ವಿಷಯಕ್ಕೆ ಹೋಗು

ಚೆನ್ನೆಕಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೆನ್ನೆಕಾಯಿ ಚೆನ್ನೆಮಣೆ ಆಡಲು ಉಪಯೋಗ ಮಾಡುವ ಕಾಯಿಗಳನ್ನು ಚೆನ್ನೆಕಾಯಿಗಳು ಅಂತ ಕರೆಯುತ್ತಾರೆ. ಕವಡೆ, ಗುಲಗಂಜಿ ಕಾಯಿ, ಹೊಂಗಾರದ ಕಾಯಿ, ಹುಣಸೆ ಬೀಜ ಇವುಗಳನೆಲ್ಲಾ ತುಳುನಾಡಿನ ಜನರು ಚೆನ್ನೆಮಣೆ ಆಡಲು ಉಪಯೋಗಿಸುತ್ತಾರೆ.

ಕವಡೆ ಕಾಯಿ

[ಬದಲಾಯಿಸಿ]

ಕವಡೆ ಒಂದು ಜಾತಿಯ ಪ್ರಾಣಿ, ಈ ಪ್ರಾಣಿ ನಡೆಯುದು ಹೊಟ್ಟೆಯ ಮೇಲೆ ಹಾಗಾಗಿ ಇದು ಗ್ಯಾಸ್ಟ್ರೋಪೋಡ. ಅಲ್ಲದೆ ಇದು ಸೈಪ್ರಿಡೀ ಕುಟುಂಬಕ್ಕೆ ಸೇರಿದ ಸುಂದರವಾಗಿರುವ ಮೃದ್ವಂಗಿಗಳು .ಕಾಯಿ ಅಂತಾ ಕರೆದರೂ ಕೂಡಾ ಅದು ನಿಜವಾಗಿ ಕಾಯಿಯಲ್ಲ. ಅದು ಸತ್ತ ಮೇಲೆ ಕರಗದೆ ಉಳಿದಿರುವ ದೇಹದ ಭಾಗ (ಶಂಖದ ಹಾಗೆ).

ಚಿತ್ರ: ಅಂಬೆಲೀಯ ಹೆಸಿಟೆಟಾ; ಕವಡೆ

ಇದು ಉಷ್ಣವಲಯ ದ ಕಡಲಿನಲ್ಲಿ, ಸಮಶೀತೋಷ್ಣವಲಯ ಮತ್ತು ಶೀತವಲಯೊದಲ್ಲಿ ಕೂಡಾ ಕಾಣ ಸಿಗುತ್ತದೆ. ಇದು ಸಾಮಾನ್ಯವಾಗಿ ಹವಳದ ದಿಣ್ಣೆಯಲ್ಲಿ ಕಂಡು ಬರುವ ಜಾಗಗಳಲ್ಲಿ ಕಲ್ಲುಬಂಡೆಯಲ್ಲಿ ಇರುವ ಸಮುದ್ರದ ಅಡಿಯ ಭಾಗದಲ್ಲಿ ಬದುಕಿರುತ್ತದೆ .ಒಮ್ಮೆ ಇದು ಸತ್ತ ಬಳಿಕ ದೇಹ ಕರಗಿ ಉಳಿದ ಭಾಗವನ್ನು ಕವಡೆ ಕಾಯಿ ಎಂದು ಜನರು ಕರೆಯುತ್ತಾರೆ ಮತ್ತು ಅದನ್ನು ಭವಿಶ್ಯ ಹೇಳುವುದಕ್ಕೆ ಮತ್ತು ಚೆನ್ನೆ ಮಣೆ ಆಡುವುದಕ್ಕೆ ಕೂಡಾ ಉಪಯೋಗ ಮಾಡುತ್ತಾರೆ.[]

ಮಂಜೊಟ್ಟಿ ಕಾಯಿ

[ಬದಲಾಯಿಸಿ]

ಸಸ್ಯ ಶಾಸ್ತ್ರಿಯ ಹೆಸರು: Adenanthera pavonina (ಅಡೆನಾಂಥೆರಾ ಪಾವೊನಿನಾ) ಕನ್ನಡ:ಮಂಜೊಟ್ಟಿ ತುಳು: ಮಂಜೊಟ್ಟಿ ಮಲಯಾಳಂ: ಮಂಜಾಡಿ ಈ ಮಂಜೊಟ್ಟಿಯ ಮರ ಬೇಗ ದೊಡ್ಡದಾಗುವುದು. ಮರ ತುಂಬಾ ಸುಂದರವಾಗಿದ್ದು, ಜನರಿಗೆ ನೆರಳು ಕೊಡುದಕ್ಕೆ ತುಂಬಾ ಅನುಕೂಲವಾಗಿದೆ. ಇದರ ಎಲೆ, ರೆಂಬೆ ಕೊಂಬೆಗಳು, ಅದರಲ್ಲೂ ವಿಶೇಶವಾಗಿ ಅದರ ಬೀಜಗಳು ತುಂಬಾ ಸೊಗಸು. ಮರದಲ್ಲಿ ಇರುವಾಗಲೇ ಬೀಜಗಳು ಹೊಡೆದು ನೆಲಕ್ಕೆ ಬೀಳುವ ಮೊದಲೇ ಅದರ ಬೀಜಗಳು ಮರದಲ್ಲಿಯೇ ಕಾಣಸಿಗುತ್ತದೆ. ತುಳುನಾಡಿನಲ್ಲಿ ಹೆಚ್ಚಾಗಿ ಚೆನ್ನೆ ಮಣೆ ಆಡಲು ಈ ಮಂಜೊಟ್ಟಿ ಕಾಯಿಯನ್ನು ಉಪಯೋಗ ಮಾಡುತ್ತಾರೆ. []

ಮಂಜೊಟ್ಟಿ ಕಾಯಿ

ಗುಲಗಂಜಿ ಕಾಯಿ

[ಬದಲಾಯಿಸಿ]
ಗುಲಗಂಜಿ ಕಾಯಿ (ಅಬ್ರಸ್ ಪ್ರೆಕಾಟೋರಿಯಸ್)

ಕನ್ನಡ: ಮಾರ ಮಂಜೆಟ್ಟಿ, ದೊಡ್ಡ ಗುಲಗಂಜಿ. ಮಲಯಾಳಂ: ಮಂಚಡಿ. ತಮಿಳು: ಅನಿ ಕುಂದಮಣಿ ತೆಲುಗು: ಬಂಡಿ ಗುರಿವೆಂದ ತುಳು: ಮಂಜೊಟ್ಟಿ ವೈಜ್ಞಾನಿಕ ಹೆಸರು:ಅಬ್ರಸ್ ಪ್ರೆಕಾಟೋರಿಯಸ್

ಅಬ್ರಸ್ ಪ್ರಿಕಟೋರಿಯಸ್, ಇದನ್ನು ಸಾಮಾನ್ಯವಾಗಿ ಜೆಕ್ವಿರಿಟಿ ಬೀನ್ ಅಥವಾ ರೋಸರಿ ಬಟಾಣಿ ಎಂದು ಕರೆಯಲಾಗುತ್ತದೆ, ಇದು ಹುರುಳಿ ಕುಟುಂಬವಾದ ಫ್ಯಾಬೇಸಿಯಲ್ಲಿ ಒಂದು ಹೂಬಿಡುವ ಸಸ್ಯವಾಗಿದೆ. ಇದು ತೆಳ್ಳಗಿನ, ದೀರ್ಘಕಾಲಿಕ ಆರೋಹಿಯಾಗಿದ್ದು, ಮರಗಳು, ಪೊದೆಗಳಾಗಿ ಸುತ್ತಲೂ ಬೆಳೆಯುವ ಉದ್ದವಾದ, ಪಿನ್ನೇಟ್-ಕರಪತ್ರಗಳ ಎಲೆಗಳನ್ನು ಹೊಂದಿದೆ. ಈ ಸಸ್ಯವು ಅದರ ಬೀಜಗಳಿಗೆ ಹೆಸರುವಾಸಿಯಾಗಿದೆ, ಇದನ್ನು ಮಣಿಗಳಾಗಿ, ತಾಳವಾದ್ಯಗಳಲ್ಲಿ, ಚೆನ್ನೆಕಾಯಿಯಾಗಿಯೂ ಬಳಸಲಾಗುತ್ತದೆ.[]

ಹೊಂಗಾರದ ಕಾಯಿ

[ಬದಲಾಯಿಸಿ]

