ಪರ್ಸಿಯಸ್
ಪರ್ಸಿಯಸ್ ಎನ್ನುವುದು ಉತ್ತರಾಕಾಶದ ಪ್ರಧಾನ ನಕ್ಷತ್ರಪುಂಜಗಳ ಪೈಕಿ ಒಂದು. ವಿಷುವದಂಶ 3 ಗಂ. ಘಂಟಾವೃತ್ತಾಂಶ 450 ಉ. ಆಕಾಶಗಂಗೆಯ (ಮಿಲ್ಕಿವೇ) ಹಾದಿಯಲ್ಲಿ ಆರೀಗ ಮತ್ತು ಆಂಡ್ರೊಮಿಡ ಪುಂಜಗಳ ನಡುವೆ ಇದೆ. ಈ ಪುಂಜದ 130ಕ್ಕೂ ಹೆಚ್ಚಿನ ನಕ್ಷತ್ರಗಳು ಬರಿ ಕಣ್ಣಿಗೆ ಕಾಣಿಸುತ್ತವೆ. ಗ್ರೀಕರ ಪುರಾಣದ ರೀತ್ಯ ಹಾವುಗೂದಲಿನ ಮೂವರು ರಾಕ್ಷಸಸ್ತ್ರೀಯರ ಪೈಕಿ ಮಿಡ್ಯೂಸ ಎಂಬಾಕೆಯನ್ನು ಸಂಹರಿಸಿದ ಪರ್ಷಿಯಸ್ ಎಂಬಾತನನ್ನು[೧] ಈ ಪುಂಜ ಪ್ರತಿನಿಧಿಸುತ್ತದೆ. ಮಿಡ್ಯೂಸಳನ್ನು ಸಂಹರಿಸಿ ಪರ್ಸಿಯಸ್ ಹಿಂದಿರುಗುತ್ತಿದ್ದಾಗ ಕಡಲದೈತ್ಯವೊಂದರ (ಪೆಗಸಸ್) ಅಪಾಯದಿಂದ ಆಂಡ್ರೊಮಿಡ ರಾಜಕುಮಾರಿಯನ್ನು ಪಾರುಮಾಡಿದ ಎಂಬ ಕಥೆಯೂ ಉಂಟು.[೨] ಈ ಪುಂಜದ ಎರಡು ನಕ್ಷತ್ರಗಳು ಎರಡನೆಯ ಕಾಂತಿ ವರ್ಗದ ನಕ್ಷತ್ರದಷ್ಟು ಪ್ರಕಾಶಬೀರುತ್ತವೆ. ಇವುಗಳಲ್ಲಿ ಒಂದು ಮಿಡ್ಯೂಸಳ ಶಿರವನ್ನು ಪ್ರತಿನಿಧಿಸುತ್ತದೆ. ಇದೇ ಚರಕಾಂತಿಯ ಅಲ್ಗಾಲ್ ನಕ್ಷತ್ರ. ಇನ್ನೊಂದು ಮಿರ್‌ಫಾಕ್. ಪರ್ಸಿಯಸ್ ಪುಂಜದ ಹೆಚ್ಚಿನ ಪ್ರಕಾಶಮಯ ನಕ್ಷತ್ರಗಳ ಪ್ರದೇಶವನ್ನು ದೂರದರ್ಶಕದ ಮೂಲಕ ವೀಕ್ಷಿಸಿದರೆ ದೃಶ್ಯ ಆಕರ್ಷಕವಾಗಿರುತ್ತದೆ. ಈ ಪುಂಜದ ಪ್ರಧಾನ ನಕ್ಷತ್ರಗಳಿಗೂ ಕೆಶಿಯೋಪಿಯ ನಕ್ಷತ್ರಪುಂಜಕ್ಕೂ ನಡುವೆ ಇರುವ ಯಮಳಗುಚ್ಛ ಬರಿಯ ಕಣ್ಣಿಗೆ ಮಸುಕುಬಿಂದುವಾಗಿ ಕಾಣಿಸಿವುದಾದರು ದೂರದರ್ಶಕ ಮೂಲಕ ಅಲ್ಲಿ ನೂರಾರು ಕಿರಿಯ ನಕ್ಷತ್ರಗಳು ಕಾಣಿಸುತ್ತವೆ. 1901ರಲ್ಲಿ ಅಲ್ಗಾಲ್ ನಕ್ಷತ್ರದ ಬಳಿ ನವತಾರೆ (ನೋವಾ) ಕಾಣಿಸಿಕೊಂಡು ಕೆಲವು ತಿಂಗಳುಗಳಲ್ಲೇ ಅದೃಶ್ಯವಾಯಿತೆನ್ನಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Ridpath, I. "Star Tales – Perseus". Retrieved 28 July 2013.
- ↑ Ridpath, I. "Star Tales – Andromeda". Retrieved 28 July 2013.
ಹೊರಗಿನ ಕೊಂಡಿಗಳು
[ಬದಲಾಯಿಸಿ]- The Deep Photographic Guide to the Constellations: Perseus
- The clickable Perseus
- Warburg Institute Iconographic Database (medieval and early modern images of Perseus)
- . Encyclopædia Britannica (11th ed.). 1911.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)