ಹಾಲ್ಡನ್ ಕೆಫರ್ ಹಾರ್ಟ್‌ಲೈನ್
ಗೋಚರ
ಹಾಲ್ಡನ್ ಕೆಫ಼ರ್ ಹಾರ್ಟ್‌ಲೈನ್ (1903-83) ದೇಹವಿಜ್ಞಾನದಲ್ಲಿ ಮೂಲಭೂತ ಸಂಶೋಧನೆಗೈದ ಅಮೆರಿಕನ್ ಪ್ರಜೆ. ನರಕೋಶಗಳ ಉಪಾಪಚಯ ಶೋಧನೆ ಈತನ ಪ್ರಧಾನಾಸಕ್ತಿ. ಈ ಕ್ಷೇತ್ರದಲ್ಲಿ ಮುಂದುವರಿದಂತೆ ಅಕ್ಷಿಪಟದ (ರೆಟಿನಾ) ಬಿಡಿಕೋಶಗಳ ಕ್ರಿಯಾತಂತ್ರ ಕುರಿತು ಲಕ್ಷ್ಯ ಸಾಂದ್ರೀಕರಿಸಿದ. ಇದಕ್ಕಾಗಿ ಈತ ಬಲು ಪುಟ್ಟ ಎಲೆಕ್ಟ್ರೋಡುಗಳನ್ನು ಬಳಸಿ ಹಾರ್ಸ್‌ಶೂ ಏಡಿ ಮತ್ತು ಕಪ್ಪೆಗಳ ಕಣ್ಣುಗಳಲ್ಲಿಯ ಬಿಡಿ ತಂತುಗಳನ್ನು ಬೇರ್ಪಡಿಸಿ ಅಭ್ಯಸಿಸಿದ. ಹೀಗೆ ದೃಷ್ಟಿಸಂವೇದದ (ಸೆನ್ಸ್ ಆಫ್ ಸೈಟ್) ಸೂಕ್ಷ್ಮ ಕ್ರಿಯೆಗಳ ಬಗ್ಗೆ ಮಾನವನ ಅರಿವು ವಿಸ್ತಾರವಾಯಿತು. ಈ ಸಾಧನೆಗಾಗಿ ಈತನಿಗೆ 1967ರ ವೈದ್ಯವಿಭಾಗದ ನೊಬೆಲ್ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.[೧][೨][೩][೪][೫][೬][೭]
ಉಲ್ಲೇಖಗಳು
[ಬದಲಾಯಿಸಿ]- ↑ Raju, T. N. (1999). "The Nobel Chronicles". The Lancet. 354 (9178): 605–779. doi:10.1016/S0140-6736(05)77968-X. PMID 10470741. S2CID 53297408.
- ↑ Sulek, K. (1969). "Nobel prize for George Wald, Haldan Keffer Hartline and Ragner Granit in 1967 for discoveries concerning the primary biochemical and physiological phenomena occurring in the process of vision". Wiadomosci Lekarskie. 22 (13): 1258–1259. PMID 4897321.
- ↑ Crescitelli, F. (1968). "The 1967 nobel prizes for physiology or medicine". Vision Research. 8 (4): 333–337. doi:10.1016/0042-6989(68)90103-X. PMID 4939576.
- ↑ Dubois-Poulsen, A. (1968). "The Nobel Prize in Medicine, 1967". Annales d'oculistique. 201 (3): 257–269. PMID 4877173.
- ↑ Bouman, M. A. (1968). "Ragnar Garnit, Haldan Keffer Hartline, George Wald, winners of the Nobel Prize in physiology and medicine". Nederlands Tijdschrift voor Geneeskunde. 112 (1): 23–25. PMID 4875782.
- ↑ "The Nobel prize for physiology or medicine". Nordisk Medicin. 78 (44): 1429–1434. 1967. PMID 4864608.
- ↑ Dowling, J. E.; Ratliff, F. (1967). "Nobel Prize: Three Named for Medicine, Physiology Award". Science. 158 (3800): 468–473. Bibcode:1967Sci...158..468D. doi:10.1126/science.158.3800.468. PMID 4860394. S2CID 177926314.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: