ವಿಷಯಕ್ಕೆ ಹೋಗು

ದಿ ಬಿಗ್ ಬ್ಯಾಂಗ್‌ ಥಿಯರಿ (TV ಸರಣಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Big Bang Theory
ಚಿತ್ರ:BigBangTheoryTitleCard.png
Title card for The Big Bang Theory
ಹೀಗೂ ಕರೆಯಲಾಗುತ್ತದೆTBBT
ಶೈಲಿSitcom
ರಚನಾಕಾರರುChuck Lorre
Bill Prady
ನಿರ್ದೇಶಕರುJames Burrows (pilot)
Mark Cendrowski
ನಟರುJohnny Galecki
Jim Parsons
Kaley Cuoco
Simon Helberg
Kunal Nayyar
Sara Gilbert
ನಿರೂಪಣಾ ಗೀತೆ"The History of Everything"[] by Barenaked Ladies
ದೇಶ ಅಮೇರಿಕ ಸಂಯುಕ್ತ ಸಂಸ್ಥಾನ
ಭಾಷೆ(ಗಳು)English
ಒಟ್ಟು ಸರಣಿಗಳು3
ಒಟ್ಟು ಸಂಚಿಕೆಗಳು40 (List of episodes)
ನಿರ್ಮಾಣ
ಕಾರ್ಯನಿರ್ವಾಹಕ ನಿರ್ಮಾಪಕ(ರು)Chuck Lorre
Bill Prady
Lee Aronsohn
ನಿರ್ಮಾಪಕ(ರು)Steve Molaro
Mike Collier
Faye Oshima Belyeu
ಸಂಕಲನಕಾರರುPeter Chakos
ಕ್ಯಾಮೆರಾ ಏರ್ಪಾಡುMulti-camera
ಸಮಯ21 minutes (without commercials)
ಪ್ರಸಾರಣೆ
ಮೂಲ ವಾಹಿನಿCBS
ಚಿತ್ರ ಶೈಲಿ480i (SDTV),
1080i (HDTV)
ಮೂಲ ಪ್ರಸಾರಣಾ ಸಮಯSeptember 24, 2007 – present
ಹೊರ ಕೊಂಡಿಗಳು
ತಾಣ
ಚಿತ್ರ:Vlcsnap-4765A.PNG
ದಿ ಬಿಗ್‌ ಬ್ಯಾಂಗ್‌ ಧಿಯರಿಯಲ್ಲಿ ಪಾತ್ರವರ್ಗ. ಎಡದಿಂದ: ಹೊವರ್ಡ್‌, ಲಿಯೊನಾರ್ಡ್‌, ಪೆನ್ನಿ, ಷೆಲ್ಡನ್‌ ಮತ್ತು ರಾಜೇಶ್‌.

ದಿ ಬಿಗ್‌ ಬ್ಯಾಂಗ್‌ ಧಿಯರಿ ಒಂದು ಅಮೆರಿಕನ್‌ ಸಾಂದರ್ಭಿಕ ಹಾಸ್ಯ (ಸಿಚುಯೇಷನ್‌ ಕಾಮಿಡಿ)ಸರಣಿ.ಚಕ್‌ ಲೊರ್‌ ಮತ್ತು ಬಿಲ್ ಪ್ರ್ಯಾಡಿ ಇದರ ಸೃಷ್ಟಿಕರ್ತ ಮತ್ತು ಕಾರ್ಯಕಾರಿ ನಿರ್ಮಾಪಕರು. 2007ರ ಸೆಪ್ಟೆಂಬರ್‌ 24ರಂದು CBS ವಾಹಿನಿಯಲ್ಲಿ ಇದರ ಪ್ರಥಮ ಪ್ರದರ್ಶನವಾಯಿತು.[]

ಈ ಹಾಸ್ಯ ಸರಣಿಯು ಕ್ಯಾಲಿಫೊರ್ನಿಯಾದ ಪಸಡೆನಾದಲ್ಲಿ ಚಿತ್ರೀಕರಣಗೊಂಡಿತ್ತು. ಈ ಕ್ಯಾಲ್ಟೆಕ್‌ (ಕ್ಯಾಲಿಫೊರ್ನಿಯಾ ಇನ್ಸ್ಟಿಟ್ಯುಟ್‌ ಆಫ್‌ ಟೆಕ್ನಾಲಜಿ)ನ ಇಬ್ಬರು ಅಸಾಧಾರಣ ಪುರುಷರು - ಒಬ್ಬ ಲಿಯೊನಾರ್ಡ್‌ ಎಂಬ ಪ್ರಾಯೋಗಿಕ ಭೌತಶಾಸ್ತ್ರಜ್ಞ (ಲಿಯೊನಾರ್ಡ್‌ ಹಫ್‌ಸ್ಟೇಟರ್‌), ಇನ್ನೊಬ್ಬ ಷೆಲ್ಡನ್‌ ಎಂಬ ತಾತ್ವಿಕ ಭೌತಶಾಸ್ತ್ರಜ್ಞ - ಈ ಇಬ್ಬರೂ(ಷೆಲ್ಡನ್‌ ಕೂಪರ್‌); ಮನರಂಜನಾ ವೃತ್ತಿಯ ಆಕಾಂಕ್ಷೆಯುಳ್ಳ ಪೆನ್ನಿ ಎಂಬ ಹೊಂಬಣ್ಣದ ಕೂದಲುಳ್ಳ ಆಕರ್ಷಕ ಪರಿಚಾರಿಕೆಯೊಂದಿಗೆ ಒಂದೇ ಸೂರಿನಡಿ ಬದುಕುವುವುದೇ ಈ ಸರಣಿಯ ಕಥಾವಸ್ತು.

ಪೆನ್ನಿಯ ಸಾಮಾಜಿಕ ಜಾಣ್ಮೆ ಮತ್ತು ಸಾಮಾನ್ಯ ಜ್ಞಾನಕ್ಕೆ ತದ್ವಿರುದ್ಧವಾದ ಲಿಯೊನಾರ್ಡ್‌ ಮತ್ತು ಷೆಲ್ಡನ್‌ರ 'ಗೀಕು'ತನ ಮತ್ತು ಬುದ್ಧಿಶಕ್ತಿಯ ವೈರುಧ್ಯಗಳೇ ಹಾಸ್ಯ ಕಾರಂಜಿಯ ಬುಗ್ಗೆಗೆ ಎಡೆಮಾಡಿಕೊಡುತ್ತವೆ.[][] ಇವರಿಬ್ಬರ ಸ್ನೇಹಿತರಾದ, ಅದೇ ಮಟ್ಟದ ಗೀಕು ಸ್ವಭಾವದ ಹೊವರ್ಡ್‌ ಮತ್ತು ರಾಜೀಶ್‌ರದ್ದು ಕೂಡಾ ಇಲ್ಲಿ ಪ್ರಮುಖ ಪಾತ್ರ. ವಾರ್ನರ್ ಬ್ರದರ್ಸ್‌ ಟೆಲಿವಿಷನ್‌ ಮತ್ತು ಚಕ್‌ ಲೊರ್‌ ಪ್ರೊಡಕ್ಷನ್ಸ್‌ ಸಂಸ್ಥೆಗಳು ಈ ಸರಣಿಯನ್ನು ನಿರ್ಮಿಸಿದವು.[][] 2009ರ ಮಾರ್ಚ್‌ ತಿಂಗಳಲ್ಲಿ ದಿ ಬಿಗ್‌ ಬ್ಯಾಂಗ್‌ ಧಿಯರಿ CBS ವಾಹಿನಿಯಲ್ಲಿ 3ನೆಯ ಮತ್ತು 4ನೆಯ ಭಾಗಕ್ಕಾಗಿ ಪರಿಷ್ಕರಿಸಲಾಯಿತೆಂದು ವರದಿಯಾಗಿತ್ತು.[] 2009ರ ಆಗಸ್ಟ್‌ ತಿಂಗಳಲ್ಲಿ ಈ ಸಾದರ್ಭಿಕ ಹಾಸ್ಯ ಸರಣಿಯು ಅತ್ಯುತ್ತಮ ಹಾಸ್ಯ ಸರಣಿ ಎಂದು TCAಪ್ರಶಸ್ತಿಯನ್ನು ಗಳಿಸಿತು. ಹಾಸ್ಯ ಸಾಧನೆಗಾಗಿ ಜಿಮ್‌ ಪಾರ್ಸನ್ಸ್‌ರಿಗೆ ವೈಯಕ್ತಿಕ ಪ್ರಶಸ್ತಿ ದೊರಕಿತು.[] ಚಕ್‌ ಲೊರ್‌ನ ಇನ್ನೊಂದು ಸರಣಿ ಟೂ ಅಂಡ್‌ ಎ ಹಾಫ್‌ ಮೆನ್‌ ನಿರ್ಮಣವಾದ ನಂತರ ದಿ ಬಿಗ್‌ ಬ್ಯಾಂಗ್‌ ಧಿಯರಿ ಪ್ರತಿ ಸೋಮವಾರ 9:30ಕ್ಕೆ 2/ಪ್ರಸಾರ ಅರಂಭಿಸಿತು{}

