ವಿಷಯಕ್ಕೆ ಹೋಗು

ಟಿಬಿಲಿಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Tbilisi
თბილისი
Historical center of Tbilisi
Historical center of Tbilisi
Flag of Tbilisi თბილისი
Official seal of Tbilisi თბილისი
Country ಜಾರ್ಜಿಯ (ದೇಶ)
Establishedc. 479 A.D
Government
 • MayorGiorgi Ugulava
Area
 • City೭೨೬ km (೨೮೦ sq mi)
Highest elevation
೭೭೦ m (೨,೫೩೦ ft)
Lowest elevation
೩೮೦ m (೧,೨೫೦ ft)
Population
 (2012)
 • City೧೪,೭೩,೫೫೧
 • Density೨,೦೦೦/km (೫,೩೦೦/sq mi)
 • Metro
೧೪,೮೫,೨೯೩
Time zoneUTC+4 (Georgian Time)
Area code+9955 32
Websitewww.tbilisi.gov.ge

ಟಿಬಿಲಿಸಿಜಾರ್ಜಿಯ ದೇಶದ ರಾಜಧಾನಿ.ಇದು ಕುರ ನದಿಯ ದಡದಲ್ಲಿದೆ. ಇದರ ಜನಸಂಖ್ಯೆ ಸುಮಾರು ೧೪,೮೦,೦೦೦.


ಟಬಿಲಿಸೀ ಸೋವಿಯೆತ್ ಒಕ್ಕೂಟದ ಜಾರ್ಜಿಯನ್ ಸೋವಿಯೆತ್ ಸಮಾಜವಾದಿ ಗಣರಾಜ್ಯದ ರಾಜಧಾನಿ. ಕರಾ ನದಿಯ ದಡದಲ್ಲಿದೆ. ಜನಸಂಖ್ಯೆ 8,89,000 (1970). ಬೆಟ್ಟದ ಪ್ರದೇಶದಲ್ಲಿ ನದಿಯ ಆಚೀಚೆ ದಡಗಳ ಮೇಲೆ ಬೆಳೆದಿರುವ ಈ ನಗರದ್ದು ರಮ್ಯವಾದ ಸನ್ನಿವೇಶ, ಸಾಲುಮರಗಳಿಂದ ಅಂಚುಕಟ್ಟಿದಂತಿರುವ ಬೀದಿಗಳಿಂದಲೂ ಅನೇಕ ಉದ್ಯಾನವನಗಳಿಂದಲೂ ಕೂಡಿರುವ ಈ ನಗರ ಸುಂದರವಾಗಿದೆ. ಇಲ್ಲಿರುವ ಸಸ್ಯಶಾಸ್ತ್ರಕ ಉಯಾನ 1845ರಷ್ಟು ಹಳೆಯದು.

ಟಬಿಲಿಸೀ ನಗರದ ಆಧುನಿಕ ಕಟ್ಟಡಗಳು ಸಾಂಪ್ರದಾಯಿಕ ಜಾರ್ಜಿಯನ್ ಮತ್ತು ಆರ್ಮೇನಿಯನ್ ಶೈಲಿಯವು. ನಗರದಲ್ಲಿ ಉಳಿದಿರುವ ಪ್ರಾಚೀನ ಕಟ್ಟಡಗಳ ಪೈಕಿಸೈಯಾನ್ ಕತೀಡ್ರಲ್ ಒಂದು. ಇದರ ನಿರ್ಮಾಣ 5ನೆಯ ಶತಮಾನದಲ್ಲಿ ಆರಂಭವಾಯಿತು. ಅನಂತರ ಇದನ್ನು ಹಲವು ಸಾರಿ ಮತ್ತೆಮತ್ತೆ ಕಟ್ಟಲಾಯಿತು. ಜಾರ್ಜಿಯನ್ ದೊರೆಗಳ ಮೆಟೆಖಿ ಅರಮನೆ ಇನ್ನೊಂದು. ನಗರದಲ್ಲಿ, ಮುಖ್ಯವಾಗಿ ಕರಾ ನದಿಯ ಬಲದಂಡೆಯ ಮೇಲೆ, ಇರುವ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾರ್ಜಿಯನ್ ವಿಜ್ಞಾನ ಅಕಾಡೆಮಿ, ವಿಶ್ವವಿದ್ಯಾಲಯ, ವಿವಿಧ ತಾಂತ್ರಿಕ ಶಾಲೆ, ಕೃಷಿ ವಿದ್ಯಾಲಯ ಮತ್ತು ಇತರ ಹಲವು ಉನ್ನತ ಶಿಕ್ಷಣ ಸಂಸ್ಥೆಗಳೂ ಎಪ್ಪತ್ತೈದಕ್ಕಿಂತಲೂ ಹೆಚ್ಚು ಸಂಶೋಧನ ಪ್ರತಿಷ್ಠಾನಗಳೂ ರಂಗಮಂದಿರವೂ ನಾಟಕ ಶಾಲೆಗಳೂ ಇವೆ. ಇದೊಂದು ಚಲನಚಿತ್ರ ತಯಾರಿಕಾ ಕೇಂದ್ರ, ಮುದ್ರಣ ಮತ್ತು ಪ್ರಕಾಶನೋದ್ಯಮ ಕೇಂದ್ರ.

