ಮೋಡಿಲಿಪಿ
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಮೋಡಿಲಿಪಿಯು ಬರೆಯುವಾಗ ಲೇಖನಿಯನ್ನು ಮೇಲಕ್ಕೆ ಎತ್ತದೆ ಬರೆಯಲಾಗುತ್ತಿದ್ದ ಲಿಪಿಯಾಗಿದೆ. ಇದರಲ್ಲಿ ಪೂರ್ಣ ವಿರಾಮ ಇಲ್ಲ. ಅಕ್ಷರಗಳು ಮೋಡಿ ಮಾಡುವಂತೆ ಇರುತ್ತವೆ. ಕೆಲ ಶತಮಾನಗಳ ಹಿಂದೆ ಈ ಲಿಪಿ ಬಳಕೆಯಲ್ಲಿತ್ತು. ಮರಾಠಿ , ಕನ್ನಡ,ಗುಜರಾತಿ,ಉರ್ದು ,ಹಿಂದಿ,ತಮಿಳು ಭಾಷೆಗಳನ್ನೂ ಈ ಲಿಪಿಯಲ್ಲಿ ಬರೆಯುತ್ತಿದ್ದರು. ಲೆಕ್ಕ ಪತ್ರಗಳನ್ನು, ರಹಸ್ಯ ಮಾಹಿತಿಗಳನ್ನು ಮತ್ತು ಕೆಲ ಮುಖ್ಯ ಘಟನೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಈ ಲಿಪಿಯಲ್ಲಿ ದಾಖಲಿಸಲಾಗುತ್ತಿತ್ತು.
ಇನ್ನಷ್ಟು ಮಾಹಿತಿ
[ಬದಲಾಯಿಸಿ]- ಮೋಡಿಲಿಪಿಯಲ್ಲಿ ಬರೆಯಲಾದ ತಾಳೆಗರಿ ಮತ್ತು ಹಳೆಯ ಕಾಗದದ ದಾಖಲೆಗಳು ಲಭ್ಯ ಇವೆ.
- ಈ ಲಿಪಿಯನ್ನು ಸಲೀಸಾಗಿ ಓದುವವರು ವಿರಳ. ಹೆಳವರು ‘ಮೋಡಿಲಿಪಿ’ಯಲ್ಲಿನ ಮಾಹಿತಿಯನ್ನು ತಮ್ಮ ಹಿರಿಯರಿಂದ ಕನ್ನಡಕ್ಕೆ ಅನುವಾದಿಸಿಕೊಂಡು ಓದುತ್ತಾರೆ.
- ಇದು ಮಧ್ಯಕಾಲದ ಲಿಪಿ. ಮರಾಠಿ, ಪರ್ಶಿಯನ್, ಅರೇಬಿಕ್ ಪದಗಳಲ್ಲದೇ ಕನ್ನಡ ಶಬ್ದಗಳು ಈ ಲಿಪಿಯಲ್ಲಿ ಬಳಕೆಯಾಗಿವೆ.
- ಮೋಡಿಲಿಪಿ 13 ನೇ ಶತಮಾನದಿಂದ 20 ನೇ ಶತಮಾನದ ಕೊನೆವರೆಗೂ ಬಳಕೆಯಲ್ಲಿತ್ತು. ದೇವಗಿರಿಯ ಯಾದವರ ಕಾಲದಲ್ಲಿ ಪ್ರಾರಂಭವಾಗಿ ಮರಾಠರು ಹಾಗೂ ಪೇಶ್ವೆಗಳ ಕಾಲದಲ್ಲಿ ಹೆಚ್ಚು ಬಳಕೆಯಾಯಿತು. ಗುಪ್ತ ವಿಷಯಗಳನ್ನು ಕಾಪಾಡುವ ಸಲುವಾಗಿ ಮತ್ತು ವೈರಿಗಳಿಗೆ ಗೊತ್ತಾಗದ ಹಾಗೇ ವಿಷಯಗಳನ್ನು ತಿಳಿಸಲು ಈ ಲಿಪಿಯನ್ನು ಬಳಸಲಾಗುತ್ತಿತ್ತು.
- ಭಾರತಕ್ಕೆ ವ್ಯಾಪಾರಕ್ಕೆ ಬಂದ ಬ್ರಿಟಿಷರಿಗೂ ಈ ಲಿಪಿಯ ಪರಿಚಯವಿತ್ತು ಎನ್ನಲಾಗಿದೆ. ಧಾರವಾಡ, ಬೆಳಗಾವಿ, ಹಾವೇರಿ ಶಾಲೆಗಳಲ್ಲಿ ಈ ಲಿಪಿಯನ್ನು ಮಕ್ಕಳಿಗೆ ಕಲಿಸಲಾಗುತ್ತಿತ್ತು. ಮೈಸೂರಿನ ಸರ್ಕಾರಿ ಕಚೇರಿಗಳಲ್ಲೂ ಈ ಲಿಪಿ ಬಳಕೆಯಾಗಿದೆ. ಪುಣೆಯ ಸಂಶೋಧನಾ ಕೇಂದ್ರದಲ್ಲಿ ಮೋಡಿಲಿಪಿಗಳ ದಾಖಲೆಗಳ ಸಂಗ್ರಹವಿದೆ.