ಪ್ರಮುಖ ಪಾತ್ರವರ್ಗ

[ಬದಲಾಯಿಸಿ]
  • ಲಿಯೊನಾರ್ಡ್‌ ಹಫ್‌ಸ್ಟೇಟರ್‌, Ph.D. ಪಾತ್ರದಲ್ಲಿ ಜಾನಿ ಗ್ಯಾಲೆಕಿ - ಲಿಯೊನಾರ್ಡ್‌ ಒಬ್ಬ ಪ್ರಾಯೋಗಿಕ ಭೌತವಿಜ್ಞಾನಿ.ತನ್ನ 24ನೆಯ ವಯಸ್ಸಿನಲ್ಲಿ Ph.D. ಪಡೆದಿದ್ದ ಈತನ IQ 173 ಆಗಿತ್ತು. ತನ್ನ ಸಹೋದ್ಯೋಗಿ ಹಾಗೂ ಸ್ನೇಹಿತ ಷೆಲ್ಡನ್‌ ಕೂಪರ್‌ನೊಂದಿಗೆ ಮಹಡಿಮನೆ (ಅಪಾರ್ಟ್ಮೆಂಟ್‌)ಯಲ್ಲಿ ಈತನು ವಾಸಿಸುತ್ತಾನೆ. ಈತನು ಸರಣಿಯ ಸಾಚಾ ವ್ಯಕ್ತಿ. ಲಿಯೊನಾರ್ಡ್‌ ಮತ್ತು ಆತನ ನೆರೆಯವಳಾದ ಪೆನ್ನಿಯೊಂದಿಗೆ ಪ್ರಣಯದ ಸನ್ನಿವೇಶಗಳನ್ನು ತುಂಬಿಸಿ ಸರಣಿಯ ಚಿತ್ರಕಥೆಯನ್ನು ಹಣೆಯಲಾಗಿದೆ. ಅವರಿಬ್ಬರ ಬಗೆಹರಿಸಲಾಗದ ಲೈಂಗಿಕೋದ್ವೇಗವು ಈ ನಾಟಕದ ಜೀವಾಳ.
  • ಷೆಲ್ಡನ್‌ ಕೂಪರ್‌, Ph.D. ಪಾತ್ರದಲ್ಲಿ ಜಿಮ್‌ ಪಾರ್ಸನ್ಸ್‌ - ಷೆಲ್ಡನ್‌ ಮೂಲತಃ ಈಸ್ಟ್‌ ಟೆಕ್ಸಸ್‌ನವನಾಗಿದ್ದು, ಅದ್ಭುತ ಗುಣಗಳುಳ್ಳ ಬಾಲಕನಾಗಿದ್ದನು. ಈತನು ಐದನೆಯ ಗ್ರೇಡ್‌ ಪೂರ್ಣಗೊಳಿಸಿದ ಕೂಡಲೆ ತನ್ನ 11ನೆಯ ವಯಸ್ಸಿನಲ್ಲಿ ಕಾಲೇಜ್‌ ವ್ಯಾಸಂಗವನ್ನು ಆರಂಭಿಸಿದನು. ಒಬ್ಬ ತಾತ್ವಿಕ ಭೌತಶಾಸ್ತ್ರಜ್ಞನಾಗಿ, ಈತನು ಒಂದು ಸ್ನಾತಕೋತ್ತರ ಪದವಿ, ಎರಡು Ph.D.ಗಳನ್ನು ಹೊಂದಿದ್ದನು. ಈತನ IQ 187 ಆಗಿತ್ತು. ಈತ ತನ್ನ ದಿನಚರಿಗೆ ಕಟಿಬದ್ಧ.ವ್ಯಂಗ್ಯ,ಕಟಕಿ ಮತ್ತು ಹಾಸ್ಯಗಳನ್ನು ಅರ್ಥಮಾಡಿಕೊಳ್ಳಲು ಅಶಕ್ಯನಾಗಿಯೂ, ನಮ್ರತೆಯ ಕೊರತೆಯ ಕೂಪದಂತೆಯೂ ಕಂಡುಬರುತ್ತಾನೆ. ಈತನ ಪಾತ್ರದ ಹಾಸ್ಯ ವೈಶಿಷ್ಟ್ಯಗಳೇ ಹಲವಾರು ಕಂತುಗಳ ಕೇಂದ್ರ ಬಿಂದುವಾಗಿವೆ. ಷೆಲ್ಡನ್‌ ಮತ್ತು ಲಿಯೊನಾರ್ಡ್‌ ಹಫ್‌ಸ್ಟೇಟರ್‌ ಮಹಡಿ ಮನೆಯೊಂದರಲ್ಲಿ ವಾಸಿಸುತ್ತಾರೆ. ತಮ್ಮ ಬಾಲ್ಯಾವಸ್ಥೆಯಲ್ಲಿದ್ದಾಗ, ದಿನದ ಅಂತ್ಯದಲ್ಲಿ ಷೆಲ್ಡನ್‌ ಅವನ ಕಾಲ್ಪನಿಕ ಸ್ನೇಹಿತರನ್ನು ಮನೆಗೆ ಕಳುಹಿಸುತ್ತಿದ್ದ ಎಂದು ಆತನ ಅವಳಿ ಸೋದರಿಯು ಹೇಳುತ್ತಾಳೆ."ಅವರೆಲ್ಲರೂ ಸ್ನೇಹಿತರಲ್ಲ, ಅವರು ಕಾಲ್ಪನಿಕ ಸಹೋದ್ಯೋಗಿಗಳು" ಎಂಬುದು ಷೆಲ್ಡನ್‌ ಇದಕ್ಕೆ ನೀಡುವ ಮಾರುತ್ತರ.[]
  • ಪೆನ್ನಿ ಪಾತ್ರದಲ್ಲಿ ಕೇಲೀ ಕ್ವೋಕೊ - ಈಕೆ ಷೆಲ್ಡನ್‌ ಮತ್ತು ಲಿಯೊನಾರ್ಡ್‌ರ ಗೆಳತಿ. ಈಕೆ ಇವರಿಬ್ಬರೂ ಇರುವ ಮನೆಯ ಒಂದು ಭಾಗದಲ್ಲಿ ವಾಸಿಸುತ್ತಾಳೆ.ಸ್ಥಳೀಯ ಚೀಸ್ ಕೇಕ್‌ ತಯಾರಿಸುವ ಉದ್ದಿಮೆಯೊಂದರಲ್ಲಿ ಪರಿಚಾರಿಕೆಯಾಗಿದ್ದು ನಟಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುತ್ತಾಳೆ. ತನ್ನ ಕೊನೆಯ ಹೆಸರು ಬಹಿರಂಗಗೊಳಿಸದೆ ಇರುವುದು ಇದೊಂದೇ ಪ್ರಮುಖ ಪಾತ್ರ. ನೆಬ್ರಸ್ಕಾ ರಾಜ್ಯದ ಒಮಾಹದಲ್ಲಿನ ತೋಟದ ಮನೆಯೊಂದರಲ್ಲಿ ಈಕೆಯನ್ನು ಬೆಳೆಸಲಾಯಿತು. ಈಕೆ ತನ್ನ ನೀರಸ ನೆರೆಹೊರೆಯವರ ಆಸಕ್ತಿಯ ಕ್ಷೇತ್ರಗಳ ವಿಚಾರದಲ್ಲಿ ಬಹುಮಟ್ಟಿಗೆ ಗಮನ ಹರಿಸದಿರುವುದುದನ್ನು ಹಾಸ್ಯ ಸನ್ನಿವೇಶಕ್ಕಾಗಿ ದುಡಿಸಿಕೊಳ್ಳಲಾಗಿದೆ. ಷೆಲ್ಡನ್‌ನೊಂದಿಗೆ ಈಕೆಯದು ಬಹುಮಟ್ಟಿಗೆ ಜಗಳಗಂಟಿತನದ ಸ್ನೇಹವಿತ್ತು. ಹಾಸ್ಯ ಸನ್ನಿವೇಶಗಳನನ್ನು ಸೃಷ್ಟಿಸಲು, ಇವರಡೂ ಪಾತ್ರಗಳು ಸುಮ್ಮನೆ ಪರಸ್ಪರ ತಿರುಗಿ ಬೀಳುಂಥ ಸನ್ನಿವೇಶ ನರ್ಮಣ ಮಾಡಲಾಗಿದೆ.
