ಯೌಧೇಯ
ಯೌಧೇಯ ಅಥವಾ ಯೌಧೇಯ ಗಣ ಸಿಂಧೂ ನದಿ ಮತ್ತು ಗಂಗಾ ನದಿ ನಡುವಿನ ಪ್ರದೇಶದಲ್ಲಿ ವಾಸಿಸುತ್ತಿದ್ದ ಒಂದು ಪ್ರಾಚೀನ ಸಂಘವಾಗಿತ್ತು. ಇವರನ್ನು ಪಾಣಿನಿಯ ಅಷ್ಟಾಧ್ಯಾಯಿ ಮತ್ತು ಗಾಣಪತದಲ್ಲಿ ಉಲ್ಲೇಖಿಸಲಾಗಿದೆ. ಇವರ ಇತರ ಉಲ್ಲೇಖಗಳಿವೆ ಅವುಗಳೆಂದರೆ ಮಹಾಭಾರತ, ಮಹಾಮಯೂರಿ, ಬೃಹತ್‍ಸಂಹಿತಾ, ಪುರಾಣಗಳು, ಚಂದ್ರವ್ಯಾಕರಣ ಮತ್ತು ಕಾಶಿಕಾದಲ್ಲಿ. ಉಲ್ಲೇಖಗಳು ಮುಂಚಿನ ಕಾಲದಿಂದ ಮಧ್ಯಯುಗೀನ ಕಾಲದವರೆಗಿನ ಬರಹಗಳಲ್ಲಿ ವ್ಯಾಪಿಸಿರುವುದರಿಂದ, ಬಹುಶಃ ಯೌಧೇಯರ ಕಾಲಕ್ರಮ ಕ್ರಿ.ಪೂ. ೫೦೦ರಷ್ಟು ಮುಂಚಿನಿಂದ ಕ್ರಿ.ಶ. ೧೨೦೦ರ ವರೆಗೆ ವ್ಯಾಪಿಸಿತ್ತು. ಅವರ ಅಧಿಕಾರದ ಉತ್ತುಂಗ ಸುಮಾರು ಕ್ರಿ.ಪೂ. ೨೦೦ ರಿಂದ ಕ್ರಿ.ಶ. ೪೦೦ರ ವರೆಗೆ ಇತ್ತು.
ಯೌಧೇಯರು ಆಗ್ನೇಯ ಪಂಜಾಬ್, ಹರ್ಯಾಣಾ ಮತ್ತು ಉತ್ತರ ರಾಜಸ್ಥಾನವನ್ನು ಆಳುತ್ತಿದ್ದರು. ತನ್ನ ಬೃಹತ್‍ಸಂಹಿತಾದಲ್ಲಿ ವರಾಹಮಿಹಿರನು ಅವರನ್ನು ಭಾರತದ ಉತ್ತರ ವಿಭಾಗದಲ್ಲಿ ಇರಿಸಿದನು.
ಪುರಾಣಗಳು (ಉದಾ. ಬ್ರಹ್ಮಾಂಡ, ವಾಯು, ಬ್ರಹ್ಮ ಮತ್ತು ಹರಿವಂಶ) ಯೌಧೇಯರನ್ನು ಉಸೀನರ ಮತ್ತು ನೃಗುರ ವಂಶಸ್ಥರೆಂದು ವರ್ಣಿಸುತ್ತವೆ.[೧]
ಮಥುರಾದ ಸ್ವಲ್ಪ ವಾಯವ್ಯದಲ್ಲಿ, ಹರಿಯಾಣಾದ ಪ್ರದೇಶದಲ್ಲಿ, ಇಂಡೊ-ಗ್ರೀಕರು ಮತ್ತು ಯೌಧೇಯರ ಅಸಂಖ್ಯ ನಾಣ್ಯಗಳು ಸಿಕ್ಕಿವೆ, ಮತ್ತು ಇದು ಅತಿಕ್ರಮಿಸುವ ಅಥವಾ ಅನುಕ್ರಮದ ಆಳ್ವಿಕೆಯ ಅವಧಿಗಳನ್ನು ಸೂಚಿಸುತ್ತದೆ. ಆ ಕಾಲದ ನಂತರ, ಯೌಧೇಯರು ಇಂಡೊ-ಗ್ರೀಕ್ ನಾಣ್ಯಗಳನ್ನು ಹೆಚ್ಚು ನೆನಪಿಗೆ ತರುವ ಶೈಲಿಯಲ್ಲಿ ತಮ್ಮ ಸ್ವಂತ ನಾಣ್ಯಗಳನ್ನು ಟಂಕಿಸಲು ಆರಂಭಿಸಿದರು, ಮತ್ತು ಅರ್ಜುನಾಯನರು ಹಾಗೂ ಯೌಧೇಯರು ಸೇನಾ ವಿಜಯಗಳನ್ನು ತಮ್ಮ ನಾಣ್ಯಗಳ ಮೇಲೆ ಉಲ್ಲೇಖಿಸುತ್ತಾರೆ. ಆ ಹಂತದಲ್ಲಿ ಯೌಧೇಯರು ಒಂದು ಸ್ವತಂತ್ರ ರಾಜ್ಯವಾಗಿದ್ದರು ಎಂದು ಭಾವಿಸಲಾಗಿದೆ.
ನಂತರ, ರುದ್ರದಮನ್‍ನ ಜೂನಾಗಢ್ ಬಂಡೆ ಶಾಸನವು (ಸು. ಕ್ರಿ.ಶ. ೧೫೦) ಯೌಧೇಯರ ಸೇನಾ ಶಕ್ತಿಯನ್ನು ಒಪ್ಪಿಕೊಳ್ಳುತ್ತದೆ, ಆದರೆ ರುದ್ರದಮನ್ ಅಂತಿಮವಾಗಿ ಅವರನ್ನು ಸೋಲಿಸಿದನು ಎಂದು ಈ ಶಾಸನವು ಸಾಧಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ Pargiter, F.E. Ancient Indian Historical Tradition Motilal Banarasidass, Delhi, 1972 pp.109