google AdSense terms

ಬಾಹ್ಯ ಕೊಂಡಿಗಳು

[ಬದಲಾಯಿಸಿ]