  • ಹೊವರ್ಡ್‌ ವೊಲೊವಿಟ್ಜ್‌, M.Eng. ಅಗಿ ಸೈಮನ್‌ ಹೆಲ್ಬರ್ಗ್‌[೧೦] ಈತನು ಒಬ್ಬ (ಇಂಜಿನಿಯರ್‌); ತನ್ನ ತಾಯಿಯೊಂದಿಗೆ ವಾಸವಾಗಿದ್ದು, ಈ ಇವರು ಜ್ಯೂಯಿಷ್ ಮತಾವಲಂಬಿಗಳಾಗಿರುತ್ತಾರೆ.ಜ್ಯೂಯಿಶ್ ಷೆಲ್ಡನ್, ಲಿಯೊನಾರ್ಡ್‌ ಮತ್ತು ರಾಜ್‌ ಗಿಂತಲೂ ಭಿನ್ನವಾಗಿ, ಹೊವರ್ಡ್‌ Ph.D ಹೊಂದಿರುವುದಿಲ್ಲ. ತಾನು MITಯಿಂದ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವೆನೆಂದು ಅವನು ಸಮರ್ಥಿಸಿಕೊಳ್ಳುತ್ತಾನೆ. ಅವನು ಅಶಿಷ್ಟ ವಲ್ಲದ ಮಾತುಗಳನ್ನಾಡಿ, ತಾನು ಹುಡುಗಿಯರ ಒಡನಾಟವನ್ನು ಅತಿಯಾಗಿ ಬಯಸುವ ಮನುಷ್ಯನೆಂಬ ಭ್ರಮೆಯಲ್ಲಿರುತ್ತಾನೆ. ಈತನ ನಡವಳಿಕೆಗೆ ಪೆನ್ನಿ ಸೂಕ್ತವಾದ ಪ್ರತಿಕ್ರಿಯೆ ನೀಡುವುದಿಲ್ಲ. ಆದರೂ ಬೇರೇ ಹುಡುಗಿಯರ ಗಮನವನ್ನು ತನ್ನತ್ತ ಸೆಳೆಯಲು ಸಫಲನಾಗುತ್ತಾನೆ.
  • ರಾಜೇಶ್‌ ಕೂತ್ರಪಲ್ಲಿ, Ph.D. ಪಾತ್ರದಲ್ಲಿ ಕುನಾಲ್‌ ನಯ್ಯರ್‌ - ರಾಜೇಶ್ ಮೂಲತಃ ಭಾರತ ದೇಶದ ಹೊಸದಿಲ್ಲಿಯವನಾಗಿದ್ದು, ಕ್ಯಾಲ್ಟೆಕ್‌ನಲ್ಲಿ ಕಣ ಖಭೌತ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಾನೆ. ಈತನು ಹುಡುಗಿಯರ ಮುಂದೆ ಹುಡುಗಿಯರನ್ನು ಕಂಡರೆ ಮೂಕನೇನೋ ಎಂಬಷ್ಟು ಸಂಕೋಚ ಸ್ವಭಾವದವನಾಗಿರುತ್ತಾನೆ. ಪೆನ್ನಿಯನ್ನು ಒಳಗೊಂಡ ದೃಶ್ಯ ಮೇಲಿಂದ ಮೇಲೆ ಬರುವುದು ಇದಕ್ಕೊಂದು ಕಾರಣ. ಸಂಭಾಷಣೆ ದೂರ ದೂರಕ್ಕೊಂದು ಬರುವುದರಿಂದ ಉಳಿದ ಪಾತ್ರಗಳು ಈತನದನ್ನು ಗೌಣವಾಗಿಸಿ ಮೂಲೆಗೆ ದೂಡುತ್ತವೆ. ಮದ್ಯ ಮತ್ತು ಪ್ರಾಯೋಗಿಕ ಔಷಧಗಳು ಇವನ ಸಂಕೋಚ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸುತ್ತದೆ.ಆದಾಗ್ಯೂ ಒಂದು ಸಂದರ್ಭದಲ್ಲಿ ಇವೆರಡರ ನೆರವಿಲ್ಲದೇ ಪೆನ್ನಿಯಲ್ಲಿ ಕ್ಷಮೆ ಯಾಚಿಸುತ್ತಾನೆ. ಜನಾಂಗೀಯತೆಯನ್ನು ಬಹಳ ಚುರುಕಾಗಿ ಗ್ರಹಿಸಬಲ್ಲನು. ಡಾ. ಮತ್ತು ಶ್ರೀಮತಿ V.M ಕೂತ್ರಪಲ್ಲಿ ಎಂದು ಪರಿಚಯವಾಗಿರುವ ಆತನ ಪೋಷಕರು ವೆಬ್‌ಕ್ಯಾಮ್‌ ಮೂಲಕ ಕಾಣಸಿಗುತ್ತಾರೆ. ಆತನ ತಂದೆ ಸ್ತ್ರೀರೋಗತಜ್ಞ. [[ಬೆಂಟ್ಲೆ|ತಾನು ಭಾರತ]]ದಲ್ಲಿ ಬಡತನದ ನೆರಳಲ್ಲಿ ಈತನನ್ನು ಬೆಳೆಸಲಾಯಿತೆಂಬುದರ ಪರಿಯನ್ನು ಆಗಿಂದಾಗ್ಗೆ ಅವನು ಹೇಳಿಕೊಳ್ಳುತ್ತಿರುತ್ತಾನೆ.
  • ಲೆಸ್ಲೀ ವಿಂಕ್ಲ್‌, Ph.D. ಪಾತ್ರದಲ್ಲಿ ಸಾರಾ ಗಿಲ್ಬರ್ಟ್‌ (ಭಾಗ 1ರಿಂದಲೂ ಪುನರಾವರ್ತಿತ)[೧೧][೧೨] ಈಕೆ ಒಬ್ಬ ಪ್ರಾಯೋಗಿಕ ಭೌತಶಾಸ್ತ್ರಜ್ಞೆ. ಸರಣಿಯಲ್ಲಿ ಈಕೆ ಆಗೊಮ್ಮೆ ಈಗೊಮ್ಮೆ ಹೊವರ್ಡ್‌ ಮತ್ತು ಲಿಯೊನಾರ್ಡ್‌ರೊಂದಿಗೆ ಮಲಗುತ್ತಾಳೆ. ಷೆಲ್ಡನ್‌ನೊಂದಿಗೆ ಹೊಂದಿಕೊಂಡು ಹೋಗಲಾರದೆ ಪದೇ ಪದೇ ಅವನನ್ನು ಗೇಲಿ ಮಾಡುವಳು. ಎರಡನೆಯ ಭಾಗದಲ್ಲಿ ಈಕೆಯನ್ನು ಪ್ರಧಾನ ಪಾತ್ರವರ್ಗಕ್ಕೆ ಏರಿಸಲಾಗುತ್ತದೆ. ಲೇಖಕರು ಆಕೆಗಾಗಿ ಪ್ರತಿಯೊಂದು ಕಂತಿನಲ್ಲಿಯೂ ಉತ್ತಮ ಗುಣಮಟ್ಟದ ಕಥಾವಸ್ತುವನ್ನು ನೀಡಲು ವಿಫಲರಾದ ಕಾರಣ ಪುನಃ [೧೧] ಮೊದಲಿನ ಪಾತ್ರಕ್ಕೇ ಇವಳು ಇಳಿಯಬೇಕಾಗುತ್ತದೆ.

