ವಿಷಯಕ್ಕೆ ಹೋಗು

ಕೋಸಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಸಲ ವಿಸ್ತೀರ್ಣದಲ್ಲಿ ಸ್ಥೂಲವಾಗಿ ಇಂದಿನ ಉತ್ತರ ಪ್ರದೇಶಅವಧ್ ಪ್ರದೇಶಕ್ಕೆ ಅನುರೂಪವಾಗಿದ್ದ ಒಂದು ಪ್ರಾಚೀನ ಭಾರತೀಯ ರಾಜ್ಯವಾಗಿತ್ತು. ಅದು ವೈದಿಕ ಯುಗದ ಉತ್ತರಾರ್ಧದಲ್ಲಿ ನೆರೆಯ ವಿದೇಹ ರಾಜ್ಯದ ಸಂಪರ್ಕಗಳೊಂದಿಗೆ ಒಂದು ಜನಪದವಾಗಿ ಹೊರಹೊಮ್ಮಿತು. ಬೌದ್ಧ ಪಠ್ಯ ಅಂಗುತ್ತರ ನಿಕಾಯ ಹಾಗೂ ಜೈನ ಪಠ್ಯ ಭಗವತಿ ಸೂತ್ರದ ಪ್ರಕಾರ, ಕ್ರಿ.ಪೂ. ೬ ರಿಂದ ೫ ನೆಯ ಶತಮಾನದವರೆಗೆ ಕೋಸಲವು ಹದಿನಾರು ಮಹಾಜನಪದಗಳಲ್ಲಿ ಒಂದಾಗಿತ್ತು, ಮತ್ತು ಅದರ ಸಾಂಸ್ಕೃತಿಕ ಹಾಗೂ ರಾಜಕೀಯ ಶಕ್ತಿಯು ಅದಕ್ಕೆ ಮಹಾ ಶಕ್ತಿಯ ಸ್ಥಾನವನ್ನು ಗಳಿಸಿಕೊಟ್ಟಿತು.

ಉಲ್ಲೇಖಗಳು

[ಬದಲಾಯಿಸಿ]