ವಿಷಯಕ್ಕೆ ಹೋಗು

ತನೋಟ್ ಮಾತಾ ದೇವಾಲಯ:

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.

ತನೋಟ್ ಮಾತಾ ದೇವಾಲಯ, ಜೈಸಲ್ಮೇರ್

ಈ ಸ್ಥಳ ರಾಜಸ್ತಾನಜೈಸಲ್ಮೇರ್ ನಿಂದ ಸುಮಾರು ೧೨೦ ಕಿ.ಮೀ. ದೂರದಲ್ಲಿ ಭಾರತ-ಪಾಕಿಸ್ಥಾನ ಗಡಿ ಗೆ ಹೊಂದಿಕೊಂಡಿದೆ. ಇದನ್ನು ತಲುಪುವ ರಸ್ತೆಯ ಸಂಚಾರ ನಮಗೆ ನಿಜವಾದ ರಾಜಸ್ಥಾನದ ಮರಳುಭೂಮಿಯ ಸೊಬಗಿನ ದರ್ಶನ ಮಾಡಿಸುತ್ತದೆ. ಪಾಕಿಸ್ಥಾನ ಗಡಿ ಇಲ್ಲಿಂದ ೩೦ ಕಿ.ಮಿ. ದೂರದಲ್ಲಿದೆ. ಆದರೆ ಅಧಿಕೃತ ಪರವಾನಿಗೆಯಿಲ್ಲದೆ ಇಲ್ಲಂದ ಮುಂದೆ ಹೋಗುವಂತಿಲ್ಲ.

ಐತಿಹ್ಯ

ಈ ದೇವಾಲಯದಲ್ಲಿ ದೇವಿಯನ್ನು ಪೂಜಿಸುವುದು ಭಾರತೀಯ ಯೋಧರುಗಳು. ಬಲೂಚಿಸ್ಥಾನದ ಪ್ರದೇಶದಲ್ಲಿರುವ ಹಿಂಗುಳಾಂಬೆ (ಹಿಂಗ್ಲಾಜ್ ಮಾತಾ) ಯ ಅವತಾರವೇ ಈ ತನೋಟ್ ಮಾತಾ ಎಂದು ಹೇಳಲಾಗುತ್ತದೆ. ೧೯೬೫ರ ಯುದ್ಧದ ಸಮಯದಲ್ಲಿ ಪಾಕಿಸ್ಥಾನ್ ತನೋಟ್ ಮಾತಾ ದೇವಾಲಯದ ಸುತ್ತ ಸಿಡಿಸಿದ್ದ ಸುಮಾರು ಮೂರು ಸಾವಿರ ಬಾಂಬ್ ಗಳೂ ಸಿಡಿಯದೇ ನಿಷ್ಕ್ರಿಯವಾಗಿತ್ತಂತೆ. ಇದಲ್ಲದೆ ೧೯೭೧ರ ಯುದ್ಧದ ಸಮಯದಲ್ಲಿ ಪಾಕಿಸ್ಥಾನ ಭಾರತದ ಲಾಂಗೆವಾಲಾದ ಮೇಲೆ ಏಕಾಏಕಿ ದಾಳಿ ಮಾಡಿದಾಗ, ಕೇವಲ ೧೨೦ ಜನರ ಪಂಜಾಬ್ ರೆಜಿಮೆಂಟಿನ ಯೋಧರು ಹಾಗೂ ಬಿಎಸ್ ಎಎಫ್ ನ ತಂಡ, ೨೦೦೦ ಬಲವಿರುವ ಪಾಕಿಸ್ಥಾನದ ಸೈನಿಕರ ಧಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತದೆ. ಇದಕ್ಕೆ ತನೋಟ್ ದೇವಿಯಿ ಪ್ರೇರಣೆಯೇ ಕಾರಣವೆಂದು ಹೇಳುತ್ತಾರೆ. ಆದ್ದರಿಂದ ಈ ದೇವಿಯನ್ನು ಅತ್ಯಂತ ಶಕ್ತಿಶಾಲಿ ಎಂದು ನಂಬುತ್ತಾರೆ.

ಉಲ್ಲೇಖ / ಬಾಹ್ಯ ಕೊಂಡಿಗಳು

https://en.wikipedia.org/wiki/Tanot_Mata

ವರ್ಗಗಳು