ಕಂತುಗಳು

[ಬದಲಾಯಿಸಿ]
ಭಾಗ ಕಂತುಗಳು ಮೂಲ ಪ್ರಸಾರ
1 17 ಸೆಪ್ಟೆಂಬರ್‌ 24, 2007 - ಮೇ 19, 2008
2 23 ಸೆಪ್ಟೆಂಬರ್‌ 22, 2008 - ಮೇ 11, 2009
3 TBA ಸೆಪ್ಟೆಂಬರ್‌ 21, 2009 - ಮೇ 2010

ನಿರ್ಮಾಣ ಇತಿಹಾಸ

[ಬದಲಾಯಿಸಿ]

2006-07 ದೂರದರ್ಶನ ಭಾಗಕ್ಕಾಗಿ ರಚಿಸಲಾದ ಈ ಸರಣಿಯ ಆರಂಭಿಕ ಯೋಜನೆಯು ಇಂದಿನದಕ್ಕಿಂತಲೂ ಗಮನಾರ್ಹವಾಗಿ ಭಿನ್ನವಾಗಿತ್ತು. ಅಂದಿನ ಪಾತ್ರವರ್ಗದಲ್ಲಿ ಕೇವಲ ಜಿಮ್‌ ಪಾರ್ಸನ್ಸ್‌ ಮತ್ತು ಜಾನಿ ಗ್ಯಾಲೆಕಿ ಇದ್ದರು. ಅವರ ನೆರೆಯವಳಾದ ಪೆನ್ನಿಯದು (ಈಗ ಕೇಲೀ ಕ್ವೋಕೊ ನಿರ್ವಹಿಸುತ್ತಿರುವ ಪಾತ್ರ) ತೀರ ಕೆಳ ಮಟ್ಟದ ಪಾತ್ರವಾಗಿತ್ತು. ಈ ಸರಣಿಯನ್ನು ಆಯ್ಕೆ ಮಾಡಲಿಲ್ಲ; ಆದರೆ, ಅದರ ಮರುಪರಿಶೀಲಿಸಿ ಉಳಿದ ಮುಖ್ಯ ಪಾತ್ರವರ್ಗದವರನ್ನು ಸೇರಿಸಿಕೊಂಡು ಪ್ರಸ್ತುತ ರೂಪಕ್ಕೆ ಪರಿವರ್ತಿಸಲು ನಿರ್ಮಾಪಕರರಿಗೆ ಅವಕಾಶ ನೀಡಲಾಯಿತು.[೧೩]

ದಿ ಬಿಗ್‌ ಬ್ಯಾಂಗ್‌ ಧಿಯರಿ ಯ ಎರಡನೆಯ ಯೋಜನೆಯನ್ನು ಜೇಮ್ಸ್‌ ಬರೋಸ್‌ ನಿರ್ದೇಶಿಸಿದರು. ಇವರು ಸರಣಿಯೊಂದಿಗೆ ಮುಂದುವರೆಯಲಿಲ್ಲ. ಈ ಪರಿಷ್ಕೃತ ಯೋಜನೆಯು 2007ರ ಮೇ 14ರಂದು CBSನಿಂದ 13 ಕಂತುಗಳ ಆರ್ಡರನ್ನು ಗಳಿಸಲು ಎಡೆಮಾಡಿತು.[೧೪] CBSನಲ್ಲಿ ಪ್ರಸಾರವಾಗುವ ಮುಂಚೆ ಪ್ರಾಯೋಗಿಕ ಕಂತನ್ನು (ಪೈಲಟ್‌ ಎಪಿಸೊಡ್‌) iTunes ಮೂಲಕ ಉಚಿತವಾಗಿಈ ಸರಣಿಯು 2007ರ ಸೆಪ್ಟೆಂಬರ್‌ 24ರಂದು ಪ್ರಥಮ ಪ್ರದರ್ಶನ ಕಂಡು, 2007ರ ಅಕ್ಟೋಬರ್‌ 19ರಂದು ಪೂರ್ಣ ಪ್ರಮಾಣದ 22 ಕಂತುಗಳ ಪ್ರಸಾರಕ್ಕಾಗಿ ಆಯ್ಕೆಯಾಯಿತು.[೧೫]

2007-2008 ರೈಟರ್ಸ್‌ ಗಿಲ್ಡ್‌ ಆಫ್‌ ಅಮೆರಿಕಾ ಮುಷ್ಕರದ ಕಾರಣ ಈ ಸರಣಿಯ ನಿರ್ಮಾಣವು 2007ರ ನವೆಂಬರ್‌ 6ರಂದು ಸ್ಥಗಿತಗೊಂಡಿತು. ಅಂತಿಮವಾಗಿ 2008ರ ಮಾರ್ಚ್‌ 17ರಂದು ಪುನಃ ಆರಂಭವಾಯಿತು. ಇದು ಹಿಂದಿನಕ್ಕಿಂತ ಮುಂಚಿನ ಸಮಯದಲ್ಲಿ ಪ್ರಸಾರಕ್ಕಾಗಿ ಸ್ಥಾನ ಗಿಟ್ಟಿಸಿತು. ಜೊತೆಗೆ ಒಂಬತ್ತು ಹೊಸ ಕಂತುಗಳು ಇದಕ್ಕೆ ಸೇರ್ಪಡೆಯಾಯಿತು.[೧೬][೧೭] ಮುಷ್ಕರ ಕೊನೆಗೊಂಡ ನಂತರ, 2008-2009 ಎರಡನೇ ಎರಡನೆ ಬಾರಿಯ ಪ್ರಸಾರಕ್ಕಾಗಿ ಆಯ್ಕೆಯಾಯಿತು. 2008ರ ಸೆಪ್ಟೆಂಬರ್‌ 22ರಂದು ಅದೇ ಸಮಯಕ್ಕೆ ಸರಣಿಯ ಪ್ರಥಮ ಪ್ರದರ್ಶನವಾಯಿತು.[೧೮] ಇದರ ಜನಪ್ರಿಯತೆ ಹೆಚ್ಚುತ್ತಿದು, ಸರಣಿಯು 2010-11ರ ಅವಧಿಗೂ ಎರಡು ವರ್ಷಗಳ ಅವಧಿಯ ನವೀಕರಣೆಯನ್ನು ಪಡೆಯಿತು.[೧೯][೨೦]

ಲಾಸ್‌ ಏಂಜಲೆಸ್‌ನಲ್ಲಿರುವ ಕ್ಯಾಪಿಫೊರ್ನಿಯಾ ವಿಶ್ವವಿದ್ಯಾನಿಲಯದಲ್ಲಿರುವ ಭೌತಶಾಸ್ತ್ರ ಮತ್ತು ಖಗೋಳ ವಿಜ್ಞಾನ ಪ್ರಾಧ್ಯಾಪಕರಾದ ಡೇವಿಡ್‌ ಸಾಲ್ಜ್‌ಬರ್ಗ್‌ ಚಿತ್ರಕಥೆಯನ್ನು ಪರಿಶೀಲಿಸಿ, ಸಂವಾದ, ಗಣಿತ ಸಮೀಕರಣ ಮತ್ತು ರೇಖಾಚಿತ್ರಗಳನ್ನು ಸರಣಿಯ ಆಸರೆಯಾಗಿ ನೀಡುವರು.[] ಕಾರ್ಯಕಾರಿ ನಿರ್ಮಾಪಕ ಮತ್ತು ಸಹ-ರಚನಕಾರ ಬಿಲ್‌ ಪ್ರ್ಯಾಡಿಯವರ ಪ್ರಕಾರ, "ಷೆಲ್ಡನ್‌ಗೆ ವಾಸ್ತವಿಕವಾದ ಸಮಸ್ಯೆಯನ್ನು ನೀಡಿ, ಆತನು ಮೊದಲ ಭಾಗದುದ್ದಕ್ಕೂ ಅದನ್ನು ಬಿಡಿಸಲೆಂದು ಯೋಜಿಸಿದ್ದೇವೆ. ಈ ಮೂಲಕ ರಂಗಸಜ್ಜಿಕೆಯತ್ತ ಒಂದು ನೈಜ ಪ್ರಗತಿಯನ್ನು ಕಾಣಬಹುದಾಗಿದೆ... ಈ ಎಲ್ಲ ಸಂಗತಿಗಳೂ ಸರಿಯಾದ ರೀತಿಯಲ್ಲಿ ತರಲು ನಾವು ಶ್ರಮವಹಿಸಿದೆವು."[]

ಆರಂಭಿಕ ಆವರ್ತಕ ರಾಗ

[ಬದಲಾಯಿಸಿ]

ಬೇರ್ನೇಕೆಡ್‌ ಲೇಡೀಸ್‌ ಕಥಾ ವಸ್ತುವಿನ ಹಾಡನ್ನು (ಥೀಮ್‌ ಸಾಂಗ್‌) ಬರೆದು ಧ್ವನಿಮುದ್ರಣ ಮಾಡಿದರು. ಈ ಹಾಡು ಆದಿಯಿಂದಲೂ ವಿಶ್ವ ಏನೇನು ಪರಿವರ್ತನೆಗೆ ಒಳಗಾಯಿತು ಎಂಬುದನ್ನು ವಿವರಿಸುತ್ತದೆ. ಸಮಯದ ಆರಂಭದಿಂದ ಬ್ರಹ್ಮಾಂಡದಲ್ಲಿ ಸಂಭವಿಸಿದ ಬೆಳವಣಿಗೆಗಳನ್ನು ವಿವರಿಸುತ್ತದೆ. 2007ರ ಅಕ್ಟೋಬರ್‌ 9ರಂದು, ಹಾಡಿನ ಸವಿಸ್ತಾರವಾದ ಆವೃತ್ತಿಯನ್ನು (1 ನಿಮಿಷ 25 ಸೆಕೆಂಡ್‌ಗಳು) ಬಿಡುಗಡೆ ಮಾಡಲಾಯಿತು.[೨೧] ಐದು ಅತಿ ಪ್ರಭಾವಿ ವಿಷಯದ ಹಾಡುಗಳಲ್ಲಿ ಈ ಕಥಾ ಹಂದರದ ಹಾಡು ಒಂದಾಗಿದ ಎಂದು TV ವಿಮರ್ಶಕಿ ಸಮಂತಾ ಹೊಲೊವೇ ಪರಿಗಣಿಸಿದರು.[೨೨]

DVD ಬಿಡುಗಡೆಗಳು

[ಬದಲಾಯಿಸಿ]
DVD ಹೆಸರು ಬಿಡುಗಡೆಯಾದ ದಿನಾಂಕಗಳು ಕಂತಿನ # ಹೆಚ್ಚುವರಿ ಮಾಹಿತಿ
ವಲಯ 1 ವಲಯ 2 ವಲಯ 4
ದಿ ಕಂಪ್ಲೀಟ್‌ ಫಸ್ಟ್‌ ಸೀಸನ್‌ ಸೆಪ್ಟೆಂಬರ್‌ 2, 2008 ಜನವರಿ 12, 2009 ಜೂನ್‌ 3, 2009 17 ಮೂರು ಡಿಸ್ಕ್‌ಗಳ ಸಂಪುಟ ಎಲ್ಲ 17 ಕಂತುಗಳನ್ನೂ ಒಳಗೊಂಡಿದೆ. ಒಂದೇ ಒಂದು ಹೆಚ್ಚುವರಿ ವೈಶಿಷ್ಟ್ಯವೇನೆಂದರೆ, "ಕ್ವಾಂಟಮ್‌ ಮೆಕ್ಯಾನಿಕ್ಸ್‌ ಆಫ್‌ ದಿ ಬಿಗ್‌ ಬ್ಯಾಂಗ್‌ ಧಿಯರಿ": ಹಾಗೂ "ವೈ ಇಟ್ಸ್‌ ಕೂಲ್‌ ಟು ಬಿ ಎ ಗೀಕ್‌" ಎಂಬುದರ ಬಗ್ಗೆ ಸರಣಿಯ ಪಾತ್ರವರ್ಗ ಮತ್ತು ರಚನಾಕಾರರಿಂದ ವಿವರಣೆ - ಇವೆರಡು ಪ್ರಸ್ತುತಿಗಳನ್ನೊಳಗೊಂಡಿರುವ 18 ನಿಮಿಷ ಅವಧಿಯ ಕಿರುಚಿತ್ರ. ನಡೆಯುವ ಅವಧಿ, 374 ನಿಮಿಷಗಳು.
ದಿ ಕಂಪ್ಲೀಟ್‌ ಸೆಕೆಂಡ್‌ ಸೀಸನ್‌ ಸೆಪ್ಟೆಂಬರ್ 15, 2009[೨೩] ಅಕ್ಟೋಬರ್‌ 19, 2009 TBA 23 ನಾಲ್ಕು ಡಿಸ್ಕ್‌ಗಳ ಸಂಪುಟ ಎಲ್ಲಾ 23 ಕಂತುಗಳನ್ನೂ ಒಳಗೊಂಡಿದೆ. ವಿಶೇಷ ಆಕರ್ಷಣೆಗಳಲ್ಲಿ ಒಂದು ಗ್ಯಾಗ್‌ ರೀಲ್‌, ಫಿಸಿಕಿಸ್ಟ್‌ ಟು ದಿ ಸ್ಟಾರ್ಸ್‌: ರಿಯಲ್‌-ಲೈಫ್‌ ಫಿಸಿಕಿಸ್ಟ್‌/ ಸರಣಿಯೊಂದಿಗೆ UCLA ಪ್ರಾಧ್ಯಾಪಕ ಡೇವಿಡ್‌ ಸಾಲ್ಜ್‌ಬರ್ಗ್‌ರ ಸಂಬಂಧ; ಟೆಸ್ಟಿಂಗ್‌ ದಿ ಇನ್ಫೈನೈಟ್‌ ಹಿಲೆರಿಟಿ ಹೈಪೊತೆಸಿಸ್‌ ಇನ್‌ ರಿಲೇಷನ್‌ ಟು ದಿ ಬಿಗ್ ಬ್ಯಾಂಗ್‌ ಥಿಯರಿ ಸೀಸನ್‌ 2ಸ್‌ ಯೂನಿಕ್‌ ಕ್ಯಾರೆಕ್ಟರ್ಸ್‌ ಅಂಡ್‌ ಕ್ಯಾರೆಕ್ಟರಿಸ್ಟಿಕ್ಸ್‌ - ಇವು ಒಳಗೊಂಡಿವೆ.

ಜನಪ್ರಿಯತೆಯ ಅಂದಾಜು (ರೇಟಿಂಗ್ಸ್‌‌)

[ಬದಲಾಯಿಸಿ]

U.S. ಪ್ರಮಾಣಿತ ಜನಪ್ರಿಯತೆಯ ಅಂದಾಜುಗಳು

[ಬದಲಾಯಿಸಿ]

ಕೆಳಕಂಡ ಸಂಕ್ಷಿಪ್ತ ತಾತ್ಪರ್ಯ: "ಜನಪ್ರಿಯತೆಯ ಅಂದಾಜು" ಎಂದರೆ, ದೂರದರ್ಶನಗಳನ್ನು ಹೊಂದಿರುವ ಎಲ್ಲ ಮನೆಗಳಲ್ಲಿಯೂ ಸರಣಿಯನ್ನು ವೀಕ್ಷಿಸಲಾಗುತ್ತಿರುವುದು; ಹಾಗೂ, ಪಾಲು ಎಂದರೆ, ಸರಣಿಯನ್ನು ವೀಕ್ಷಿಸಲಾದ ಆ ಸಮಯದಲ್ಲಿ ಬಳಕೆಯಲ್ಲಿರುವ ದೂರದರ್ಶನಗಳ ಶೇಕಡಾವಾರು. "18-49" ಎಂದರೆ ಸರಣಿಯನ್ನು ವೀಕ್ಷಿಸುವ 18ರಿಂದ 49ರ ವಯಸ್ಕರ ಶೇಕಡಾವಾರು. "ವೀಕ್ಷಕರು" ಎಂದರೆ, ಆ ಸಮಯದಲ್ಲಿ ಸರಣಿಯನ್ನು ವೀಕ್ಷಿಸುತ್ತಿರುವ ವೀಕ್ಷಕರ ಸಂಖ್ಯೆ (ದಶಲಕ್ಷ ಪ್ರಮಾಣದಲ್ಲಿ). "ಶ್ರೇಣಿ" ಎಂದರೆ, ಆ ವಾರದಲ್ಲಿ ಪ್ರಸಾರಗೊಂಡ ಇತರೆ TV ಸರಣಿಗಳಿಗೆ ಹೋಲಿಸಿದಾಗ ಸರಣಿಯ ಶ್ರೇಷ್ಠತೆ ಎಂಬುದರ ಬಗ್ಗೆ.