- ಉತ್ತರ ಕರ್ನಾಟಕದ ಕೆಲವೆಡೆ ಭೂಮಿಗೆ ಸಂಬಂಧಿಸಿದ ದಾಖಲೆಗಳು ಇದೇ ಲಿಪಿಯಲ್ಲಿವೆ. ಇವುಗಳ ಮಾಹಿತಿಗಳನ್ನು ಕನ್ನಡಕ್ಕೆ ಅನುವಾದಿಸಬಲ್ಲ ಲಿಪಿ ತಜ್ಞರು ವಿರಳ.
- ಕರ್ನಾಟಕದಲ್ಲಿ ಮರಾಠರ ಪ್ರವೇಶದ ಬಗೆಗಿನ ಮಾಹಿತಿಗಳು, ಜಮಖಂಡಿ, ಮುಧೋಳ, ರಾಮದುರ್ಗ, ವಿಜಯಪುರ ಮತ್ತು ಸವಣೂರಗಳಲ್ಲಿ ಪೇಶ್ವೆಗಳ ಆಡಳಿತದ ಬಗೆಗಿನ ಮಾಹಿತಿಗಳು ಮೋಡಿಲಿಪಿಯಲ್ಲಿವೆ.
- ಉತ್ತರ ಕರ್ನಾಟಕದ ದೇಸಾಯಿಗಳು, ಗೌಡರು ಮತ್ತು ಕುಲಕರ್ಣಿಗಳ ಮನೆಯಲ್ಲಿರುವ ತಾಳೆಗರಿಗಳು ಮತ್ತು ಕಾಗದಗಳು ದೇವರ ಮನೆಯ ಜಗುಲಿಗಳಲ್ಲಿ ಪೂಜಿಸಲಾಗುತ್ತಿವೆ.
- ಹದಿಮೂರನೆಯ ಶತಮಾನದಿಂದ 1950 ರವರೆಗೆ, ಮರಾಠಿ ಭಾಷೆಯನ್ನು ಮೋಡಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ೧೯೬೦ರ ದಶಕದವರೆಗೂ ಮಹಾರಾಷ್ಟ್ರದ ಶಾಲೆಗಳಲ್ಲಿ ಇದನ್ನು ಕಲಿಸುತ್ತಿದರು.
- ಮೋಡಿ ಲಿಪಿಯ ಹರಹು ದೆಹಲಿಯಿಂದ ತಂಜಾವೂರಿನವರೆಗೂ ಇತ್ತು.
- ಮಹಾರಾಷ್ಟ್ರದಲ್ಲಿ ಕ್ರಿ.ಶ. ೧೭ ನೇ ಶತಮಾನದಿಂದ ೧೯೫೦ ರವರೆಗೆ ಮರಾಠಿ ಭಾಷೆಯನ್ನು ಬರೆಯಲು ಬಳಕೆಯಲ್ಲಿತ್ತು.
- ಪೇಶ್ವೆಗಳಿಂದ ಕನ್ನಡದಲ್ಲಿ ಮೋಡಿ ಲಿಪಿ ಬಳಕೆಗೆ ಬಂದಿತು.
- ಮೈಸೂರು ಸಂಸ್ಥಾನವು ಹೈದರಾಲಿಯ ಕೈಗೆ ಹೋದ ನಂತರ ದಿವಾನ್ ಪೂರ್ಣಯ್ಯ ( ಇವರು ಮರಾಠಿ ಮೂಲದವರು) ನವರ ಕಾಲದಲ್ಲಿ ಕನ್ನಡ ಮೋಡಿ ಲಿಪಿ ಹೆಚ್ಚು ಬಳಕೆಯಲ್ಲಿತ್ತು. ಟಿಪ್ಪುವಿನ ಮರಣದ ನಂತರವೂ ಮೈಸೂರು ಆಸ್ಥಾನದಲ್ಲಿದ್ದ ಮರಾಠಿ ಕಾರಕೂನರು ಈ ಲಿಪಿಯನ್ನು ಬಳಸುತ್ತಿದ್ದರು.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Evolution of Kannada Script
- ಮೋಡಿ ಮಾಡುವ ಮೋಡಿ ಲಿಪಿ[ಶಾಶ್ವತವಾಗಿ ಮಡಿದ ಕೊಂಡಿ] - ಪ್ರಜಾವಾಣಿ ಪತ್ರಿಕೆಯಲ್ಲಿನ ಲೇಖನ
- ಇನ್ನೊಂದು ಪ್ರಜಾವಾಣಿ ಲೇಖನ