ಟಬಿಲಿಸೀ ಹಲವು ಹೆದ್ದಾರಿಗಳ, ರೈಲುಮಾರ್ಗಗಳ ಸಂಧಿಸ್ಥಳ. ಕಾಕಸಸ್ಸನ್ನು ದಾಟಿ ಸಾಗುವ ಮಿಲಿಟರಿ ಹೆದ್ದಾರಿ ಇದರ ಮೂಲಕ ಸಾಗುತ್ತದೆ. ಕಪ್ಪು ಸಮುದ್ರದ ದಡದಲ್ಲಿರುವ ಸುಕಮೀ ಮತ್ತು ಕ್ಯಾಸ್ಪಿಯನ್ ಸಮುದ್ರದ ದಂಡೆಯಲ್ಲಿರುವ ಬಾಕೂ ನಗರಗಳಿಗೂ ಎರವಾನಿಗೂ ತುರ್ಕಿಗೂ ರೈಲ್ವೆ ಮತ್ತು ರಸ್ತೆ ಸಂಪರ್ಕವುಂಟು. ಅಲಝನಿ ಕಣಿವೆಯಲ್ಲಿರುವ ಟೆಲಾವಿಗೆ ರೈಲುಮಾರ್ಗ ಇದೆ.

ಟಬಿಲಿಸೀಯ ಕೈಗಾರಿಕೆಗಳಲ್ಲಿ ಮುಖ್ಯವಾದವು ಯಂತ್ರೋಪಕರಣ, ವಿದ್ಯುದುಪಕರಣ, ವಿದ್ಯುತ್ ಎಂಜಿನ್, ಜವಳಿ, ಪ್ಲಾಸ್ಟಿಕ್, ಚರ್ಮ ಸರಕು, ಪಾದರಕ್ಷೆ, ಪೀಠೋಪಕರಣ, ಇಟ್ಟಿಗೆ, ಪಿಂಗಾಣಿ, ಮದ್ಯತಯಾರಿಕೆ ಮತ್ತು ಆಹಾರ ಸಂಸ್ಕರಣ.

ಇತಿಹಾಸ

[ಬದಲಾಯಿಸಿ]

ಟಬಿಲಿಸೀ ಪ್ರಾಚೀನ ನಗರ. 458ರಲ್ಲಿ ಇದು ಸ್ಥಾಪಿತವಾಯಿತು. 455ರಲ್ಲೇ ಸ್ಥಾಪಿತವಾಯಿತೆಂದು ಕೆಲವು ಆಧಾರಗಳು ತಿಳಿಸುತ್ತವೆ. ಆಗ ಜಾರ್ಜಿಯದ ರಾಜಧಾನಿಯನ್ನು ಎಮ್‍ಟ್ಸ್‍ಖೇಟದಿಂದ ಇಲ್ಲಿಗೆ ವರ್ಗಾಯಿಸಲಾಯಿತು. ಪೂರ್ವ ಮತ್ತು ಪಶ್ಚಿಮ ಟ್ರಾನ್ಸ್‍ಕಕೇಷಿಯದ ನಡುವಣ ಹಾದಿಯಲ್ಲಿ ಆಯಕಟ್ಟಿನ ಸ್ಥಳದಲ್ಲಿ ಈ ನಗರ ಇರುವುದರಿಂದ ಇದರದು ಪ್ರಕ್ಷುಬ್ಧ ಇತಿಹಾಸ. ಇದು ಹಲವು ಬಾರಿ ದಾಳಿಗಳಿಗೆ ಒಳಗಾಗಿದೆ. 6ನೆಯ ಶತಮಾನದಲ್ಲಿ ಪರ್ಷಿಯನರೂ 7ನೆಯ ಶತಮಾನದಲ್ಲಿ ಬಿಝಾಂಟೀನ್ ಚಕ್ರವರ್ತಿಗಳೂ ಅರಬರೂ ಇದರ ಮೇಲೆ ಒಡೆತನ ಸ್ಥಾಪಿಸಿದ್ದರು. 1122ರಲ್ಲಿ ಜಾರ್ಜಿಯರ ದೊರೆ 2ನೆಯ ಡೇವಿಡ್ ಇದನ್ನು ಗೆದ್ದು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. 1234ರಲ್ಲಿ ಇದು ಮಂಗೋಲರ ಉಡಿಯಲ್ಲಿ ಬಿತ್ತು. 1386ರಲ್ಲಿ ತೈಮೂರ್ ಇದನ್ನು ಬಗ್ಗು ಬಡಿದ. ತುರ್ಕರು ಅನೇಕಸಾರಿ ಇದನ್ನು ಹಿಡಿದುಕೊಂಡಿದ್ದರು. ಪರ್ಷಿಯನರು 1795ರಲ್ಲಿ ಇದನ್ನು ಸುಟ್ಟು ನೆಲಸಮ ಮಾಡಿದರು. ಅಂತಿಮವಾಗಿ ರಷ್ಯನರು ಇದನ್ನು ವಶಪಡಿಸಿಕೊಂಡಿದ್ದು 1801ರಲ್ಲಿ. ಆಗ ಇದರ ಜನಸಂಖ್ಯೆ 20,000. ರಷ್ಯನರು ವ್ಲಾಡಿಕಾಫ್‍ಕಾಜದ (ಈಗಿನ ಆರ್ಜಾನಿಕಿಡ್‍ಜ) ಕಾಕಸಸ್ ಮೂಲಕ ಟಬಿಲಿಸೀಗೆ ಮಿಲಿಟರಿ ಹೆದ್ದಾರಿಯೊಂದನ್ನು ನಿರ್ಮಿಸಿದರು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಟಿಬಿಲಿಸಿಯ ವಿಹಂಗಮ ನೋಟ