ಕಂತುಗಳ ಜನಪ್ರಿಯತೆಯ ಅಂದಾಜು

[ಬದಲಾಯಿಸಿ]

CBS ವಾಹಿನಿಯಲ್ಲಿ ಪ್ರಸಾರವಾದ ದಿ ಬಿಗ್‌ ಬ್ಯಾಂಗ್‌ ಧಿಯರಿ ಯ ಪ್ರತಿ ಕಂತಿಗೆ ಒಟ್ಟು ವೀಕ್ಷಕರ ಸಂಖ್ಯೆ ಸರಾಸರಿ ಜನಪ್ರಿಯತೆಯ ಆಧಾರಿತ :

ಭಾಗ ಸಮಯ ಸ್ಥಾನ (EDT) ಕಂತಿನ ಪ್ರಥಮಪ್ರದರ್ಶನ ಮುಕ್ತಾಯ ಕಂತು TVಯಲ್ಲಿ ಪ್ರಸಾರವಾದ ವರ್ಷ ಶ್ರೇಣಿ ವೀಕ್ಷಕರು
(ದಶಲಕ್ಷಗಳಲ್ಲಿ)
1 ಸೋಮವಾರ 8:30 P.M. (ಸೆಪ್ಟೆಂಬರ್‌ 24 – ನವೆಂಬರ್‌ 12, 2007)
ಸೋಮವಾರ 8:00 P.M. (ಮಾರ್ಚ್ 17 – ಮೇ 19, 2008)
ಸಪ್ಟೆಂಬರ್‌ 24, 2007 ಮೇ 19, 2008 2007–2008 #59 [೨೪] 8.31 [೨೪]
2 ಸೋಮವಾರ 8:00 P.M. (ಸೆಪ್ಟೆಂಬರ್‌ 22, 2008 – ಮೇ 11, 2009) ಸೆಪ್ಟೆಂಬರ್‌ 22, 2008 ಮೇ 11, 2009 2008–2009 #44 10.14
3 ಸೋಮವಾರ 9:30 P.M. ಸೆಪ್ಟೆಂಬರ್‌ 21, 2009 ಮೇ 2010 2009–2010

! |}

UK ವಿತರಣೆ ಮತ್ತು ಜನಪ್ರಿಯತೆ

[ಬದಲಾಯಿಸಿ]

2008ರ ಫೆಬ್ರುವರಿ 14ರಂದು, "ದಿ ಬಿಗ್‌ ಬ್ಯಾಂಗ್‌ ಥಿಯರಿ" TV ಸರಣಿಯು UKದ ಚಾನೆಲ್‌ 4 ವಾಹಿನಿಯಲ್ಲಿ ತನ್ನ ಮೊದಲ ಪ್ರದರ್ಶನವಾಯಿತು. ಇದರ ವೀಕ್ಷಣಾ ಸರಾಸರಿ 1.0 ದಶಲಕ್ಷವಾಗಿತ್ತು. ಅದರ ಮುಂದಿನ ವಾರ ಪ್ರಸಾರವಾದ ಎರಡನೆಯ ಕಂತಿಗೂ ಸಹ 1.0 ದಶಲಕ್ಷ ವೀಕ್ಷಕರಿದ್ದರು.ಮೂರನೆಯ ಕಂತಿಗೆ,ಸರಾಸರಿ 1.1 ದಶಲಕ್ಷ ವೀಕ್ಷಕರು ಸ್ಪಂದಿಸಿದರು. ಹಿಂದಿನ ಸಂಜೆ ಚಾನೆಲ್‌ 4ರ ಡಿಜಿಟಲ್‌ ಶಾಖೆಯಾದ E4 ವಾಹಿನಿಯಲ್ಲಿ ಈ ಸರಣಿಯು "ಮೊದಲ ನೋಟ"ದ ರೂಪದಲ್ಲಿ ಪ್ರಸಾರಗೊಂಡು, ಸರಾಸರಿ 400,000 ವೀಕ್ಷಕರು ಸಂದಿದ್ದಾರೆ. ಐದನೆಯ ಕಂತು 880,000 ವೀಕ್ಷಕರನ್ನು ಪಡೆಯಿತು. ಮೊದಲ ಐದು ಕಂತುಗಳ ಬಳಿಕ, ವೀಕ್ಷಕರ ಸಂಖ್ಯೆ ಸರಾಸರಿಯು 1 ದಶಲಕ್ಷದ ಮಟ್ಟದಲ್ಲಿಯೇ ಠಳಾಯಿಸುತ್ತಿದೆ. 13ನೆಯ ಕಂತನ್ನು 1.3 ದಶಲಕ್ಷ ವೀಕ್ಷಕರು ವೀಕ್ಷಿಸಿದರು ಮತ್ತು ಅದು ಅತಿ ಹೆಚ್ಚು ಜನರಿಂದ ವೀಕ್ಷಿಸಲಾದ ಕಂತಾಗಿತ್ತು.[೨೫]

2008ರ ಡಿಸೆಂಬರ್‌ ತಿಂಗಳಲ್ಲಿ, ವರ್ಜಿನ್‌ ಮೀಡಿಯಾ ತಮ್ಮ TV ಚಾಯ್ಸ್‌ ಆನ್‌ ಡಿಮ್ಯಾಂಡ್‌ ಸರ್ವಿಸ್‌ ವಾಹಿನಿಯಲ್ಲಿ ಮೊದಲ ಕಂತಿನ ಮೊದಲ ಒಂಬತ್ತು ಕಂತುಗಳನ್ನು ಲಭ್ಯಗೊಳಿಸಿತು. ಮೊದಲನೆಯ ಭಾಗದ ಉಳಿದ ಕಂತುಗಳನ್ನು 2009ರ ಜನವರಿ ತಿಂಗಳಲ್ಲಿ ಲಭ್ಯವಾಗುವಂತೆ ಮಾಡಿತು.

ಪ್ರಶಸ್ತಿಗಳು

[ಬದಲಾಯಿಸಿ]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
ವರ್ಷ ಫಲಿತಾಂಶ ವರ್ಗ ಪ್ರಶಸ್ತಿ ಸಮಾರಂಭ ವಿಜೇತ/ವಿಜೇತೆ
2009 TBA ಹಾಸ್ಯ ಸರಣಿಯಲ್ಲಿ ಅತ್ಯುತ್ತಮ ನಾಯಕ ನಟ 61ನೇ ಎಮ್ಮಿ ಪ್ರಶಸ್ತಿ ಅವಾದ್ಸ್ ಜಿಮ್‌ ಪಾರ್ಸನ್ಸ್‌
ನಾಮನಿರ್ದೇಶನ ಹಾಸ್ಯ ಸರಣಿಯಲ್ಲಿ ಅತ್ಯುತ್ತಮ ಅತಿಥಿ ನಟಿ
ನಾಮನಿರ್ದೇಶನ ಬಹು-ಕ್ಯಾಮೆರಾಗಳನ್ನು ಒಳಗೊಂಡ ಸರಣಿಯಲ್ಲಿ ಅತ್ಯುತ್ತಮ ಕಲಾ ನಿರ್ದೇಶನ
ಗೆಲುವು ಹಾಸ್ಯದಲ್ಲಿ ಅತ್ಯುತ್ತಮ ಸಾಧನೆ TCA ಅವಾರ್ಡ್ಸ್‌
ಗೆಲುವು ಹಾಸ್ಯದಲ್ಲಿ ವೈಯಕ್ತಿಕ ಸಾಧನೆ ಜಿಮ್‌ ಪಾರ್ಸನ್ಸ್‌
ನಾಮನಿರ್ದೇಶನ ಅತ್ಯುತ್ತಮ ಹಾಸ್ಯ ಸರಣಿ ಎವ್ವಿ ಅವಾರ್ಡ್‌
ಗೆಲುವು ಹಾಸ್ಯ ಸರಣಿಯಲ್ಲಿ ಅತ್ಯುತ್ತಮ ನಟಿ ಕೇಲೀ ಕ್ವೋಕೊ

