ಯುದ್ಧ ನಿರತ ದೇಶಗಳಲ್ಲಿ ಶಾಂತಿ ಸ್ಥಾಪನೆಗಾಗಿ ವಿಶ್ವಗುರು ಫ್ರಾನ್ಸಿಸ್ ಪ್ರಾರ್ಥನೆ
ವರದಿ: ವ್ಯಾಟಿಕನ್ ನ್ಯೂಸ್
ವಿಶ್ವಗುರು ಫ್ರಾನ್ಸಿಸ್ ಅವರು ಪ್ರಸ್ತುತ ಜಗತ್ತಿನಲ್ಲಿ ಯುದ್ಧ ನಡೆಯುತ್ತಿರುವ ದೇಶಗಳನ್ನು ನೆನಪಿಸಿಕೊಂಡಿದ್ದಾರೆ. ವಿಶೇಷವಾಗಿ ಉಕ್ರೇನ್, ಪವಿತ್ರ ನಾಡು ಹಾಗೂ ಮ್ಯಾನ್ಮಾರ್ ದೇಶಗಳನ್ನು ನೆನಪಿಸಿಕೊಂಡು ಈ ದೇಶಗಳಿಗಾಗಿ ಪ್ರಾರ್ಥಿಸುವಂತೆ ಭಕ್ತಾದಿಗಳಿಗೆ ಕರೆ ನೀಡಿದ್ದಾರೆ.
ವಿಶ್ವಗುರು ಫ್ರಾನ್ಸಿಸ್ ಅವರು ಬುಧವಾರ ಸಾರ್ವಜನಿಕ ಭೇಟಿಯಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು.
ನನ್ನ ಪ್ರೀತಿಯ ಸಹೋದರ ಸಹೋದರಿಯರೇ ನಾವು ಯುದ್ಧ ನಿರತ ದೇಶಗಳಿಗಾಗಿ ಪ್ರಾರ್ಥಿಸೋಣ. ಈ ದೇಶಗಳಲ್ಲಿ ತಮ್ಮದಲ್ಲದ ತಪ್ಪಿಗೆ ಲಕ್ಷಾಂತರ ಜನರು ನೋವನ್ನು ಅನುಭವಿಸುತ್ತಿದ್ದಾರೆ. ನನ್ನ ಹೃದಯ ಅಲ್ಲಿನ ಮಕ್ಕಳಿಗಾಗಿ ಮಿಡಿಯುತ್ತಿದೆ. ಅವರಿಗಾಗಿ ನಾವು ಪ್ರಾರ್ಥಿಸೋಣ ಹಾಗೂ ದಯಾಮಯ ದೇವರು ಅಲ್ಲಿ ಶಾಂತಿ ನೆಲೆಸುವಂತೆ ಮಾಡಲಿ ಎಂದು ಮೊರೆಯಿಡೋಣ ಎಂದು ಹೇಳಿದ್ದಾರೆ.
"ಪ್ಯಾಲೇಸ್ಟೇನ್,ಇಸ್ರೇಲ್, ಮ್ಯಾನ್ಮಾರ್ ಹಾಗೂ ಯುದ್ಧ ನಿರತವಾಗಿರುವ ದೇಶಗಳನ್ನು ನಾವು ಮರೆಯದಿರೋಣ" ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.