ಕನ್ನಡ: ಹೊಂಗರು ತುಳು:ಪೊಂಗರ್ ಇಂಗ್ಲೀಷ್: Indian Coral Tree (ಭಾರತೀಯ ಹವಳದ ಮರ) ವೈಜ್ಞಾನಿಕ ಹೆಸರು: Erythrina variegata ಸಾಮಾನ್ಯವಾಗಿ ಹುಲಿಯ ಪಂಜ ಅಥಾವ ಭಾರತದ ಹವಳದ ಮರ ಎಂದೂ ತುಳುವಿನಲ್ಲಿ ಪೊಂಗರ್ ದ ಮರ ಅಂತಲೂ ಹೊಂಗಾರಿನ ಮರವನ್ನು ಹೆಸರಿಸುತ್ತಾರೆ. ಪೂರ್ವ ಆಫ್ರಿಕಾ, ಭಾರತದ ಉಪಖಂಡ, ಉತ್ತರ ಆಸ್ಟ್ರೇಲಿಯಾ, ಮತ್ತು ಹಿಂದೂ ಮಹಾಸಾಗರದ ದ್ವೀಪಗಳಲ್ಲಿ ಕಾಣ ಸಿಗುತ್ತದೆ.[] ತುಳುನಾಡಿನಲ್ಲಿ ಸಾಮಾನ್ಯವಾಗಿ ನನಾ ವಿಧದ ಕೆಲಸಗಳಿಗೆ ಈ ಹೊಂಗಾರ ಮರದ ಎಲೆಯನ್ನು ಬಳಸುತ್ತಾರೆ. ಹಾಗೆಯೇ ಬೇಲಿ ಹಾಕುವುದಕ್ಕೆ ಕೂಡಾ ಹೊಂಗಾರ ಮರವನ್ನು ಕಡಿದು ತುಂಡು ತುಂಡು ಮಾಡಿ ನೆಡುತ್ತಾರೆ. ಹಾಗೆಯೇ ಚೆನ್ನೆಮಣೆ ಆಡುವುದಕ್ಕೆ ಹೊಂಗಾರ ಮರದ ಕಾಯಿಯನ್ನೂ ಉಪಯೋಗ ಮಾಡುತ್ತಾರೆ.

ಹುಣಸೆ ಹಣ್ಣಿನ ಕಾಯಿ

[ಬದಲಾಯಿಸಿ]

ತುಳು:ಪುಳಿ

ಕನ್ನಡ: ಹುಣಸೆಹಣ್ಣು

ಇಂಗ್ಲೀಷ್: ಟ್ಯಾಮರಿಂಡ್

ವೈಜ್ಞಾನಿಕ ಹೆಸರು: ಟ್ಯಾಮರಿಂಡಸ್ ಇಂಡಿಕಾ ಇದು ಒಂದು ದ್ವಿದಳ ಧಾನ್ಯದ ಮರ, ಇದು ಉಷ್ಣವಲಯದ ಆಫ್ರಿಕಾ ಮತ್ತು ಏಷ್ಯಾದಲ್ಲಿ ನೈಸರ್ಗಿಕವಾಗಿ ಕಾಣಲು ಸಿಗುತ್ತದೆ.[6] ಟ್ಯಾಮರಿಂಡಸ್ ಕುಲ ಒಂದೇ ಪ್ರಕಾರವಾಗಿದೆ. ಅಂದರೆ ಇದರಲ್ಲಿ ಇದು ಒಂದೇ ಜಾತಿ ಇರುವುದು. ಇದು ಸಸ್ಯ ಶಾಸ್ತ್ರದಲ್ಲಿ ಫ್ಯಾಬೇಸೀ ಕುಟುಂಬಕ್ಕೆ ಸೇರಿದೆ.[] ಹುಣಸೆ ಬೀಜವನ್ನು ಪುಲ್ಕಟೆ ಮಾಡಿ ತಿನ್ನಲು ಆಟಿಯಲ್ಲಿ ತುಳುನಾಡಿನವರು ತುಂಬಾ ಹುಣಸೆ ಹಣ್ಣಿನ ಬೀಜಗಳನ್ನು ಸಂಗ್ರಹ ಮಾಡಿ ಇಡುತ್ತಾರೆ. ಯಾವಾಗ ಆಟಿಯಲ್ಲಿ ಜೋರು ಮಳೆ ಬರುವಾಗ ತಿನ್ನುವ ಆಸೆಯಾಗುವುದೊ ಆವಾಗ ಹುಣಸೆ ಬೀಜವನ್ನು ಸುಟ್ಟು ಪುಲ್ಕಟೆ ಮಾಡಿ ತಿನ್ತಾರೆ. ಹಾಗೆಯೇ ಆಟ ಆಡುವ ಮನ್ನಸ್ಸಾದರೆ, ಹುಣಸೆ ಬೀಜವನ್ನು ಚೆನ್ನೆ ಮಣೆ ಆಡಲು ಚೆನ್ನೆ ಕಾಯಿಯಾಗಿಸಿ ಚೆನ್ನೆ ಮಣೆ ಆಡುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Cypraea Linnaeus, 1758. WoRMS (2010). Cypraea Linnaeus, 1758. In: Bouchet, P.; Gofas, S.; Rosenberg, G. (2010) World Marine Mollusca database. Accessed through: World Register of Marine Species at http://www.marinespecies.org/aphia.php?p=taxdetails&id=205978 on 9 June 2011 .
  2. "Manjotti - Red Lucky Seed". Bale Tulu Kalpuga. 13 December 2023.
  3. "Abrus precatorius L. (PIM 001)". www.inchem.org.
  4. "Erythrina variegata". European and Mediterranean Plant Protection Organization (EPPO). Retrieved 26 August 2021.
  5. El-Siddig, K. (2006). Tamarind: Tamarindus Indica L. Crops for the Future. ISBN 978-0-85432-859-8.