ಅಂತಾರಾಷ್ಟ್ರೀಯ ಪ್ರಸಾರ

[ಬದಲಾಯಿಸಿ]
ದೇಶ / ವಲಯ ಜಾಲ(ಗಳು) ಪ್ರಸಾರಗೊಂಡ ಅವಧಿ ಟಿಪ್ಪಣಿಗಳು
 ಅಲ್ಬೇನಿಯ ಡಿಗಿ+ ಏಪ್ರಿಲ್‌ 19, 2009 — ಈತನಕ
 ಅರ್ಜೆಂಟೀನ ವಾರ್ನರ್‌ ಚಾನೆಲ್‌ ನವೆಂಬರ್‌ 2007 — ಈತನಕ ಸಂಭಾಷಣೆಗಳನ್ನು ಡಬ್‌ ಮಾಡಲಾಗಿರುವುದಿಲ್ಲ; ಬದಲಿಗೆ ವಿವರಣಾತ್ಮಕ ಅಡಿ ಬರಹಗಳನ್ನು ಬಳಸಲಾಗುತ್ತದೆ.
 ಆಸ್ಟ್ರೇಲಿಯಾ ನೈನ್‌ ನೆಟ್ವರ್ಕ್‌
ಗೋ!
2008 — ಈತನಕ
ಆಗಸ್ಟ್‌ 2009 — ಈತನಕ
ಹೊಸ ಕಂತುಗಳು
ಪುನರಾವರ್ತನೆಗಳು
 ಬಾಂಗ್ಲಾದೇಶ ಜಿ ಕೆಫೆ
 Belgium ಲಾ ಉನೆ ಆಗಸ್ಟ್‌ 31, 2008 — ಈತನಕ
 ಬೊಲಿವಿಯ ವಾರ್ನರ್‌ ಚಾನೆಲ್‌ ನವೆಂಬರ್‌ 2007 — ಈತನಕ
 Brazil ವಾರ್ನರ್‌ ಚಾನೆಲ್‌ ನವೆಂಬರ್‌ 2007 — ಈತನಕ ಸಂಭಾಷಣೆಗಳನ್ನು ಡಬ್‌ ಮಾಡಲಾಗಿರುವುದಿಲ್ಲ; ಬದಲಿಗೆ ವಿವರಣಾತ್ಮಕ ಅಡಿ ಬರಹಗಳನ್ನು ಬಳಸಲಾಗುತ್ತದೆ (ಗೋಲ್‌ ಟ್ರ್ಯಾನ್ಸ್ಪೊರ್ಟೆಸ್‌ ಏರಿಯೊಸ್‌ ಅಟ್‌ ಪ್ಲೇನ್ಸ್‌ ಬಳಸಿದ ಆವೃತ್ತಿಯನ್ನು ಹೊರತುಪಡಿಸಿ)
 Bulgaria ನೊವಾ ಟೆಲಿವಿಷನ್‌ ನವೆಂಬರ್‌ 5, 2008 — ಈತನಕ
 ಕೆನಡಾ A
CTV
CBS
2007–08, 2009 — ಈತನಕ
2008–09
 ಚಿಲಿ ವಾರ್ನರ್‌ ಚಾನೆಲ್‌ ನವೆಂಬರ್‌ 2007 — ಈತನಕ ಸಂಭಾಷಣೆಗಳನ್ನು ಡಬ್‌ ಮಾಡಲಾಗಿರುವುದಿಲ್ಲ; ಬದಲಿಗೆ ವಿವರಣಾತ್ಮಕ ಅಡಿ ಬರಹಗಳನ್ನು ಬಳಸಲಾಗುತ್ತದೆ.
 ಕೊಲೊಂಬಿಯ ವಾರ್ನರ್‌ ಚಾನೆಲ್‌
 ಕೋಸ್ಟಾ ರಿಕ ವಾರ್ನರ್‌ ಚಾನೆಲ್‌,ಟೆಲಿಟಿಕಾ
 ಕ್ಯೂಬಾ ಮಲ್ಟಿವಿಷನ್‌
 Cyprus LTV
 Czech Republic ಪ್ರೈಮಾ COOL ಏಪ್ರಿಲ್‌ 2009 — ಈತನಕ
 ಡೆನ್ಮಾರ್ಕ್ 6'ಎರೆನ್‌ ಜನವರಿ 2009 — ಈತನಕ
 ಡೊಮಿನಿಕ ಗಣರಾಜ್ಯ ವಾರ್ನರ್‌ ಚಾನೆಲ್‌
 ಈಕ್ವಡಾರ್ ವಾರ್ನರ್‌ ಚಾನೆಲ್‌
 ಎಲ್ ಸಾಲ್ವಡಾರ್ ವಾರ್ನರ್‌ ಚಾನೆಲ್‌ ನವೆಂಬರ್‌ 2007 — ಈತನಕ
 ಫಿಜಿ ಮಾಯ್‌ TV
 Finland ಸಬ್‌ ಸೆಪ್ಟೆಂಬರ್‌ 8, 2008 — ಈತನಕ ರಿಲಿಟ್‌ ಹೂರುಸ್ಸಾ(ಮಿಸ್ಟಿ ಗ್ಲಾಸಸ್‌) ಎಂದು ಪ್ರಸಾರವಾಗುತ್ತಿದೆ
 France TPS ಸ್ಟಾರ್‌ ಅಕ್ಟೋಬರ್‌ 18, 2008 — ಈತನಕ
 France NRJ 12
 Greece ಸ್ಟಾರ್‌ ಚಾನೆಲ್‌ ಸೆಪ್ಟೆಂಬರ್‌ , 2009 — ಈತನಕ
 Germany ಪ್ರೊ7 ಜುಲೈ 11, 2009 — ಈತನಕ[೨೬]
 ಗ್ವಾಟೆಮಾಲ ವಾರ್ನರ್‌ ಚಾನೆಲ್‌
[[File:|23x15px|border |alt=|link=]] ಹೊಂಡುರಾಸ್ ವಾರ್ನರ್‌ ಚಾನೆಲ್‌
 ಐಸ್ಲೆಂಡ್ ಸ್ಟೊ 2 ಆಗಸ್ಟ್‌ 2008 — ಈತನಕ
 ಭಾರತ ಜೀ ಕೆಫೆ
 ಐರ್ಲೆಂಡ್‌ RTÉ ಟೂ ಜುಲೈ 11, 2008 — ಈತನಕ
 ಇಸ್ರೇಲ್ ಯೆಸ್‌ ಸ್ಟಾರ್ಸ್‌ ಹಾಸ್ಯ ಜುಲೈ 2008 — ಈತನಕ
 ಇಟಲಿ ಸ್ಟೀಲ್‌ ಜನವರಿ 19, 2008 — ಈತನಕ ಡಬ್ಬಿಂಗ್‌ ಕಳಪೆ ಗುಣಮಟ್ಟದ್ದಾಗಿದ್ದ ಕಾರಣ ಈ ಸರಣಿಯು ಬಹಳಷ್ಟು ಟೀಕೆಗೊಳಗಾಯಿತು; 'ನರ್ಡಿ-ಗೀಕಿ' ನಗೆಹನಿಗಳ ಬಹುಭಾಗವನ್ನು 'ಅಸಮಂಜಸ'ವೆಂದು ಟೀಕಿಸಲಾಯಿತು.ಇದನ್ನು ಸರಿಪಡಿಸಲು, ಮೊದಲನೆಯ ಭಾಗದ ಒಂಬತ್ತನೆಯ ಕಂತಿನಿಂದ, ಇನ್ನಷ್ಟು ವಿಶ್ವಸನೀಯ ಅನುವಾದದಿಂದ ನಿರೂಪಿಸಲ್ಪಟ್ಟು ಡಬ್ಬಿಂಗ್‌ ಅನ್ನು ಗಮನಾರ್ಹವಾಗಿ ಉತ್ತಮ ಗುಣಮಟ್ಟಕ್ಕೆ ಏರಿಸಿತು.
 ಮಲೇಶಿಯ ntv7, ಮೆಟ್ರೊವಿಷನ್‌
 ಮೆಕ್ಸಿಕೋ ವಾರ್ನರ್‌ ಚಾನೆಲ್‌ ನವೆಂಬರ್‌ 2008 — ಈತನಕ ಸಂಭಾಷಣೆಗಳನ್ನು ಡಬ್‌ ಮಾಡಲಾಗಿರುವುದಿಲ್ಲ; ಬದಲಿಗೆ ವಿವರಣಾತ್ಮಕ ಅಡಿ ಬರಹಗಳನ್ನು ಬಳಸಲಾಗುತ್ತದೆಗಿದೆ.
 ನೆದರ್ಲ್ಯಾಂಡ್ಸ್ ವೆರೊನಿಕಾ ಮಾರ್ಚ್ 2, 2009 — ಈತನಕ
 ನ್ಯೂ ಜೀಲ್ಯಾಂಡ್ TV2 ಸೆಪ್ಟೆಂಬರ್‌ 17, 2008 — ಈತನಕ
 ನಿಕರಾಗುವ ವಾರ್ನರ್‌ ಚಾನೆಲ್‌
 ನಾರ್ವೇ TVNorge
 ಪಾಕಿಸ್ತಾನ ಜೀ ಕೆಫೆ
 ಪನಾಮಾ ವಾರ್ನರ್‌ ಚಾನೆಲ್‌
 ಪೆರಗ್ವೆ ವಾರ್ನರ್‌ ಚಾನೆಲ್‌
 ಪೆರು ವಾರ್ನರ್‌ ಚಾನೆಲ್‌ ನವೆಂಬರ್‌ 2007 — ಈತನಕ
 ಫಿಲಿಪ್ಪೀನ್ಸ್ ಜ್ಯಾಕ್‌ TV C/S 9
 Poland TVN ಸೀಡೆಮ್‌ ನವೆಂಬರ್‌ 20, 2008 — ಈತನಕ 'ಟೆಯೊರಿಯಾ ವೀಲ್ಕೀಗೊ ಪೊಡ್ರಿವು' ಎಂದು ಪ್ರಸಾರಗೊಳ್ಳುತ್ತಿದೆ
 ಪೋರ್ಚುಗಲ್ SET, RTP2 ಜುಲೈ 14, 2008 — ಈತನಕ
 ಮೆಸಡೋನಿಯ ಕೆನಾಲ್‌ 5
 Slovenia ಕೆನಾಲ್‌ A ಫೆಬ್ರುವರಿ 23, 2009 — ಈತನಕ ವೆಲಿಕಿ ಪೊಲೊವ್ಕಿ (ದಿ ಬಿಗ್‌ ಬ್ಯಾಂಗರ್ಸ್‌) ಎಂದು ಪ್ರಸಾರಗೊಳ್ಳುತ್ತಿದೆ
 ದಕ್ಷಿಣ ಆಫ್ರಿಕಾ M-ನೆಟ್‌
 Spain ಆಂಟೆನಾ.ನಿಯಾಕ್ಸ್‌
ಆಂಟೆನಾ 3
ಜೂನ್‌ 12, 2008 — ಈತನಕ
ಜುಲೈ 18, 2009 — ಈತನಕ
 Sweden ಕೆನಾಲ್‌ 5
 ಥೈಲ್ಯಾಂಡ್ ಟ್ರೂ ಸರಣಿ ಮೇ 26, 2008 — ಈತನಕ
 ಟ್ರಿನಿಡಾಡ್ ಮತ್ತು ಟೊಬೆಗೊ TV6 2008 — ಈತನಕ
 ಟರ್ಕಿ CNBC-e[೨೭] ಸೆಪ್ಟೆಂಬರ್‌ 9, 2008 — ಈತನಕ
 ಉಕ್ರೇನ್ ಇಂಟರ್‌ ಚಾನೆಲ್‌
 ಯುನೈಟೆಡ್ ಕಿಂಗ್ಡಂ ಚಾನೆಲ್‌ 4, E4
 ಉರುಗ್ವೆ ವಾರ್ನರ್‌ ಚಾನೆಲ್‌
 ವೆನೆಜುವೆಲಾ ವಾರ್ನರ್‌ ಚಾನೆಲ್‌ ಸಂಭಾಷಣೆಗಳನ್ನು ಡಬ್‌ ಮಾಡಲಾಗಿರುವುದಿಲ್ಲ; ಬದಲಿಗೆ ವಿವರಣಾತ್ಮಕ ಅಡಿ ಬರಹಗಳನ್ನು ಬಳಸಲಾಗಿದೆ.

