ಕುಂಬಳೆ ಸುಂದರ ರಾವ್
ಗೋಚರ
ಕುಂಬಳೆ ಸುಂದರ ರಾವ್ ಅಥವಾ ಕುಂಬ್ಳೆ ಸುಂದರ ರಾವ್ (ಜನನ:೨೦ ಮಾರ್ಚ್, ೧೯೩೪ - ಮರಣ:೩೦ ನವೆಂಬರ್, ೨೦೨೨) [೧] ಒಬ್ಬ ಭಾರತೀಯ ರಾಜಕಾರಣಿ ಮತ್ತು ಯಕ್ಷಗಾನ (ಸಾಂಪ್ರದಾಯಿಕ ನೃತ್ಯ) ಹಾಗೂ ತಾಳ-ಮದ್ದಳೆ ಕಲಾವಿದರಾಗಿದ್ದರು. ಅವರು ಯಕ್ಷಗಾನದ ತೆಂಕುತಿಟ್ಟು ಅಥವಾ ತೆಂಕತಿಟ್ಟು ಶೈಲಿಯ ಕಲಾವಿದರಾಗಿದ್ದರು. ಅವರು ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯವರು. ೧೯೯೪ ರಿಂದ ೧೯೯೯ ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ
ಜೀವನ
[ಬದಲಾಯಿಸಿ]ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಜನಿಸಿದರು
ಸಾಧನೆ
[ಬದಲಾಯಿಸಿ]- ೧೯೯೪ ರಿಂದ ೧೯೯೯ ರವರೆಗೆ ಸುರತ್ಕಲ್ ಕ್ಷೇತ್ರದಿಂದ ಹತ್ತನೇ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದು, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.
- ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ (ಯಕ್ಷಗಾನ ತಂಡಗಳು) ಕಲಾವಿದರಾಗಿ ಕೆಲಸ ಮಾಡಿದವರು.
- ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. [೨]
- ಐವತ್ತಕ್ಕೂ ಅಧಿಕ ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದಾರೆ.
ಗೌರವ/ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]- ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ ೨೦೧೮–೨೦೧೯ ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಮಾಡಲಾಯಿತು. [೩]
ಉಲ್ಲೇಖಗಳು
[ಬದಲಾಯಿಸಿ]- ↑ Yakshagana artist Kumble Sundar Rao passes away
- ↑ "Udupi: Kumble Sundar Rao Frustrated over Neglect of Yakshagana Academy". www.daijiworld.com. Retrieved 9 January 2020.
- ↑ "Yakshamangala award for renowned artistes". Deccan Herald, English Newspaper. Retrieved 9 January 2020.