ಚಲನಶಕ್ತಿ
ಭೌತಶಾಸ್ತ್ರದಲ್ಲಿ ಯಾವುದೇ ಒಂದು ವಸ್ತುವಿನ ಚಲನಶಕ್ತಿಯು ಆ ವಸ್ತುವಿನ ಚಲನೆ ಅಥವಾ ಗತಿಯಿಂದ ಪಡೆಯುವಂತ ಶಕ್ತಿಯಾಗಿರುತ್ತದೆ. ಚಲನಶಕ್ತಿಯು ಒಂದು ವಸ್ತುವನ್ನು ನಿಶ್ಚಲ ಸ್ಥಿತಿಯಿಂದ ಗೊತ್ತಾದ ವೇಗಕ್ಕೆ ವೇಗೋತ್ಕರ್ಷಗೊಳಿಸಲು ಮಾಡಬೇಕಾಗುವ ಕೆಲಸ ಎಂದು ವ್ಯಾಖ್ಯಾನಿಸಲಾಗಿದೆ. ವೇಗೋತ್ಕರ್ಷಗೊಂಡಾಗ ಪಡೆದಿರುವಂತಹ ಶಕ್ತಿಯನ್ನು, ಆ ವಸ್ತುವು ತನ್ನ ವೇಗ ಬದಾಲಯಿಸುವವರೆಗೂ ಉಳಸಿಕೊಂಡಿರುತ್ತದೆ. ಆ ವಸ್ತುವನ್ನು ಪಡೆದ ವೇಗದಿಂದ ನಿಶ್ಚಲ ಸ್ತಿತಿಗೆ ತರಲು, ಅದೇ ಮೊತ್ತದ ಕೆಲಸ ಬೇಕಾಗುತ್ತದೆ.[೧] ಶಾಸ್ತ್ರೀಯ ಯಂತ್ರಶಾಸ್ತ್ರದ ಪ್ರಕಾರ ಒಂದು ತಿರುಗದೇ ಇರುವಂತಹ, ವೇಗದಲ್ಲಿ ಚಲಿಸುತ್ತಿರುವ, ದ್ರವ್ಯರಾಶಿ ಇರುವ ವಸ್ತುವಿನ ಚಲನ ಶಕ್ತಿಯು ಆಗಿರುತ್ತದೆ. ಚಲನ ಶಕ್ತಿಯ ಮಾನಕ ಜೌಲ್ (Joule) ಆಗಿದೆ.
ಇತಿಹಾಸ
[ಬದಲಾಯಿಸಿ]ಚಲನ ಶಕ್ತಿಯ ಮೂಲತತ್ವ E ∝ mv² ಮೊದಲು ಪರಿಚಯಿಸದವರು ಗೊತ್ತ್ಫ಼್ರಿಎದ್ ಲೆಇಬ್ನಿಜ಼್ (Gottfried Leibniz) ಮತ್ತು ಜೊಹ್ನ್ ಬೆರ್ನೊಉಲ್ಲಿ (Johann Bernoulli). ನೆದೆರಲ್ಯಾಂಡಿನ Willem 's Gravesande ಅವರು ಚಲನ ಶಕ್ತಿಯ ಈ ಸಮೀಕರಣವನ್ನು ಪ್ರಾಯೂಗಿಕವಾಗಿ ತೂರಿಸಿಕೊಟ್ಟರು.
Willem 's Gravesande ರವರು, ಒಂದು ಗೊತ್ತದ ತೂಕದ ಇಟ್ಟಿಗೆಯನ್ನು ವಿವಿಧ ಎತ್ತರಗಳಿಂದ ಮತ್ತು ವಿವಿಧ ವೇಗಗಳಿಂದ ಜೇಡಿಮಣ್ಣಿನ ಮೇಲೆ ಬೀಳಿಸಿ, ಇಟ್ಟಿಗೆ ನುಗ್ಗುವ ಆಳವನ್ನು ಗೊತ್ತು ಮಾಡಿಕೊಂಡು, ಅದರ ಚಲನಾ ವೇಗಕ್ಕೆ ಅನುಪಾತವಾಗಿರುತ್ತದೆ ಎಂದು ತೋರಿಸದರು.[೨]
ನ್ಯೂಟನ್‍ನ ಚಲನ ಶಕ್ತಿ
[ಬದಲಾಯಿಸಿ]ಶಾಸ್ತ್ರೀಯ ಯಂತ್ರಶಾಸ್ತ್ರದಲ್ಲಿ, ಒಂದು 'ಬಿಂದುವಸ್ತುವಿನ' ಅಥವಾ ಬಿಂದುವಿನಂತಹ ವಸ್ತುವಿನ (ಒಂದು ವಸ್ತುವಿನ ದ್ರವ್ಯರಾಶಿಯು ಒಂದು ಚಿಕ್ಕ ಬಿಂದುವಿನಲ್ಲಿ ಇರುವಷ್ಟು ಆ ವಸ್ತು ಸಣ್ಣದಾಗಿದ್ದರೆ, ಅದನ್ನು 'ಬಿಂದುವಸ್ತು'ವೆಂದು ಊಹಿಸಬಹುದು) ಚಲನ ಶಕ್ತಿಯು , ಅದರ ದ್ರವ್ಯರಾಶಿ ಮತ್ತು ಜವದಮೇಲೆ ಅವಲಂಬಿತವಾಗಿರುತ್ತದೆ. ಚಲನ ಶಕ್ತಿಯು ಅದರ ಅರ್ದದಷ್ಟು ದ್ರವ್ಯರಾಶಿ ಮತ್ತು ವೇಗದ ಗುಣಲಬ್ಢವಾಗಿರುತ್ತದೆ.