ಆಕರಗಳು

[ಬದಲಾಯಿಸಿ]
  1. "As sold on [[iTunes Music Store]]". Archived from the original on 2011-10-18. Retrieved 2008-10-10. {{cite web}}: URL–wikilink conflict (help)
  2. "ದಿ ಬಿಗ್‌ ಬ್ಯಾಂಗ್‌ ಧಿಯರಿ" ಪಾತ್ರವರ್ಗ ಮತ್ತು ವಿವರಗಳು — TVGuide.com . 2009ರ ಫೆಬ್ರುವರಿ 14ರಂದು ಮತ್ತೆ ಪಡೆಡದ್ದು.
  3. ೩.೦ ೩.೧ Gary Strauss (2007-04-11). "There's a science to CBS' Big Bang Theory". USA Today. Retrieved 2008-11-07.
  4. ೪.೦ ೪.೧ Scott D. Pierce (2007-10-08). "He's a genius". Deseret News. Archived from the original on 2009-01-08. Retrieved 2008-12-11.
  5. "Details, Artwork & Press Release for 1st Season". TVOnMedia.com. Archived from the original on 2009-04-14. Retrieved 2008-05-24.
  6. Pierce, Scott D. (2007-09-22.). "Yes, it's a 'Big Bang.'". Deseret Morning News. Archived from the original on 2009-02-04. Retrieved 2008-12-13. {{cite web}}: Check date values in: |date= (help)
  7. http://uk.eonline.com/uberblog/watch_with_kristin/b103928_big_bang_theory_deal_done_two_more.html
  8. http://www.nj.com/entertainment/tv/index.ssf/2009/08/the_tca_awards_turn_25_sepinwa.html
  9. "The Pork Chop Indeterminacy". The Big Bang Theory. Season 1. Episode 15. 2008-05-05. 4:06 minutes in. 
  10. "The Jerusalem Duality". The Big Bang Theory. Season 1. Episode 12. 2001-04-14. 
  11. ೧೧.೦ ೧೧.೧ "'Big Bang Theory' scoop: Sara Gilbert taken off contract | The Big Bang Theory | Ausiello Files | EW.com". Ausiellofiles.ew.com. January 23, 2009. Archived from the original on 2009-02-27. Retrieved 2009-05-02.
  12. "Sara Gilbert". Imdb.com. Retrieved 2009-05-02.
  13. "Breaking News - Development Update: May 22-26 (Weekly Round-Up)". TheFutonCritic.com. Retrieved 2009-05-02.
  14. "CBS PICKS UP 'BANG,' 'POWER' PLUS FOUR DRAMAS". The Futon Critic. 2007-05-14.
  15. "Breaking News — Cbs Gives Freshman Comedy "The Big Bang Theory" And Drama "The Unit" Full Season Orders" (Press release). CBS. 2007-10-19. Retrieved 2008-12-13.
  16. "CBS Sets Series Return Dates". Archived from the original on 2008-02-16. Retrieved 2008-02-13.
  17. "Production Stops on at least 6 Sitcoms". Archived from the original on 2007-12-13. Retrieved 2007-11-06.
  18. "CBS Picks Up 11 Series". The Futon Critic. 2008-02-15. Retrieved 2008-02-15.
  19. "Big Bang Theory: Deal Is Done for Two More Seasons!". Retrieved 2009-11-03.
  20. Andreeva, Nellie (2009-03-18). "CBS renews 'Men,' 'Big Bang'". Hollywoodreporter.com. Archived from the original on 2009-03-22. Retrieved 2009-05-02.
  21. Barenaked Ladies. "Big Bang Theory Theme". Amazon Digital Services, Inc.
  22. Samantha Holloway (July 5), The top five (plus one) TV theme songs, The Examiner, archived from the original on 2009-10-05, retrieved 2009-11-02 {{citation}}: Check date values in: |date= (help)
  23. http://the-big-bang-theory.com/story/1206/season-2-DVD-coming-in-september/
  24. ೨೪.೦ ೨೪.೧ "SEASON PROGRAM RANKINGS (THROUGH 5/25)" (Press release). ABC Medianet. 2008-05-28. Archived from the original on 2009-08-22. Retrieved 2008-12-13.
  25. "Overnights 2008-02-14". Channel 4 Sales. 2008-02-15. Retrieved 2008-02-17.
  26. Weis, Manuel (2009-09-01). "Nachmittags: ProSieben setzt auf «Big Bang Theory»". Quotenmeter.de. Retrieved 2009-06-20.
  27. "KARS,IT DÜNYALAR ÇARPIS,INCA..." Archived from the original on 2009-01-01. Retrieved 2008-12-13.

ಹೊರಗಿನ ಕೊಂಡಿಗಳು

[ಬದಲಾಯಿಸಿ]