ಸ್ಪೆನ್ಸರ್ ಟ್ರೇಸಿ
ಸ್ಪೆನ್ಸರ್ ಬೊನಾವೆಂಚರ್ ಟ್ರೇಸಿ (ಏಪ್ರಿಲ್ ೫, ೧೯೦೦-ಜೂನ್ ೧೦, ೧೯೬೭) ಅಮೆರಿಕ ಸಂಯುಕ್ತ ಸಂಸ್ಥಾನದ ಒಬ್ಬ ಚಲನಚಿತ್ರ ವಲಯದ ನಟರು.ತಮಗೆ ದೊರೆತ ವೈವಿಧ್ಯಮಯ ಪಾತ್ರಗಳನ್ನು ಸ್ವಾಭಾವಿಕವಾಗಿಯೂ ಮತ್ತು ಯಶಸ್ವಿಯಾಗಿಯೂ ನಿರ್ವಹಿಸುವುದರಲ್ಲಿ ಹೆಸರಾದವರು. 'ಹಾಲಿವುಡ್ ಜಗತ್ತಿನ ಸ್ವರ್ಣಯುಗ'ವೆಂದು ಪರಿಗಣಿಸಿದ್ದ ಸಮಯದಲ್ಲಿ ಒಬ್ಬ ಮಹತ್ವದ ಅಭಿನಯ ಕರ್ತರುಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟವರು. 'ಸ್ಪೆನ್ಸರ್ ಟ್ರೇಸಿ'ಯವರು ಎರಡು ಬಾರಿ ಸತತವಾಗಿ ಘೋಷಿತ ಉತ್ತಮ ನಟ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದ್ದರು. ಅವರ ಜೊತೆಯಲ್ಲಿ ೯ ಜನ ಕಲಾವಿದರು ನಾಮಿನೇಷನ್ ಗೆ ಪ್ರಯತ್ನಿಸಿದ್ದರು. ಹಿರಿಯ ನಟ, ಸ್ಪೆನ್ಸರ್ ಟ್ರೇಸಿ, ಕ್ಯಾಥರಿನ್ ಹೆಪ್ಬರ್ನ್, ಚಾರ್ಲಿ ಚಾಪ್ಲಿನ್,ಡಿ.ಡಬ್ಲ್ಯು.ಗ್ರಿಫ಼ಿತ್,ಮೇರಿ ಪಿಕ್ ಫೋರ್ಡ್, ಡಗ್ಲಾಸ್ ಫ಼ೇರ್ ಬ್ಯಾಂಕ್ಸ್ ಮುಂತಾದವರೆಲ್ಲಾ ಒಟ್ಟುಗೂಡಿ, 'ಯುನೈಟೆಡ್ ಆರ್ಟಿಸ್ಟ್ಸ್' ಎಂಬಲಾಂಛನದಲ್ಲಿ ಹಲವಾರು ಅತ್ಯುತ್ತಮ ಚಲನಚಿತ್ರಗಳನ್ನು ತಯಾರಿಸಿದರು. ಯುನೈಟೆಡ್ ಆರ್ಟಿಸ್ಟ್ಸ್ ಕಂಪೆನಿ ಹಲವಾರು ಸಮಸ್ಯೆಗಳಿಂದ ಸಾಗುತ್ತಿರುವಾಗ, ಎಂ.ಜಿ.ಎಂ.ಕಂಪೆನಿಯವರು ೧೯೮೧ ರಲ್ಲಿ ಯುನೈಟೆಡ್ ಆರ್ಟಿಸ್ಟ್ಸ್ ಕಂಪೆನಿಯನ್ನು ೩೫೦ ಮಿಲಿಯನ್ ಅಮೆರಿಕನ್ ಡಾಲರ್ ಗೆ ಖರೀದಿಸಿದರು. ಕ್ಯಾಥರಿನ್ ಹೆಪ್ಬರ್ನ್, ಸ್ಪೆನ್ಸರ್ ಟ್ರೇಸಿಯವರ ಪತ್ನಿ. ಪ್ರಚಂಡ ಪ್ರತಿಭೆಯ ಸಾಗರ. ನಟಿಸಿದ ಅತ್ಯುತ್ತಮ ಚಿತ್ರಗಳ ಪಟ್ಟಿ ಬಲುದೊಡ್ಡದು. ದ ಮ್ಯಾಡ್ ಮ್ಯಾಡ್ ಮ್ಯಾಡ್ ವರ್ಲ್ಡ್ ಚಿತ್ರದಲ್ಲಿ ಬಹಳ ಉತ್ತಮ ಅಭಿನಯವನ್ನು ನೀಡಿದ್ದಾರೆ. 'ಗೆಸ್ ಹೂ ಇಸ್ ಕಮಿಂಗ್ ಟು ಡಿನರ್', ಇನ್ನೊಂದು ಅತ್ಯುತ್ತಮ ಚಲನಚಿತ್ರ. ಇದರಲ್ಲಿ ಸಿಡ್ನಿ ಪಾಯ್ಶಿಯರ್ ನಟನೆ ಕೂಡ ಅದ್ಭುತವಾಗಿದೆ.
ಆರಂಭಿಕ ಜೀವನ
[ಬದಲಾಯಿಸಿ]ಟ್ರೇಸಿ ಅವರು ೧೯೦೦ ಏಪ್ರಿಲ್ ೫ ರಂದು ವಿಸ್ಕಾನ್ಸಿನ್ನ ಮಿಲ್ವಾಕೀಯಲ್ಲಿ ಜನಿಸಿದರು. ಕ್ಯಾರೋಲಿನ್ ಬ್ರೌನ್ ಮತ್ತು ಜಾನ್ ಎಡ್ವರ್ಡ್ ಟ್ರೇಸಿ ಅವರ ಎರಡನೆ ಪುತ್ರ.ಸ್ಪೆನ್ಸರ್ ಅವರು ಕ್ರಿಯಾಶೀಲವಾದ ಮಗು ಮತ್ತ್ತು ಶಾಲಾ ಹಾಜರಾತಿ ಕಡಿಮೆಯಿತ್ತು.ಇವರು ಕ್ಯಾಥೊಲಿಕ್ ಆಗಿ ಬೆಳೆದವರು. ಡೊಮಿನಿಕನ್ ಸನ್ಯಾಸಿಗಳು ಇವರ ನಡುವಳಿಕೆಯನ್ನು ಬದಲಾಯಿಸುವುದಾಗಿ ಮಾತು ಕೊಟ್ಟರು.
ನಿಧನ
[ಬದಲಾಯಿಸಿ]ಸ್ಪೆನ್ಸರ್ ಟ್ರೇಸಿಯವರು ದೀರ್ಘಕಾಲ ಕಾಯಿಲೆಯಿಂದ ಬಳಲುತ್ತಿದ್ದು ಹೃದಯಾಘಾತದಿಂದ ೧೯೬೭,ಜೂನ್,೧೦ ರಂದು ಮೃತಪಟ್ಟರು.