ಇಲ್ಲಿ ದ್ರವ್ಯರಾಶಿಯು m ಮತ್ತು ವೇಗವು v ಆಗಿರುತ್ತದೆ. ದ್ರವ್ಯರಾಶಿಯನ್ನು ಕಿಲೋ ಗ್ರಾಮ್, ಮತ್ತು ದೂರವನ್ನು ಮೀಟರ್, ಸಮಯವನ್ನು ಸೆಕೆಂಡ್ ಮಾನಕದಲ್ಲಿ ಪರಿಗಣಿಸಿದರೆ, ಚಲನ ಶಕ್ತಿಯ ಮಾನಕವು ಜೌಲ್ ಅಗಲಿದೆ. ಉದಾಹಾರಣೆಗೆ,೮೦kg ತೂಕದ ವಸ್ತು ೧೮m/s ಚಲಿಸಿದರೆ, ಅದರ ಚಲನಶಕ್ತಿಯು, ಈ ಕೆಳಗಿನಂತೆ, ೧೨೯೬೦J (ಜೌಲ್ಸ್) ಆಗುತ್ತದೆ.
ಒಂದು ವಸುವಿನ ಚಲನ ಶಕ್ತಿ ಅದರ ಚಲನ ಪರಿಮಾಣ(ರಭಸ)ದ ಸಂಬಂಧ ಸೂಚಿಸುವ ಸಮೀಕರಣವು ಈ ಕೆಳಕಂಡಂತಿದೆ:
ಇಲ್ಲಿ:
- ಚಲನ ಪರಿಮಾಣ ಅಥಾವ ರಭಸ ಮತ್ತು
- ವಸ್ತುವಿನ ದ್ರವ್ಯ್ರರಾಶಿ ಆಗಿರುತ್ತದೆ.
ನಿಷ್ಪತ್ತಿ
[ಬದಲಾಯಿಸಿ]ಒಂದು ಅತಿ ಚಿಕ್ಕ ಸಮಯ(dt) ಯಲ್ಲಿ ವೇಗೊತ್ಕರ್ಷಕ್ಕೆ ಒಳಪಟ್ಟ ಕಣ ಮಾಡುವ ಕೆಲಸವನ್ನು ಬಲ ಮತ್ತು ಸ್ಥಾನಪಲ್ಲಟಗಳ ಗುಣಾಕಾರದಿಂದ ಪಡೆಯಬಹುದು.
ಇಲ್ಲಿ p ಯನ್ನು m.v ಎಂದು ಪರಿಗಣಿಸಲಾಗಿದೆ. ಕಲನದ ಗುಣಾಕಾರದ ನಿಯಮವನ್ನು ಅನ್ವಯಿಸು, ಈ ಕೆಳಕಂಡಂತೆ:
ದ್ರವ್ಯರಾಶಿಯ ಬದಾಲವಣೆ ಅಗಿಲ್ಲವೆಂದು ಪರಿಗಣಿಸಿ (dm=0), ಸಮೀಕರಣವನ್ನು ಈ ಕೆಳಗಿನಂತೆ ಬರೆಯಬಹುದು:
ಇದನ್ನು ಕಲನ ಗಣಿತದಲ್ಲಿ, ಸಂಯೋಜಿಸಿ, ಚಲನ ಶಕ್ತಿಯ ಸಮೀಕರಣ ಪಡೆಯಬಹುದು. ಸಮಯ ೦ ಯಿಂದ t ಯವರೆಗೆ ಸಂಯೋಜಿಸಿ, ವಸ್ತು v ವೇಗವನ್ನು ಪಡೆದಾಗ:
ಚಲನ ಶಕ್ತಿಯನ್ನು, ವೇಗ ಮತ್ತು ರಭಸಗಳ ಚುಕ್ಕೆ ಗುಣಲಬ್ಡಗದ ಸಂಯೋಜನೆಯಿಂದ ಪಡೆಯಬಹುದೆಂದು ಈ ಮೇಲಿನ ಸಮೀಕರಣ ತೋರಿಸುತ್ತದೆ. ವಸ್ತುವು, ಮೊದಲು ಶೂನ್ಯ ಚಲನಶಕ್ತಿಯೊಂದಿಗೆ ನಿಶ್ಚಲ ಸ್ಥಿತಿಯಲ್ಲಿರುತ್ತದೆ ಎಂದು ಊಹಿಸಲಾಗಿದೆ.
ಇದನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Jain, Mahesh C. (2009). Textbook of Engineering Physics (Part I). PHI Learning Pvt. Ltd. p. 9. ISBN 81-203-3862-6., Chapter 1, p. 9
- ↑ Judith P. Zinsser (2007). Emilie du Chatelet: Daring Genius of the Enlightenment. Penguin. ISBN 0-14-311268-6.